KUD Annual Convocation; ಎಂ.ಎ ಪತ್ರಿಕೋದ್ಯಮದಲ್ಲಿ ಸುಜಾತ ಜೋಡಳ್ಳಿಗೆ 9 ಚಿನ್ನದ ಪದಕ!
ಪಂಚಾಯತ್ ಡಿ ದರ್ಜೆ ನೌಕರನ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.
ಧಾರವಾಡ (ಜೂ.7): ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.
ಕವಿವಿ 72 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕುಮಾರ ಮಹಾದೇವ ಸ್ವರ್ಣ ಪದಕ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣ ಪದಕ, ಕೆ. ಎಂ. ರಾಜಶೇಖರಪ್ಪ ಹಿರೇಮಠ ಸ್ವರ್ಣ ಪದಕ, ಮೋಹರೆ ಹನುಮಂತರಾಯ್ ಸ್ವರ್ಣ ಪದಕ, ಕೆ. ಶಾಮರಾವ ಸ್ವರ್ಣ ಪದಕ, ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸ್ಮಾರಕ ಸ್ವರ್ಣ ಪದಕ, ಎಸ್. ವೀರೇಶ್ ನೀಲಕಂಠ ಶಾಸ್ತ್ರಿ ಸಂಗನಹಾಲ ಸ್ವರ್ಣ ಪದಕ, ಆರ್. ಎಸ್. ಚಕ್ರವರ್ತಿ ಸ್ವರ್ಣ ಪದಕ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸ್ವರ್ಣ ಪದಕ ಸೇರಿದಂತೆ ಇಂದುಮತಿ ಡಾ. ಪಾಟೀಲ ಪುಟ್ಟಪ್ಪ ,ಡೆಕ್ಕನ್ ಹೆರಾಲ್ಡ್/ಪ್ರಜಾವಾಣಿ ನಗದು ಪುರಸ್ಕಾರ ಪಡೆದ ಇವರು ಪ್ರಸ್ತುತ ಕಾರಾವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಟಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
PUC TEXTBOOK REVISION ಕೈಬಿಟ್ಟಿಲ್ಲ ಮುಂದೂಡಿದ್ದೇವೆ: ಕೋಟ ಶ್ರೀನಿವಾಸ ಪೂಜಾರಿ
ತಂದೆ, ತಾಯಿ ಹಾಗೂ ನನ್ನ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಗೆಲುವು ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಬಡತನ ಎಂದಿಗೂ ಸಾಧನೆಗೆ ಅಡ್ಡವಾಗೋದಿಲ್ಲ ಅನ್ನೋದನ್ನ ಈ ಯುವತಿ ಸಾಬೀತುಪಡಿಸಿದ್ದಾಳೆ. ಪತ್ರಿಕೋದ್ಯಮ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನ ಪಡೆಯುವ ಮೂಲಕ ಚಿನ್ನದ ಹುಡುಗಿ ಅನ್ನೋ ಬಿರುದು ಪಡೆದುಕೊಂಡಿದ್ದಾಳೆ.
ಹೀಗೆ ಒಂದಲ್ಲ ಎರಡಲ್ಲ ಒಟ್ಟು ಒಂಬತ್ತು ಚಿನ್ನದ ಪದಕಕ್ಕೆ ಮುತ್ತಿಡುತ್ತಿರೋ ಈ ಯುವತಿ ಸಾಧನೆ ನಿಜಕ್ಕೂ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದವಳಾದ ಸುಜಾತ ಜೋಡಳ್ಳಿ ಸದ್ಯ ಚಿನ್ನದ ಹುಡುಗಿಯಾಗಿದ್ದಾಳೆ. ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಖುದ್ದು ರಾಜ್ಯಪಾಲರೆ ಅಚ್ಚರಿಗೊಳಗಾಗುವಂತೆ ಮಾಡಿದ್ದಾಳೆ. ಪತ್ರಿಕೋದ್ಯಮ ವಿಭಾಗದಲ್ಲಿ ಅತಿ ಹೆಚ್ಚು ಚಿನ್ನದ ಪದಕವನ್ನ ಗಿಟ್ಟಿಸಿಕೊಳ್ಳುವುದರ ಮೂಲಕ 2022ರ ವಿಶ್ವ ವಿದ್ಯಾಲಯದ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯಾಗಿದ್ದಾಳೆ. 9 ಚಿನ್ನದ ಪದಕಕ್ಕೆ ಮುತ್ತಿಟ್ಟು ತನ್ನ ಬಡತನವನ್ನ ಮೆಟ್ಟಿ ನಿಂತು ಸಾಧನೆಗೈದಿದ್ದಾಳೆ.
ಕರ್ನಾಟಕ ವಿಶ್ವವಿದ್ಯಾಲಯದ 72 ನೇಯ ವಾರ್ಷಿಕ ಘಟಿಕೋತ್ಸವ
ಬಡತನದ ನಡುವೆಯೇ ಸಾಧನೆ ಮಾಡಿದ ಯುವತಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.
ಮನೆಯಲ್ಲಿ ಬಡತನ ಇದ್ದರೂ ಅದ್ಯಾವುದು ಸಾಧನೆಗೆ ಅಡ್ಡಿಯಾಗದು ಅನ್ನೋ ದೃಢ ನಿರ್ಧಾರದ ಮೂಲಕ 9 ಚಿನ್ನದ ಪದಕವನ್ನ ಪಡೆದು ಸಾಧನೆ ಮಾಡಿದ್ದಾಳೆ. ಮಗಳ ಈ ಸಾಧನೆಗೆ ತಂದೆ ತಾಯಿ ಸಂತಸ ವ್ಯಕ್ತಪಡಿಸಿದ್ದು ಸಾಧನೆಯನ್ನ ಕೊಂಡಿದ್ದಾರೆ.
ಒಟ್ಟಾರೆ ಬಡತನದಲ್ಲೇ ಕಲಿತು ಹೊಸ ದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸ್ನೇಹಿತರು, ಗುರುಗಳು ಶುಭಾಶಯ ಹೇಳಿ ಖುಷಿ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲೇ ಮತ್ತೊಂದು ಸಾಧನೆ ಮಾಡುವ ಉತ್ಸಾಹ ಹೊಂದಿದ್ದು ಆಕೆಯ ಮುಂದಿನ ಜೀವನ ಸಾಧನೆಯಾಗಿರಲಿ ಅನ್ನೋದೇ ಏಷ್ಯಾ ನೆಟ್ ಸುವರ್ಣ ನ್ಯೂಸ್ ನ ಕಳಕಳಿ.