ಥಾಯ್ಲೆಂಡ್ ಜತೆ ಶಿಕ್ಷಣ , ಐಟಿ , ಬಿಟಿ ಸಹಕಾರಕ್ಕೆ ರಾಜ್ಯದ ಒಲವು
ಥಾಯ್ಲೆಂಡ್ ದೇಶವು ಶಿಕ್ಷಣ, ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕದ ನೆರವನ್ನು ಕೋರಿದೆ. ಇದಕ್ಕೆ ನಾವು ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರು (ಎ.1): ಉನ್ನತ ಶಿಕ್ಷಣ (Higher Education), ಮಾಹಿತಿ ತಂತ್ರಜ್ಞಾನ (Information Technology) ಮತ್ತು ಜೈವಿಕ ತಂತ್ರಜ್ಞಾನ (Biotechnology) ಕ್ಷೇತ್ರಗಳಲ್ಲಿ ಥಾಯ್ಲೆಂಡ್ (Thailand) ಜತೆ ಸಹಭಾಗಿತ್ವದ ಉಪಕ್ರಮಗಳ ಮೂಲಕ ಸಹಕಾರ ಸ್ಥಾಪನೆಗೆ ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Dr CN Ashwath Narayan) ಹೇಳಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಥಾಯ್ಲೆಂಡ್ ದೇಶದ ಭಾರತೀಯ ಕಾನ್ಸುಲ್ ಜನರಲ್ ನಿಟಿರೂಜ್ ಫೋನ್ ಪ್ರಸೆರ್ಟ್ ನೇತೃತ್ವದ ನಿಯೋಗದೊಂದಿಗೆ ಅವರು ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಥಾಯ್ಲೆಂಡ್ ದೇಶವು ಶಿಕ್ಷಣ, ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕದ ನೆರವನ್ನು ಕೋರಿದೆ. ತಮ್ಮಲ್ಲಿಗೆ ಬಂದು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳನ್ನು ತೆರೆಯುವಂತೆಯೂ ಅದು ಕೋರಿದೆ. ಇದಕ್ಕೆ ನಾವು ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ ಎಂದರು.
ಆ ರಾಷ್ಟವು ಪ್ರವಾಸೋದ್ಯಮ ಚಟುವಟಿಕೆಗಳನ್ನು ಅವಲಂಬಿಸಿದೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕಿರುವ ತಂತ್ರಜ್ಞಾನದ ನೆರವು ನೀಡಲು ಕೂಡ ತಾವು ಸಿದ್ದ ಎಂದು ಅವರು ತಿಳಿಸಿದರು.
Dutch Student Selling Soul ತನ್ನ ಆತ್ಮವನ್ನೇ NFTಯಲ್ಲಿ ಮಾರಾಟಕ್ಕಿಟ್ಟ ವಿದ್ಯಾರ್ಥಿ!
ಐಟಿ, ಬಿಟಿ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಪ್ರಗತಿಗೆ ದುಡಿಸಿ ಕೊಳ್ಳುವುದು ಸರಕಾರದ ಉದ್ದೇಶವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ ಈ ಕಂಪನಿಗಳ ಪೈಕಿ ಆಸಕ್ತ ಕಂಪನಿಗಳು ಥಾಯ್ಲೆಂಡಿನಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ, ಆ ದೇಶಕ್ಕೆ ನೆರವು ನೀಡುವ ಬಗ್ಗೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ನುಡಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಬಾಂಧವ್ಯವನ್ನು ವರ್ಧಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಶಯವಾಗಿದೆ. ಇದಕ್ಕೆ ತಕ್ಕಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.
Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ
ನವೋದ್ಯಮ ವಲಯದಲ್ಲಿ ಬರ್ಲಿನ್ ಪ್ರಾಂತ್ಯದ ಜತೆ ರಾಜ್ಯದ ಒಡಂಬಡಿಕೆ: ನವೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಮಾರುಕಟ್ಟೆ ವಿಸ್ತರಣೆ ಮತ್ತು ಬಲವರ್ಧನೆಯ ಗುರಿಯೊಂದಿಗೆ ಕರ್ನಾಟಕ ಮತ್ತು ಜರ್ಮನಿಯ ಬರ್ಲಿನ್ ಪ್ರಾಂತ್ಯಗಳು ಒಡಂಬಡಿಕೆಗೆ ಸಹಿ ಹಾಕಿವೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಗುರುವಾರ ರಾತ್ರಿ ವರ್ಚುಯಲ್ ರೂಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಜರ್ಮನಿಯಲ್ಲಿನ ಭಾರತೀಯ ರಾಯಭಾರಿ ಹರೀಶ್ ಪರ್ವತನೇನಿ, ಬರ್ಲಿನ್ ಪ್ರಾಂತ್ಯದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮೈಕೇಲ್ ಬೀಲ್ ಮತ್ತು ಬೆಂಗಳೂರಿನಲ್ಲಿ ಇರುವ ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಫ್ರೆಡರಿಕ್ ಬರ್ಗಿಲಿನ್ ಇದ್ದರು.
ಈ ಬಗ್ಗೆ ಮಾತನಾಡಿರುವ ಸಚಿವರು, ಬೆಂಗಳೂರು ಮತ್ತು ಬರ್ಲಿನ್ ನಗರಗಳೆರಡೂ ನವೋದ್ಯಮಗಳ ಪಾಲಿಗೆ ಅಚ್ಚುಮೆಚ್ಚಿನ ತಾಣಗಳಾಗಿವೆ. ಈ ಒಡಂಬಡಿಕೆಯು ಮುಖ್ಯವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸ್ಮಾರ್ಟ್ ಸಿಟಿ ಅಭಿವೃದ್ಧಿ, ಇಂಡಸ್ಟ್ರಿ 4.0, ಫಿನ್-ಟೆಕ್, ಹೆಲ್ತ್ ಟೆಕ್ ಮತ್ತು ಮಹಿಳಾ ಉದ್ಯಮಿಗಳಿಗೆ ನೆರವು ನೀಡಲಿದೆ ಎಂದಿದ್ದಾರೆ.
ಜರ್ಮನಿಯ ಕಂಪನಿಗಳಾದ ಬಾಶ್, ಟಿ-ಸಿಸ್ಟಮ್ಸ್, ಮರ್ಸಿಡಿಸ್ ಮುಂತಾದ ಕಂಪನಿಗಳು ಅತ್ಯಾಧುನಿಕ ಆವಿಷ್ಕಾರಗಳನ್ನು ನಡೆಸುತ್ತಿವೆ. ಈ ಒಡಂಬಡಿಕೆಯು ಕರ್ನಾಟಕ ಮತ್ತು ಬರ್ಲಿನ್ ನಡುವಿನ ಕೈಗಾರಿಕಾ ಬಾಂಧವ್ಯವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಲಿದೆ ಎಂದು ಅವರು ಬಣ್ಣಿಸಿದ್ದಾರೆ.
ರಾಜ್ಯದ ಹಲವು ನವೋದ್ಯಮಗಳು ಜರ್ಮನಿಯಲ್ಲಿ ವಹಿವಾಟು ನಡೆಸಲು ಉತ್ಸುಕವಾಗಿವೆ. ಅವುಗಳ ಈ ಗುರಿಯು ಒಡಂಬಡಿಕೆಯಿಂದಾಗಿ ಸುಗಮವಾಗಿ ಈಡೇರಲಿದೆ ಎಂದು ಅವರು ಹೇಳಿದ್ದಾರೆ.