ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು (ಐಐಎಂ-ಬಿ) 2020 ರ ಎಜುನಿವರ್ಸಲ್ ಶ್ರೇಯಾಂಕದಲ್ಲಿ ಸೆಂಟ್ರಲ್ ಏಷ್ಯಾದ ಅತ್ಯುತ್ತಮ ಬಿ-ಸ್ಕೂಲ್‌ಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಈ ಮೂಲಕ ದೇಶದ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರು ಮಹಾನಗರಕ್ಕೆ ಮತ್ತೊಂದು ಗರಿ ಮೂಡಿದೆ.

ಈ ಪಟ್ಟಿಯಲ್ಲಿ ಐಐಎಂ-ಬೆಂಗಳೂರು ಜೊತೆಗೆ ಕಾಣಿಸಿಕೊಂಡ ಭಾರತದ ಇನ್ನೆರಡು ಬಿಸಿನೆಸ್ಕೂಲ್‌ಗಳೆಂದರೆ ಐಐಎಂ-ಅಹ್ಮದಾಬಾದ್, ಐಐಎಂ ಕಲ್ಕತ್ತಾ. ಪ್ರಸಕ್ತ ಸಾಲಿನ ವಾರ್ಷಿಕ ಎಜುನಿರ್ವಸಲ್ 3 ಡಿ ಸಮಾವೇಶದಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಎಜುನಿರ್ವಸಲ್ ಜಾಗತಿಕ ರೇಟಿಂಗ್ ಏಜೆನ್ಸಿಯಾಗಿದ್ದು, ವಿಶೇಷವಾಗಿ ಅದು ಉನ್ನತ ಶಿಕ್ಷಣ ವಲಯದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದೆ ಎಂದು ಐಐಎಂ-ಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು

ಐಐಎಂ-ಬೆಂಗಳೂರು ಸಂಸ್ಥೆಯು ಬೃಹತ್ ಮುಕ್ತ ಆನ್‌ಲೈನ್ ಕೋರ್ಸು(ಎಂಒಒಜಿಸಿಎಸ್) ಆರಂಭಿಸಿದ ದೇಶದ ಮೊದಲ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿದೆ ಮತ್ತು ಎಡಿಎಕ್ಸ್ ಪ್ಲಾಟ್‌ಫಾರ್ಮ್‌ ಮೂಲಕ ಸ್ಟಡಿ ವೆಬ್ಸ್ ಆಫ್ ಆಕ್ಟಿವ್-ಲರ್ನಿಂಗ್ ಫಾರ್ ಯಂಗ್ ಆಸ್ಪೈರಿಂಗ್ ಮೈಂಡ್ಸ್ (SWAYAM) ಕೋರ್ಸ್‌ಗಳಿಗೆ ಮ್ಯಾನೇಜ್ಮೆಂಟ್ ಎಜುಕೇಷನ್  ಸಂಯೋಜನಾ ಸಂಸ್ಥೆಯಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ನಾರ್ಥ್ ಅಮೆರಿಕ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ಸೌತ್ ಅಮೆರಿಕದಲ್ಲಿ ಅನೇಕ ಪಾಲುದಾರ ಯುನಿರ್ವಸಿಟಿಗಳನ್ನು ಹೊಂದಿರುವ ಎಜುನಿರ್ವಸಲ್ ಐಐಎಂ-ಬಿ ಒದಗಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದೆ.

ಸೆಂಟ್ರಲ್ ಏಷ್ಯಾದ ಮೂರು ಅಗ್ರಗಣ್ಯ ಬಿಸಿನೆಸ್ ಸ್ಕೂಲ್‌ಗಳ ಪೈಕಿ ಐಐಎಂ-ಬೆಂಗಳೂರು ಸಂಸ್ಥೆಗೂ ಸಮೀಕ್ಷೆಯಲ್ಲಿ ಶಿಕ್ಷಣ ವಲಯದವರು ವೋಟ್ ಮಾಡಿರುವದು ಗೌರವ ತಂದುಕೊಟ್ಟಿದೆ ಎಂದು ಐಐಎಂ-ಬೆಂಗಳೂರು ನಿರ್ದೇಶಕ ಪ್ರೊಫೆಸರ್ ಟಿ ಕೃಷ್ಣನ್ ಹೇಳಿದ್ದಾರೆ.

ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ 
 

ಕೊರೊನಾ ಸಾಂಕ್ರಾಮಿಕದಿಂದಾಗಿ ಸಹಜ ಪರಿಸ್ಥಿತಿಯ ಅಸ್ತವ್ಯಸ್ತವಾಗಿದ್ದರೂ ಐಐಎಂ- ಬಿ ಎಲ್ಲ ಪ್ರಕ್ರಿಯೆಗಳನ್ನು ಸುರಳಿತಗೊಳಿಸಿಕೊಂಡಿದೆ ಮತ್ತು ಅತ್ಯುತ್ತಮವಾಗಿ ಕಲಿಕೆಯ ನಿರಂತರ ಪ್ರಕ್ರಿಯೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಕೃಷ್ಣನ್. 

ಸೆಂಟ್ರಲ್ ಏಷ್ಯಾದ ಬಿಸ್ಕೂಲ್ ಪೈಕಿ ಐಐಎಂ-ಬಿ ಅಗ್ರಸ್ಥಾನ ನೀಡಿರುವ ಎಜುನಿರ್ವಸಲ್ ರೇಟಿಂಗ್  ಸಂಸ್ಥೆಯ ದೂರದೃಷ್ಟಿಗೆ ಸಂದ ಜಾಗತಿಕ ಮಾನ್ಯತೆಯಾಗಿದೆ.  ಐಐಎಂ-ಬೆಂಗಳೂರು ಅಂತಾರಾಷ್ಟ್ರೀಯವಾಗಿ ಪ್ರಸಿದ್ದವಾದ ಸಂಸ್ಥೆಯಾಗಿದ್ದು, ಮ್ಯಾನೇಜ್ಮೆಂಟ್‌, ಇನ್ನೋವೇಷನ್ ಮತ್ತು ಉದ್ಯಮಶೀಲತೆಯಲ್ಲಿ ಶ್ರೇಷ್ಠತೆಯನ್ನು ಬೆಳೆಸುತ್ತಿದೆ.

ಟಾಪ್ 50 ಪಟ್ಟಿಯಲ್ಲೂ ಸ್ಥಾನ ಸಿಕ್ಕಿತ್ತು
ಕೆಲ ತಿಂಗಳ ಹಿಂದೆ ಘೋಷಿಸಲಾದ ಜಗತ್ತಿನ ಟಾಪ್ 50 ಬಿ ಸ್ಕೂಲ್‌ಗಳ ಪಟ್ಟಿಯಲ್ಲೂ ಐಐಎಂ-ಬೆಂಗಳೂರು ಸಂಸ್ಥೆ ಸ್ಥಾನ ಪಡೆದಿತ್ತು. ಮತ್ತು ಈ ಸ್ಥಾನವನ್ನು ಸತತ ಎರಡು ವರ್ಷಗಳಿಂದ ಪಡೆಯುತ್ತಾ ಬಂದಿದೆ. ಫೈನಾನ್ಷಿಯಲ್ ಟೈಮ್ಸ್ ಎಕ್ಸಿಕ್ಯೂಟಿವ್ ಎಜುಕೇಷನ್ 2020ರ ಶ್ರೇಯಾಂಕದಲ್ಲಿ ಈ ಗೌರವ ಸಿಕ್ಕಿತ್ತು. ವಿಶೇಷ ಎಂದರೆ, ಪ್ರತಿಷ್ಠಿತ ಎಕ್ಸಿಕ್ಯೂಟಿವ್ ಎಜುಕೇಷನ್ ಪ್ರೊವೈಡರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆಯಾಗಿದೆ.

ಬೆಂಗಳೂರು, ಹೈದ್ರಾಬಾದ್‌ನಲ್ಲಿ ಗುತ್ತಿಗೆ ಉದ್ಯೋಗಗಳು ಹೆಚ್ಚು?