Asianet Suvarna News Asianet Suvarna News

ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ

ಅಮೆಜಾನ್ ಇಂಡಿಯಾ ಹೊಸದಾಗಿ ಪ್ರಾರಂಭಿಸಿದ ಡೆಲಿವರಿಂಗ್ ಸ್ಮೈಲ್ಸ್ ಅಭಿಯಾನವು ಈ ಮಕ್ಕಳಿಗೆ ವರ್ಚುವಲ್ ಕಲಿಕೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ದೇಣಿಗೆಗಳ ಮೂಲಕ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಎಲ್ಲಾ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.
 

Amazon India helping under underprivileged students education
Author
Bengaluru, First Published Nov 9, 2020, 4:08 PM IST

ಸದ್ಯ ಹಬ್ಬದ ಸೀಸನ್. ಅದರಲ್ಲೂ ದೊಡ್ಡ ಹಬ್ಬ, ದೀಪಾವಳಿಯನ್ನ ಸಂಭ್ರಮಿಸುವ ಕಾಲ. ಇನ್ನೊಂದು ವಾರದಲ್ಲಿ ಬೆಳಕಿನ ಹಬ್ಬ ಬರಲಿದೆ. ಈಗಾಗಲೇ ಶಾಪಿಂಗ್ ಭರಾಟೆ ಜೋರಾಗಿದೆ. ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡೋರ ಸಂಖ್ಯೆ ಜಾಸ್ತಿಯಾಗಿದೆ. ಫ್ಲಿಪ್ ಕಾರ್ಟ್, ಆಮೆಜಾನ್ , ಸ್ನಾಪ್ ಡೀಲ್, ಮಿಂತ್ರಾ ಸೇರಿದಂತೆ ಹಲವು ಕಂಪನಿಗಳು, ಶಾಪಿಂಗ್ ಗಳಲ್ಲಿ ಆಫರ್ ಮೇಲೆ ಆಫರ್‌ ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಆದ್ರೆ ಕೊರೊನಾದಿಂದಾಗಿ ಅದೆಷ್ಟೋ ಕುಟುಂಬಗಳು ಹಬ್ಬ ಮಾಡಲಾಗದ ಪರಿಸ್ಥಿತಿಯಲ್ಲಿವೆ. ಇನ್ನು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೇಗೆ ಸಾಧ್ಯ? ಅಂಥವರ ಮೂಖದಲ್ಲಿ ಸ್ಮೈಲ್ಸ್ ಮೂಡಿಸಲು ಅಮೆಜಾನ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದೆ. ಅದು ಕಷ್ಟದಲ್ಲಿರುವ ಕಾರ್ಮಿಕರು ಮತ್ತು ಅವರ ಮಕ್ಕಳ ಶಿಕ್ಷಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ.ಹಬ್ಬದ ಸಂದರ್ಭದಲ್ಲಿ ಇ- ಕಾಮರ್ಸ್ ನಲ್ಲಿ ಶಾಪಿಂಗ್ ಮಾಡುವುದು ಜಾಸ್ತಿಯಾಗಿದೆ.‌ಇದರ ಲಾಭ ಪಡೆಯಲು ಮುಂದಾಗಿರೋ  ಅಮೆಜಾನ್ ಇಂಡಿಯಾ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ತೀರ್ಮಾನಿಸಿದೆ.

ಕೋವಿಡ್-19 ಮುಂಚೆಯೇ ಆನ್‌ಲೈನ್ ಶಿಕ್ಷಣಕ್ಕೆ ಹೋರಾಡಿದ್ದ ವಿದ್ಯಾರ್ಥಿನಿ!

ಅಮೆಜಾನ್‌ನ ಸಿಎಸ್‌ಆರ್ ಕಾರ್ಯಕ್ರಮಗಳೊಂದಿಗೆ ಪಾಲುದಾರಿಕೆ ಹೊಂದಿರುವ ಎನ್‌ಜಿಒಗಳ ವರದಿಗಳು ಹೇಳೋ ಪ್ರಕಾರ, ತಮ್ಮ ಬಳಿ ಕೆಲಸ ಮಾಡುವ ಶೇ.30 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾಗುವ ಸಾಧನಗಳ ಅಗತ್ಯವಿದೆ ಎಂದು ತಿಳಿಸಿದೆ.  ಆನ್‌ಲೈನ್ ಕಲಿಕೆ ಮುಂದುವರಿಯುವುದರೊಂದಿಗೆ, ಅಮೆಜಾನ್ ಇಂಡಿಯಾದ ಹೊಸದಾಗಿ ಪ್ರಾರಂಭಿಸಲಾದ ಡೆಲಿವರಿಂಗ್ ಸ್ಮೈಲ್ಸ್ ಅಭಿಯಾನವು ಈ ಮಕ್ಕಳಿಗೆ ವರ್ಚುವಲ್ ಕಲಿಕೆಗೆ ಪ್ರವೇಶವನ್ನು ಒದಗಿಸಲು ತೀರ್ಮಾನಿಸಿದೆ. ದೇಣಿಗೆಗಳ ಮೂಲಕ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಎಲ್ಲಾ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ.

Amazon India helping under underprivileged students education

ಅಮೆಜಾನ್ ಇಂಡಿಯಾದಲ್ಲಿ ಗ್ರಾಹಕರು, ಮೊಬೈಲ್, ಟ್ಯಾಬಗಲೆಟ್ ಕಂಪ್ಯೂಟರ್, ಡೊಂಗಲ್ಸ್ ನಂತಹ ಅತೀ ಕಡಿಮೆ ಬೆಲೆಯ ಸಾಧನಗಳನ್ನು ಸುಲಭವಾಗಿ ಖರೀದಿಸಬಹುದು. ಹಾಗೇ ವಿಶ್ ಲಿಸ್ಟ್ ನಲ್ಲಿರುವ ಅಮೆಜಾನ್ ಗಿಫ್ಟ್ ಸ್ಮೈಲ್ ಪೇಜ್ ಮೂಲಕ ಸುಮಾರು 10ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು. ಈ ವೇಳೆ ಗ್ರಾಹಕರು, ಅಮೆಜಾನ್ ಮೂಲಕ ಡೊನೇಷನ್ ಪೇ ಮಾಡಬಹುದು. ಗ್ರಾಹಕರ ಈ ಚಿಂತನಶೀಲ ಕೊಡುಗೆಗಳು ಭಾರತದ ಅನೇಕ ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅಗತ್ಯವಿರುವ ಅನೇಕರ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಉಪಕ್ರಮದೊಂದಿಗೆ, ಅಮೆಜಾನ್ ಇಂಡಿಯಾ  ಪಾರದರ್ಶಕತೆ ಮತ್ತು ಆಶ್ವಾಸಿತ ವ್ಯಾಪಾರಿ ಅನುಕೂಲತೆಯೊಂದಿಗೆ ಸ್ಮೈಲ್‌ಗಳನ್ನು ತಲುಪಿಸುವಂತೆ ನೋಡಿಕೊಳ್ಳುತ್ತದೆ.

ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?
 
ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಮತ್ತು ಶಿಶುಪಾಲನಾ ಕೇಂದ್ರಗಳು ಮಕ್ಕಳಿಗಾಗಿ ಕೆಲಸ ಮಾಡುವ 18 ಎನ್‌ಜಿಒಗಳ ಸಹಭಾಗಿತ್ವದಲ್ಲಿ 4ಜಿ ಇರುವ 5 ಸಾವಿರ ಟ್ಯಾಬ್ಲೆಟ್ ಕಂಪ್ಯೂಟರ್‌ಗಳನ್ನು ಅಮೆಜಾನ್ ಕಂಪನಿಯು ನೇರವಾಗಿ ದಾನ ಮಾಡುತ್ತಿದೆ. ಇದಕ್ಕೆ ಪ್ರಥಮ್ ಎಜುಕೇಶನ್ ಫೌಂಡೇಶನ್, ಇಂಡಿಯಾ ಸ್ಟೆಮ್ ಫೌಂಡೇಶನ್ ಹಾಗೂ ಪೀಪುಲ್ ನಂತಹ ಪ್ರಮುಖ ಎನ್ ಜಿಓ ಗಳು ಕೂಡ ಬೆಂಬಲ ಸೂಚಿಸಿವೆ.

ಅಮೆಜಾನ್.ಇನ್‌ನ ವಿಪಿ ಮನೀಶ್ ತಿವಾರಿ, “ನಾವು ಕಾರ್ಯನಿರ್ವಹಿಸುವ ಸಮುದಾಯಗಳಲ್ಲಿ ವ್ಯತ್ಯಾಸವನ್ನುಂಟು ಮಾಡಲು ಯಾವಾಗಲೂ ಬದ್ಧರಾಗಿದ್ದೇವೆ. ಈ ಹಬ್ಬದ ಸಂದರ್ಭದಲ್ಲಿ ಸ್ಮೈಲ್ಸ್ , ನಮ್ಮ ಸಮುದಾಯದ ಸದಸ್ಯರ ಜೀವನದಲ್ಲಿ ಒಂದು ಸಣ್ಣ ಕಾರ್ಯದ ಮೂಲಕ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತದೆ. ಈ ವರ್ಷ ಬಡವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿರುವುದರಿಂದ, ಈ ಮಕ್ಕಳಿಗೆ ಆನ್ ಲೈನ್ ಕಲಿಕೆಗೆ ಅನುಕೂಲವಾಗುವಂತೆ ಮತ್ತು ಅವರ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ, ನಾವು ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತೇವೆ. ಅನೇಕ ವಿದ್ಯಾರ್ಥಿಗಳ ಮುಖದಲ್ಲಿ ನಗು ಮೂಡಿಸುವುದನ್ನು ಮುಂದುವರಿಸುತ್ತೇವೆ. ನಿಮ್ಮ ಮೇಲೆ ಅವಲಂಬಿತವಾಗಿ, ಕಡಿಮೆ ಆದಾಯದ ಸಮುದಾಯಗಳ ಮಕ್ಕಳನ್ನು ಆನ್‌ಲೈನ್‌ನಲ್ಲಿ ಈ ಡಿಜಿಟಲ್ ಯುಗದಲ್ಲಿ ಕಲಿಯಲು 5 ಸಾವಿರ  4 ಜಿ ಹೊಂದಿರುವ ಟ್ಯಾಬ್ಲೆಟ್‌ಗಳನ್ನು ದಾನ ಮಾಡುವ ಮೂಲಕ ನಾವು ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ" ಎಂದು ಹೇಳುತ್ತಾರೆ.

ಆರೋಗ್ಯ ಮತ್ತು ಪೋಷಣೆ, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣ, ಶಿಕ್ಷಣ, ವಿಭಿನ್ನ ಸಾಮರ್ಥ್ಯದವರ ಬಗ್ಗೆ ಕಾಳಜಿ, ವಿಪತ್ತು, ಸಾಂಕ್ರಾಮಿಕ ಹಾವಳಿ ಮತ್ತು ಕೌಶಲ್ಯ- ಹೀಗೆ ನಾನಾ ಕಾರಣಗಳನ್ನು ಇಟ್ಟುಕೊಂಡು ಅವರ ಏಳ್ಗೆಗಾಗಿ ಶ್ರಮಿಸುತ್ತಿರುವ ಹಾಗೂ ಅವರಿಗೆ ಜೀವನೋಪಾಯ ಒದಗಿಸುವ ಸುಮಾರು 50ಕ್ಕೂ ಹೆಚ್ಚು ಎನ್‌ಜಿಒಗಳಿಗೆ ಅಮೆಜಾನ್‌ನ ಗಿಫ್ಟ್ ಸ್ಮೈಲ್ ಪುಟದ ಮೂಲಕ ನೀವು ದೇಣಿಗೆ ನೀಡಬಹುದು. ಈ ಮೂಲಕ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಮುಖದಲ್ಲಿ ನಗು ತರಿಸಬಹುದು. ಪರೋಕ್ಷವಾಗಿ ನೀವು ಅವರೊಂದಿಗೆ ಹಬ್ಬ ಆಚರಿಸಿದ ಖುಷಿ ಅನುಭವಿಸಬಹುದು.

ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!

Follow Us:
Download App:
  • android
  • ios