Asianet Suvarna News Asianet Suvarna News

ಬೆಂಗಳೂರು, ಹೈದ್ರಾಬಾದ್‌ನಲ್ಲಿ ಗುತ್ತಿಗೆ ಉದ್ಯೋಗಗಳು ಹೆಚ್ಚು?

ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳು ಮಾಹಿತಿ ತಂತ್ರಜ್ಞಾನದಲ್ಲಿ ದೇಶದ ಮುಂಚೂಣಿಯ ನಗರಗಳು. ಹಾಗಾಗಿ, ಸಹಜವಾಗಿಯೇ ಈ ನಗರಗಳಲ್ಲಿ ಗುತ್ತಿಗೆ ಆಧಾರಿತ ಉದ್ಯೋಗಾವಕಾಶಗಳು ದೇಶದಲ್ಲೇ ಹೆಚ್ಚು ಎಂದು ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ. 
 

Bengaluru and Hyderabad are leading in maximum demand from contractors
Author
Bengaluru, First Published Nov 13, 2020, 6:09 PM IST

ಕೋವಿಡ್ 19 ಸಾಂಕ್ರಾಮಿಕ ರೋಗವು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಂಸ್ಥೆಗಳಲ್ಲಿ ಗುತ್ತಿಗೆ ಕೆಲಸದ ಒಪ್ಪಂದದಂತಹ ರಚನಾತ್ಮಕ ಬದಲಾವಣೆಗಳನ್ನು ಮಾಡುವ ಅಗತ್ಯವನ್ನು ಪ್ರಚೋದಿಸುತ್ತದೆ. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ‌ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಅದು ಬೆಳಕಿಗೆ ಬಂದಿದ್ದು, ಗುತ್ತಿಗೆ ಉದ್ಯೋಗ ಒಪ್ಪಂದ ಬೇಡಿಕೆಯಲ್ಲಿ ಮುಂಚೂಣಿಯಲ್ಲಿದೆ.

ಒಪ್ಪಂದದ ಉದ್ಯೋಗ ಮಾರುಕಟ್ಟೆ ಟೆಕ್ ಫೈಂಡರ್  ಸಮೀಕ್ಷೆ ಪ್ರಕಾರ, ಹೆಚ್ಚಾಗಿ ಗುತ್ತಿಗೆ  ಉದ್ಯೋಗಿಗಳನ್ನ ಸೆಳೆಯುವ ಮೂಲಕ ಬೆಂಗಳೂರು ಹಾಗೂ ಹೈದ್ರಾಬಾದ್ ಭಾರತದ ಸಿಲಿಕಾನ್ ವ್ಯಾಲಿಗಳು ಎಂಬ ಪಟ್ಟವನ್ನು ಉಳಿಸಿಕೊಂಡಿವೆ. ಕರ್ನಾಟಕದ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಶೇಕಡಾ 29 ರಷ್ಟು ಗುತ್ತಿಗೆ ಕೆಲಸ ನೀಡುತ್ತಿದ್ರೆ, ತೆಲಂಗಾಣದ ಹೈದ್ರಾಬಾದ್ ಹಾಗೂ ವಾರಂಗಲ್ ನಲ್ಲಿ ಶೇಕಡಾ 24ರಷ್ಟು ಕಾಂಟ್ರಾಕ್ಟ್ ಉದ್ಯೋಗಗಳನ್ನ ಒದಗಿಸಲಾಗುತ್ತಿದೆ.

ಇಂಟಿರೀಯರ್ ಡಿಸೈನ್ ಕೋರ್ಸು ಕಲಿತರೆ ಕೆಲಸ ಗ್ಯಾರಂಟಿ

ಮಹಾರಾಷ್ಟ್ರ (ಮುಂಬೈ, ಪುಣೆ, ಮತ್ತು ನಾಗ್ಪುರ), ತಮಿಳುನಾಡು (ಚೆನ್ನೈ ಮತ್ತು ಕೊಯಮತ್ತೂರು) ಮತ್ತು ದೆಹಲಿ (ದೆಹಲಿ ಮತ್ತು ನವದೆಹಲಿ) ಕ್ರಮವಾಗಿ ಶೇ 18, 15 ಮತ್ತು 14 ರಷ್ಟು ಬೇಡಿಕೆ ಹೊಂದಿವೆ ಎಂದು ಸಮೀಕ್ಷಾ ವರದಿ ಹೇಳಿದೆ.

ದೇಶದ ಗುತ್ತಿಗೆ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಪ್ರವೃತ್ತಿಗಳನ್ನು ಕಂಡುಹಿಡಿಯಲು ಟೆಕ್ ಫೈಂಡರ್ ಜುಲೈನಿಂದ ಸೆಪ್ಟೆಂಬರ್ ನಡುವೆ ದೇಶಾದ್ಯಂತ 42,000 ಗುತ್ತಿಗೆದಾರರನ್ನು ಸಮೀಕ್ಷೆ ನಡೆಸಿದೆ. ಸಣ್ಣ ನಗರಗಳಲ್ಲಿಯೂ ಗುತ್ತಿಗೆ ಉದ್ಯೋಗಗಳ ಕಲ್ಪನೆಯು ಉತ್ತಮವಾಗಿ ಬದಲಾಗುತ್ತಿದೆ ಎಂದು ಸಮೀಕ್ಷೆ ತೋರಿಸಿದೆ.

Bengaluru and Hyderabad are leading in maximum demand from contractors

ನಂಬರ್ 1 ಶ್ರೇಣಿಯ ನಗರಗಳಲ್ಲಿ ಒಪ್ಪಂದದ ಉದ್ಯೋಗದಲ್ಲಿ ಶೇಕಡಾ 58ರಷ್ಟು ಬೇಡಿಕೆ ಹೊಂದಿದ್ರೆ, ಶ್ರೇಣಿ 2 ಮತ್ತು 3 ನಗರಗಳಲ್ಲೂ ಒಪ್ಪಂದದ ಉದ್ಯೋಗಗಳಿಗೆ ಕ್ರಮವಾಗಿ ಒಟ್ಟು  ಶೇಕಡಾ 32 ಮತ್ತು 10 ರಷ್ಟು ಸಕಾರಾತ್ಮಕ ಬೇಡಿಕೆಯಿದೆ. ಕುತೂಹಲಕಾರಿ ವಿಚಾರ ಅಂದ್ರೆ, ಇದು ಇಂತಹ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ನಡುವೆಯೂ ಗುತ್ತಿಗೆ ಒಪ್ಪಂದದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ 

ಟೆಕ್ ಫೈಂಡರ್ ಸಮೀಕ್ಷೆಯಲ್ಲಿ  65 ಪ್ರತಿಶತದಷ್ಟು ಪುರುಷರು, 35 ಪ್ರತಿಶತದಷ್ಟು ಮಹಿಳೆಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮಹಿಳೆಯರ ಪ್ರಕಾರ, ಗುತ್ತಿಗೆ ಆಧಾರಿತ ಉದ್ಯೋಗ ಒದಗಿಸುವ ಐಟಿ ವಲಯದಲ್ಲಿ ತಮ್ಮ ಕನಸನ್ನು ಪೂರೈಸಿ ಕೊಳ್ಳಲು ಪ್ರವೇಶಿಸಲು  ಸಹಕಾರಿಯಾಗಿದೆ ಅಂತಾರೆ. ಈ ಗುತ್ತಿಗೆ ಒಪ್ಪಂದದ ಸಮಯ 6 ತಿಂಗಳಿಂದ 1 ವರ್ಷ.

ಇದಿಷ್ಟೇ ಅಲ್ಲ,  ಸುಮಾರು 22 -24 ರ ವಯಸ್ಸಿನ ಕ್ರಾಂಟ್ರಾಕ್ಟ್ ಉದ್ಯೋಗಿಗಳನ್ನು ಸರ್ವೇ ಗೆ ಒಳಪಡಿಸಲಾಗಿದೆ. ಐಟಿ  ಕ್ಷೇತ್ರವಷ್ಟೆ ಅಲ್ಲ, ಔಷಧ ಗಳು, ಮಾರಾಟ ಮತ್ತು ಮಾರುಕಟ್ಟೆ, ದೂರಸಂಪರ್ಕ ಮತ್ತು ವಿಮೆ ವಲಯಗಳಲ್ಲೂ ಹೊಸ ಒಪ್ಪಂದದ ಉದ್ಯೋಗ ಪ್ರವೃತ್ತಿ ಟ್ರೆಂಡ್ ಆಗಿದೆ. ವಾಸ್ತವವಾಗಿ, ಶೇಕಡಾ 70 ರಷ್ಟು ಗುತ್ತಿಗೆದಾರರು ವಿದೇಶದಲ್ಲಿ ಗುತ್ತಿಗೆ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಈ ಬದಲಾವಣೆಯು ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಆಕರ್ಷಣೀಯವಾಗಿದ್ದರೂ, ತಾತ್ಕಾಲಿಕ ಕೆಲಸದ ಆಯ್ಕೆ ಮತ್ತು ಅದರೊಂದಿಗೆ ಬರುವ ಜೀವನಶೈಲಿಯಿಂದ ಉದ್ಯೋಗದಾತರು ಮತ್ತು ವೃತ್ತಿಪರರಿಗೆ ದೀರ್ಘಾವಧಿಯ ಪ್ರಯೋಜನವಾಗಿದೆ. ಈ ಹೊಸ ಪ್ರಪಂಚವು ಈಗಾಗಲೇ ಪ್ರಮುಖ ಸಂಸ್ಥೆಗಳಲ್ಲಿದೆ "ಎಂದು ಟೆಕ್ ಫೈಂಡರ್ ಸ್ಥಾಪಕ ಮತ್ತು ಸಿಇಒ ಪ್ರವೀಣ್ ಮ್ಯಾಡಿರೆ ಹೇಳಿದ್ದಾರೆ.

ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!

Follow Us:
Download App:
  • android
  • ios