Belagavi; 6 ವರ್ಷಗಳಿಂದ ಇಲ್ಲಿಲ್ಲ ಕನ್ನಡ ಶಿಕ್ಷಕ, ಮಕ್ಕಳಿಗಿಲ್ಲ ಕನ್ನಡ ಪಾಠ!
- ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡದ ಮಕ್ಕಳ ಅರ್ಥನಾದ!
- 6 ವರ್ಷಗಳಿಂದ ಮಕ್ಕಳಿಗಿಲ್ಲ ಕನ್ನಡ ಪಾಠ!
- ಕನ್ನಡ ಮಾತ್ರವಲ್ಲ ವಿಜ್ಞಾನ, ಇಂಗ್ಲೀಷ್ ಶಿಕ್ಷಕರು ಕೂಡ ಇಲ್ಲ
- ಅಷ್ಟೇ ಯಾಕೆ ಮುಖ್ಯೋಪಾಧ್ಯಾಯರೂ ಈ ಶಾಲೆಯಲ್ಲಿಲ್ಲ!
ವರದಿ: ಮುಷ್ತಾಕ್ ಪೀರಜಾದೇ ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಜೂ.1): ಕರ್ನಾಟಕದಲ್ಲಿ (Karnataka) ಕನ್ನಡಿಗನೇ ಸಾರ್ವಭೌಮ ಕನ್ನಡ (Kannada) ಭಾಷೆಯೇ ಮೊದಲು ಎಂಬ ಮಾತಿದೆ ಆದರೆ ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ಕಲಿಸುವ ಶಿಕ್ಷಕರಿಲ್ಲದೆ ಪೋಷಕರು ತಮ್ಮ ಮಕ್ಕಳ ಟಿಸಿ ಕಿತ್ತುಕೊಂಡು ಬೇರೆ ಶಾಲೆಗಳತ್ತ (School) ಮುಖ ಮಾಡುತ್ತಿದ್ದು ಎಷ್ಟೆ ಹೋರಾಟ ಮಾಡಿದ್ರೂ ಸಹ ಶಾಲೆಗೆ ಕನ್ನಡ ಶಿಕ್ಷಕರನ್ನ ನಿಯೋಜಿಸದೆ ಶಿಕ್ಷಣ ಇಲಾಖೆ (Education Department) ನಿರ್ಲಕ್ಷ ತೋರಿಸುತ್ತಿದೆ.
ಕನ್ನಡ ಮಾತ್ರವಲ್ಲ ಈ ಶಾಲೆಯಲ್ಲಿ ವಿಜ್ಞಾನ (science), ಇಂಗ್ಲೀಷ್ (English) ಶಿಕ್ಷಕರು (Teachers) ಮಾತ್ರವಲ್ಲ ಮುಖ್ಯೋಪಾಧ್ಯಯರೂ ಕೂಡ ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ.
Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ
ಶಾಲೆಯ ಮುಂದೆ ಧರಣಿ ಮಾಡ್ತಿರೋ ಪೋಷಕರು. ಮಕ್ಕಳಿಗೆ ಪಾಠ ಮಾಡ್ತಿರೋ ಟೀಚರ್. ಇದು ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ್ ಖುರ್ದ್ ಪಟ್ಟಣದಲ್ಲಿರುವ ಉರ್ದು ಶಾಲೆ (Urdu school). ಸದ್ಯ ಈ ಶಾಲೆ ಜಿಲ್ಲೆಯಲ್ಲಿ ಸದ್ದು ಮಾಡ್ತಿದೆ. ಯಾವುದೋ ಸಾಧನೆ ಮಾಡಿ ಹೆಸರು ಮಾಡ್ತಿಲ್ಲ ಬದಲಾಗಿ ಈ ಶಾಲೆಗೆ ಶಿಕ್ಷಕರಿಲ್ಲ ಎಂಬ ಕಾರಣಕ್ಕೆ ಸದ್ದು ಮಾಡ್ತಿದೆ.
ಕಳೆದ 6 ವರ್ಷಗಳಿಂದ ಇಲ್ಲಿನ ಮಕ್ಕಳು ಕನ್ನಡ ಕಲಿತಿಲ್ಲ. ಮಾತ್ರವಲ್ಲ ವಿಜ್ಞಾನ ಶಿಕ್ಷಕ (Science Teacher) ಹಾಗೂ ಇಂಗ್ಲೀಷ್ ಶಿಕ್ಷಕ (English Teacher ) ಹಾಗೂ ಶಾಲೆಯ ಮುಖ್ಯೋಪಾಧ್ಯಯರೂ ಸಹ ಇಲ್ಲ. ಹೀಗಾಗಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ.
UPSC Shivangi Goyal; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ
1 ರಿಂದ 7ನೇ ತರಗತಿಯವರೆಗೂ 150 ಮಕ್ಕಳು ವ್ಯಾಸಾಂಗವನ್ನ ಇದೇ ಉರ್ದು ಶಾಲೆಯಲ್ಲಿ ಮಾಡುತ್ತಿದ್ದು ಕನ್ನಡ ವಿಷಯ ಭೋದಿಸುವ ಶಿಕ್ಷಕರೇ ಇಲ್ಲ. ಮಹಾರಾಷ್ಟ್ರದ ಗಡಿ ಭಾಗದಲ್ಲಿಯೇ ಇರುವ ಉಗಾರ್ ಖುರ್ದ್ ( Ugar Khurd ) ನಲ್ಲಿ ಈ ರೀತಿ ಪರಿಸ್ಥಿತಿ ಇದ್ದು ಕನ್ನಡ, ಇಂಗ್ಲಿಷ್, ವಿಜ್ಞಾನ ಶಿಕ್ಷಕರಿಲ್ಲದ ಕಾರಣ ಈಗಾಗಲೇ 15 ಜನ ಪೋಷಕರು ತಮ್ಮ ಮಕ್ಕಳ ಟಿಸಿ ತೆಗೆದುಕೊಂಡು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಗಡಿ ಭಾಗದಲ್ಲಿ ಕನ್ನಡ ಶಾಲೆ ಉಳಿಯಬೇಕಾದರೆ ಸರ್ಕಾರ (Karnataka Government) ಹಾಗೂ ಶಿಕ್ಷಣ ಇಲಾಖೆ ಕೂಡಲೇ ಶಿಕ್ಷಕರನ್ನ ನೇಮಕ ಮಾಡಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.
HAMPI KANNADA UNIVERSITY; ಪಠ್ಯ ವಿವಾದದ ನಡುವೆಯೇ ನಾಡೋಜ ಪದವಿ ವಿವಾದ
ಒಟ್ಟಿನಲ್ಲಿ ಜನಪ್ರತಿನಿಧಿಗಳು ಮಾತೆತ್ತಿದರೆ ಕನ್ನಡ ಅಳಿವು ಉಳಿವಿನ ಬಗ್ಗೆ ಮಾರುದ್ದ ಭಾಷಣ ಮಾಡುತ್ತಾರೆ. ಆದರೆ ವಾಸ್ತಾವಂಶ ನೋಡಿದ್ರೆ ಈ ರೀತಿಯಾಗಿದ್ದು ಗಡಿಭಾಗದ ಉರ್ದು ಶಾಲೆಗೆ ಕನ್ನಡ ಶಿಕ್ಷಕರ ನೇಮಕ ಮಾಡಬೇಕಿದೆ. ಆ ಕೆಲಸವನ್ನ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಮಾಡ್ತಾರಾ ಕಾದು ನೋಡಬೇಕು.