Education: ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ
- ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ
- ರಾಜ್ಯದ 30 ಸಾವಿರ ಬಿಸಿಎಂ ವಿದ್ಯಾರ್ಥಿಗಳಿಗೆ ಅನುಕೂಲ
- ಹಾಸ್ಟೆಲ್‌ನಲ್ಲಿ ಸೌಲಭ್ಯವಿದ್ದರೆ ಮಾತ್ರ ಪ್ರವೇಶ
ಚಿಕ್ಕಬಳ್ಳಾಪುರ (ಸೆ.20) : ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಅರ್ಧ ಮುಗಿದು ಸರ್ಕಾರ ದಸರಾ ರಜೆಗಳನ್ನು ಕೂಡ ಘೋಷಿಸಿದೆ. ಆದರೂ ಬಿಸಿಎಂ ವಿದ್ಯಾರ್ಥಿಗಳಿಗೆ ಸಮರ್ಪಕ ಹಾಸ್ಟಲ್ ಸೌಕರ್ಯ ಕಲ್ಪಿಸಲು ಇನ್ನೂ ಸಾಧ್ಯವಾಗದ ಕಾರಣ ರಾಜ್ಯದಲ್ಲಿ ಬಿಸಿಎಂ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟುವಿದ್ಯಾರ್ಥಿಗಳ ಸಂಖ್ಯೆಬಲವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬರೋಬರಿ 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟಲ್‌ಗಳಲ್ಲಿ ಪ್ರವೇಶ ಸಿಗುವ ಸಾಧ್ಯತೆ ಇದ್ದು ವಿಶೇಷವಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳು ಇರುವುದನ್ನು ಖಾತರಿಪಡಿಸಿಕೊಂಡು ಬೇಡಿಕೆ ಇರುವ ಹಾಸ್ಟಲ್‌ಗಳಲ್ಲಿ ಮಾತ್ರ ಪ್ರವೇಶ ಕೊಡಲು ಸರ್ಕಾರ ಸೂಚಿಸಿದೆ.
ಒಂದು ಸಾವಿರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶೀಘ್ರ ಹಾಸ್ಟೆಲ್: ಕೋಟ ಶ್ರೀನಿವಾಸ ಪೂಜಾರಿ
.54.20 ಕೊಟಿ ಅನುದಾನ ಬೇಕು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಎಲ್ಲಾ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಲ್ಪಿಸುವ ದೃಷ್ಟಿಯಿಂದ ಸ್ಥಳಾವಕಾಶ ಲಭ್ಯವಿತರುವ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟುಸಂಖ್ಯಾಬಲವನ್ನು ಹೆಚ್ಚಿಸಿ ಒಟ್ಟು 30,000 ಹೆಚ್ಚುವರಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ಬೇಡಿಕೆ ಕಂಡು ಬಂದಿದೆ.
ಈ ರೀತಿ ಸಂಖ್ಯಾಬಲವನ್ನು ಹೆಚ್ಚಿಸಿದ್ದಲ್ಲಿ 190 ಮಂದಿ ಅಡುಗೆಯವರು, 328 ಅಡುಗೆ ಸಹಾಯಕರು ಹುದ್ದೆಗಳನ್ನು ಸೃಷ್ಟಿಸಬೇಕಾಗುತ್ತದೆ. ಒಟ್ಟು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಬೋಜನಾ ವೆಚ್ಚ, ಶುಚಿ, ಸಂಭ್ರಮ ಕಿಟ್, ಜಮಖಾನ, ಬೆಡ್‌ಶಿಟ್, ಅಡುಗೆ ಸಿಬ್ಬಂದಿಗೆ ಮಾಸಿಕ ವೇತನ ಸೇರಿ ಒಟ್ಟು ಸರ್ಕಾರಕ್ಕೆ 54.20 ಕೋಟಿ ರು.ಗಳ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು.
ವಿದ್ಯಾಸಿರಿ ಯೋಜನೆ ಹಣ ಬಳಕೆ:
ಈ ಹಿನ್ನೆಲೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ಥಳಾವಕಾಶ ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟುಸಂಖ್ಯಾಬಲವನ್ನು ಹೆಚ್ಚಿಸಲು ಹಾಗೂ ಈ ರೀತಿ ಸಂಖ್ಯಾಬಲವನ್ನು ಹೆಚ್ಚಿಸಿದ್ದಲ್ಲಿ ತಗಲುವ ಹೆಚ್ಚುವರಿ ವೆಚ್ಚವನ್ನು ವಿದ್ಯಾಸಿರಿ ಯೋಜನೆಯಡಿ ಒದಗಿಸಲಾದ ಅನುದಾನದಲ್ಲಿ ಭರಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.
ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಶೇ.25ರಷ್ಟು ಹೆಚ್ಚು ಪ್ರವೇಶಾವಕಾಶ: ಕೋಟ ಶ್ರೀನಿವಾಸ ಪೂಜಾರಿ
ಅಕ್ಟೋಬರ್ ಒಳಗೆ ಪ್ರವೇಶಾತಿ: ಸಂಖ್ಯಾಬಲ ಹೆಚ್ಚಿಸಿರುವ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25 ರಷ್ಟುಹೆಚ್ಚುವರಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳೊಳಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಅರ್ಹ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.