ಮನೆ ಮನೆ ತೆರಳಿ ಮಕ್ಕಳ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದ ಪೊಲೀಸ್ ಅಧಿಕಾರಿ
ಶಾಲೆ ಬಿಟ್ಟು ದೂರ ಉಳಿದಿದ್ದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಲುವಾಗಿ ಪೊಲೀಸರೊಬ್ಬರು ಮಕ್ಕಳಿರುವ ಮನೆಯ ಬಳಿ ಹೋಗಿ ಪೋಷಕರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡು: ದೇಶದ ಕಟ್ಟಕಡೆಯ ವ್ಯಕ್ತಿಯೂ ಸುಶಿಕ್ಷಿತನಾಗಬೇಕು. ಯಾರೊಬ್ಬರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಹಲವರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಶಾಲೆಗೆ ಹೋಗದೇ ಮನೆಯಲ್ಲೇ ಉಳಿಯುವವರ ಸಂಖ್ಯೆ ಹೆಚ್ಚಾಗಿದೆ. ಅನೇಕರು ಶಾಲೆ ತೊರೆದು ಬಾಲ ಕಾರ್ಮಿಕರಾಗಿ ಕೆಲಸ ಮಾಡಲು ಮುಂದಾಗುತ್ತಾರೆ. ಹೀಗೆ ಶಾಲೆ ಬಿಟ್ಟು ದೂರ ಉಳಿದಿದ್ದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಲುವಾಗಿ ಪೊಲೀಸರೊಬ್ಬರು ಮಕ್ಕಳಿರುವ ಮನೆಯ ಬಳಿ ಹೋಗಿ ಪೋಷಕರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಪೊಲೀಸ್ ಅಧಿಕಾರಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ತಮಿಳುನಾಡಿನ (Tamilnadu) ತಿರುವಳ್ಳುವರ್ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಹೀಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೇಳಿ ಪೋಷಕರ ಮನವೊಲಿಸಿದವರು. ಶಾಲೆಯಿಂದ ದೂರ ಉಳಿದ ಮಕ್ಕಳ ಮನೆಗೆ ತೆರಳಿದ ಅಧಿಕಾರಿ ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕಾರ್ಯ ಈಗ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಕಣ್ಣಿಗೂ ಬಿದ್ದಿದ್ದು, ಸಧೃಡ ಸಮಾಜ ನಿರ್ಮಿಸಲು ಮುಂದಾದ ಸಬ್ ಇನ್ಸ್‌ಪೆಕ್ಟರ್ (Sub Inspector) ಕಾರ್ಯವನ್ನು ಅವರು ಕೊಂಡಾಡಿದ್ದಾರೆ. ಹೀಗೆ ಮಕ್ಕಳ ಪೋಷಕರಿಗೆ ಜಾಗೃತಿ ಮೂಡಿಸಿದ ಇನ್ಸ್‌ಪೆಕ್ಟರ್ ಹೆಸರು ಪರಮಶಿವಂ, ತಿರುವಲ್ಲೂರು ಜಿಲ್ಲೆಯ ಪೆನ್ನಲುರ್ಪೆಟ್ಟೈನಲ್ಲಿ ಅವರು ತರಬೇತಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 'ಪರಮಶಿವಂ ಕಾರ್ಯ ಬಹಳ ಖುಷಿ ನೀಡಿದೆ. ಪೊಲೀಸ್ ಇಲಾಖೆಯ ಕಾರ್ಯ ಕೇವಲ ಅಪರಾಧ ತಡೆಗಟ್ಟುವುದು ಮಾತ್ರವಲ್ಲ, ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಅವರ ಪಾತ್ರವೂ ಪ್ರಮುಖವಾಗಿದೆ ಎಂದು ಸ್ಟಾಲಿನ್ ಪರಮಶಿವಂ ಅವರನ್ನು ಕೊಂಡಾಡಿದ್ದಾರೆ.
Education news: 5-8ನೇ ಕ್ಲಾಸ್ ಬೋರ್ಡ್ ಪರೀಕ್ಷೇಲಿ ಫೇಲಾದ್ರೆ ಪೂರಕ ಪರೀಕ್ಷೆ?
ಅಂದು ಮರದ ನೆರಳಲ್ಲಿಓದಿ ಶಿಕ್ಷಣ ಪಡೆದ ಹುಡುಗ ಇಂದು 50 ಸಾವಿರ ಕೋಟಿ ರೂ.ಒಡೆಯ!
ಒಂದು ವೇಳೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ, ಭವಿಷ್ಯದಲ್ಲಿ ಬದುಕಿನ ವಾಸ್ತವಗಳನ್ನು ಎದುರಿಸಲು ಮಕ್ಕಳನ್ನು ಸಿದ್ಧಗೊಳಿಸದಿದ್ದರೆ ಮಕ್ಕಳೇ ಅವರನ್ನು ದೂಷಿಸುತ್ತಾರೆ ಎಂದು ಪೊಲೀಸ್ ಅಧಿಕಾರಿ ಪೋಷಕರಿಗೆ ಎಚ್ಚರಿಕೆ ನೀಡಿದರು. ಮಕ್ಕಳನ್ನು ಶಾಲೆಯತ್ತ (School) ಸೆಳೆಯುವ ಸಲುವಾಗಿ ತಮಿಳುನಾಡು ಸಿಎಂ ಸ್ಟಾಲಿನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಟ್ಯಾಲೆಂಟ್ ಸಪೋರ್ಟ್ ಸ್ಕೀಮ್ ಘೋಷಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಏಪ್ರಿಲ್ ಮೊದಲ ವಾರದಲ್ಲಿ ತಿರಾನಾರಿ ಥೆರ್ವು ತಿಟ್ಟಂ ಎಂಬ ಹೊಸ ಪ್ರತಿಭೆಗಳನ್ನು ಬೆಂಬಲಿಸುವ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯ ಅನ್ವಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರೂ 1,000 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ತಿರನಾರಿ ತೇರ್ವು ತಿಟ್ಟಂ ಎಂದರೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮತ್ತು ಪೋಷಿಸುವ ಯೋಜನೆಯಾಗಿದೆ.