Hampi Kannada University; ಪಠ್ಯ ವಿವಾದದ ನಡುವೆಯೇ ನಾಡೋಜ ಪದವಿ ವಿವಾದ

  • ವಿಶ್ವವಿದ್ಯಾಲಯದ ನಿಯಮದಿಂದಾಗಿ ಪದವಿ ಪುರಸ್ಕೃತರ ಅಸಮಾಧಾನ
  • ಹೆಸರಿನ ಹಿಂದೆ ನಾಡೋಜ ಪದವಿ ಉಪಾದಿ ಬಳಸದಂತೆ ಹೊಸ ನಿಯಮ
  • ವಿವಾದದ ಕಿಡಿ ಹೆಚ್ಚಿದ್ದು ಪದವಿ ವಾಪ್ಸಿಗೆ ಚಾಲನೆ  ಕೊಡ್ತಾರಾ ಗಣ್ಯರು
Nadoja award controversy in Hampi Kannada University gow

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ವಿಜಯನಗರ (ಜೂ.1) : ಪಠ್ಯಪುಸ್ತಕ ವಿವಾದ (Textbook row) ಬೆನ್ನಲ್ಲೇ ಇದೀಗ ಗೌರವ ನಾಡೋಜ ಪದವಿಯ ಉಪಾದಿ ಬಳಕೆ ವಿವಾದಕ್ಕೆ ಕಿಡಿ ಹಚ್ಚಿದೆ ಹಂಪಿ ಕನ್ನಡ ವಿಶ್ವವಿದ್ಯಾಲಯ. ಈ ಹಿಂದೆ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದಂತೆ ಇದೀಗ ಮತ್ತೊಮ್ಮೆ ನಾಡೋಜ ಪದವಿ ಪಡೆದ ಗಣ್ಯರು ಪದವಿ ವಾಪಸ್ಸಿಗೆ ನಾಂದಿ ಹಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇಷ್ಟು ದಿನಗಳ ಕಾಲ ಇಲ್ಲದ ವಿವಾದ ಈಗೇಕೆ ಅನ್ನೋದು ಹಲವರ ಪ್ರಶ್ನೆಯಾದ್ರೇ, ಪದವಿ ಕೊಟ್ಟ ಮೇಲೆ ಅದನ್ನು ನಾವು ಬಳಕೆ ಮಾಡೋದ್ರಲ್ಲಿ ತಪ್ಪೇನು ಅನ್ನೋದು ಮತ್ತೊಬ್ಬರ ವಾದವಾಗಿದೆ.
 
ವಿವಾದವೇನು?:  ಸಾಮಾನ್ಯವಾಗಿ ಯಾರಿಗಾದ್ರೂ ಗಣ್ಯರಿಗೆ ಸಾಹಿತಿಗಳಿಗೆ ಗೌರವ ಡಾಕ್ಟರೇಟ್ (Doctorate) ಅಥವಾ ನಾಡೋಜ ಪದವಿಯನ್ನು (Nadoja Award) ನೀಡಿದಾಗ ಅದನ್ನು ಅವರು ತಮ್ಮ ಹೆಸರಿನ ಹಿಂದೆ ಉಪಾದಿಯಾಗಿ ಬಳಸಿಕೊಳ್ಳುವುದು ವಾಡಿಕೆ. ಆದ್ರೇ, ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi Kannada University) ನೀಡುವ ಪ್ರತಿಷ್ಠಿತ ' ನಾಡೋಜ ಗೌರವ ಪದವಿ ಪುರಸ್ಕೃತರು ತಮ್ಮ ಹೆಸರಿನ  ಹಿಂದೆ ಉಪಾದಿ ಬಳಸದಂತೆ ನಿಯಮ ರೂಪಿಸಿದೆ.

UPSC Shivangi Goyal; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ

ಇತ್ತೀಚೆಗೆ ನಡೆದ ಕನ್ನಡ ವಿವಿಯ ಕಾರ್ಯಕಾರಿ ಸಮಿತಿಯಲ್ಲಿ 210 ನೇ ಕೈಗೊಂಡ ನಿರ್ಣಯಕ್ಕೆ ವಿಶ್ವವಿದ್ಯಾಲಯದ (University) ಸಿಂಡಿಕೇಟ್ ಸಭೆಯಲ್ಲಿಯೂ ಸಮ್ಮತಿಸಲಾಗಿದೆ. ಸದ್ದಿಲ್ಲದೇ ವಿಶ್ವವಿದ್ಯಾಲಯ ತೆಗೆದುಕೊಂಡಿರೋ ಈ ನಿರ್ಧಾರಕ್ಕೆ ನಾಡೋಜ ಪದವಿ ಪುರಸ್ಕೃತರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಪದವಿಯನ್ನು ಮರಳಿಸೋ ಕುರಿತು ಕೂಡ ಚರ್ಚಿಸಲು ನಿರ್ಧಾರ ಮಾಡಿದ್ದು, ಎಲ್ಲರನ್ನು ಒಂದೇಡೆ ಸೇರಿಸೋ ಪ್ರಯತ್ನವನ್ನು ನಡೆಸಿದ್ದಾರೆ.
 
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ (kannada sahitya parishat) ಅಧ್ಯಕ್ಷರಾದ ಮಹೇಶ್ ಜೋಶಿ (Mahesh Joshi) ಅವರು, ಕನ್ನಡ ವಿವಿಯಿಂದ ನಾಡೋಜ ಗೌರವಕ್ಕೆ ಪಡೆದಿದ್ರು.  ತಮ್ಮ ಹೆಸರಿನ ಹಿಂದೆ ( ನಾಡೋಜ ಮಹೇಶ ಜೋಷಿ ) ಈ ಉಪಾದಿಯನ್ನು  ಬಳಸಿಕೊಳ್ಳಬಹುದೇ ಎಂದು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇದನ್ನು ವಿಶ್ವವಿದ್ಯಾಲಯದ ಆಡಳಿತ ಪರಿಶೀಲಿಸಿ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಸಮಗ್ರ ಚರ್ಚಿಸಿ ಯಾವುದೇ ಕಾರಣಕ್ಕೂ ಹೆಸರಿನ ಹಿಂದೆ ಉಪಾದಿಯನ್ನು  ಬಳಸದಂತೆ ಆದೇಶಿಸಿತ್ತು. ಇದು ಸಾಕಷ್ಟು ಅಸಮಾಧಾನ ಮೂಡಿಸಿದೆ. 

HUBBALLI; ವಿರೋಧದ ನಡುವೆಯೂ ಅನಧಿಕೃತ ಕಟ್ಟಡಗಳ ತೆರವು ಆರಂಭ!
 
ಡಾಕ್ಟರೇಟ್ ಬದಲಿಗೆ ನಾಡೋಜ: ಸಾಮಾನ್ಯವಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರತಿಷ್ಠಿತರಿಗೆ ಗೌರವ ಡಾಕ್ಟರೇಟ್ ನೀಡೋದು ವಾಡಿಕೆ. ಆದ್ರೆ, ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ಹುಟ್ಟಿಕೊಂಡಿರೋ  ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಬದಲಿಗೆ ವಿಶೇಷವಾಗಿ ಪ್ರತಿವರ್ಷ ನುಡಿಹಬ್ಬದ  ವೇಳೆ ಗಣ್ಯರಿಗೆ 'ನಾಡೋಜ' ಪದವಿ ನೀಡಿ ಗೌರವಿಸುತ್ತಿತ್ತು.  ಇದೀಗ ಅದರ ಬಳಕೆ ವಿಚಾರದಲ್ಲಿ ಸಾಕಷ್ಟು ಪರವಿರೋಧ ಚರ್ಚೆಯಾಗುತ್ತಿದೆ.
 
ಇದುವರೆಗೆ 30 ನುಡಿಹಬ್ಬಗಳು  ನಡೆದಿವೆ: ಈವರೆಗೂ ನಡೆದ 30 ನುಡಿಹಬ್ಬಗಳಲ್ಲಿ 92 ಕ್ಕೂ ಹೆಚ್ಚು ಮಹಾನಿಯರಿಗೆ 'ನಾಡೋಜ ' ಗೌರವ ಪದವಿ ನೀಡಿ ಗೌರವಿಸಲಾಗಿದೆ.  ಪು.ತಿ.ನರಸಿಂಹಾಚಾರ್ , ಶಿವರಾಮ ಕಾರಂತ್ , ಪುಟ್ಟರಾಜ ಗವಾಯಿ , ಗಂಗೂಬಾಯಿ ಹಾನಗಲ್ , ಜಿ.ಎಸ್ . ಶಿವರುದ್ರಪ್ಪ , ಪಾಟೀಲ್ ಪುಟ್ಟಪ್ಪ ನಿಜಲಿಂಗಪ್ಪ , ಚಿತ್ರನಟ ಡಾ.ರಾಜ್ ಕುಮಾರ್ , ಭೀಮಸೇನ್ ಜೋಶಿ , ಚಂದ್ರಶೇಖರ್ ಕಂಬಾರ , ಸರೋಜಿ ಮಹಿಷಿ , ಯು.ಆರ್ . ಅನಂತ್ ಮೂರ್ತಿ , ಸಾಲುಮರದ ತಿಮ್ಮಕ್ಕ , ಪ್ರೊ. ಬರಗೂರು ರಾಮಚಂದ್ರಪ್ಪ ಡಾ.ಎಂ.ಎಂ. ದೇವನೂರು ಮಹಾದೇವ,  ಗೊ.ರು.ಚನ್ನಬಸಪ್ಪ ಭಾಷ್ಯಂ ಸ್ವಾಮೀಜಿ, ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ನಾಡೋಜ ನೀಡಿ ಪದವಿಯೊಂದಿಗೆ ಗೌರವಿಸಲಾಗಿದೆ .

Latest Videos
Follow Us:
Download App:
  • android
  • ios