ಕರ್ನಾಟಕ ವಿಶ್ವವಿದ್ಯಾಲಯದ 72 ನೇಯ ವಾರ್ಷಿಕ ಘಟಿಕೋತ್ಸವ

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಜರುಗಿದ ಕವಿವಿ 72 ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಪದವೀಧರರು ದೇಶದ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆಗಳನ್ನು ನೀಡಬೇಕು ಎಂದರು.

karnataka university dharwad 72nd Annual Convocation gow

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಜೂ.7): ಧಾರವಾಡ ಜೈವಿಕ ತಂತ್ರಜ್ಞಾನ, ಔಷಧಿ, ಪರಮಾಣು ಶಕ್ತಿ, ದೂರ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣಾಭಿವೃದ್ಧಿ, ಆರೋಗ್ಯ ಮತ್ತು ಕೃಷಿ ಕೇತ್ರಗಳಲ್ಲಿನ ಭಾರತದ ಸಾಧನೆಯನ್ನು ವಿಶ್ವವೇ ಗುರುತಿಸಿದೆ. ಮಹತ್ವಾಕಾಂಕ್ಷೆಯ ಮತ್ತು ಸ್ವಾಲಂಭಿ ಭಾರತ ನಿರ್ಮಾಣದಲ್ಲಿ ಯುವ ಸಮುದಾಯ ಮಯತ್ವದ ಪಾತ್ರ ನಿರ್ವಹಿಸಬೇಕಾಗಿದೆ ಎಂದು ನವದೆಹಲಿಯ ಇಂಟರ್ ನ್ಯಾಷನಲ್ ಸೆಂಟರ್‌ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ನಿರ್ದೇಶಕರಾದ ಡಾ.ದಿನಕರ ಎಂ.ಸಾಳುಂಕೆ  ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಜರುಗಿದ ಕವಿವಿ 72 ನೇಯ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದರು. ನಮ್ಮ ದೇಶದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಸಾಧನೆಗಳು, ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾರ್ಗದರ್ಶಿಯಾಗಿವೆ. ಹವಾಮಾನ ಬದಲಾವಣೆ ಸಮಸ್ಯೆಗಳಿಗೆ  ಪರಿಹಾರ  ಕಾರ್ಯಕ್ರಮಗಳ ಸಿದ್ದಪಡಿಸುವಿಕೆಯಲ್ಲಿ  ಭಾರತ ಗಣನೀಯವಾದ ಕೊಡುಗೆ ನೀಡಿದೆ. ಭಾರತ ಜೆನರಿಕ್ ಔಷಧಿಗಳ ತಯಾರಿಕೆ ಹಾಗೂ ಪೂರೈಕೆಯಲ್ಲಿ ಪ್ರಮುಖ ದೇಶವಾಗಿದೆ.

ಜಾಗತಿಕವಾಗಿ ನೂರನೇಯ ಸ್ಥಾನದಲ್ಲಿದೆ ವಿಪುಲ ಮಾನವ ಸಂಪನ್ಮೂಲ, ವಿನೂತನ ವಿಜ್ಞಾನ ಮತ್ತು ತಂತ್ರಜ್ಞಾನ, ಕಡಿಮೆ ವೆಚ್ಚದ ಸಂಶೋಧನೆ ಮತ್ತು ಅಭಿವೃದ್ಧಿ ಇವುಗಳು ಜೆನೆರಿಕ್ ಔಷಧಿಗಳ ತಯಾರಿಕೆ ಮತ್ತು ಪೂರೈಕೆಯನ್ನು ಪ್ರೊತ್ಸಾಹಿಸುವ ಅಂಶಗಳಾಗಿವೆ ಎಂದು ಅವರು ಹೇಳಿದರು ಇತ್ತೀಚಿನ ಕೋವಿಡ್ ಸಾಂಕ್ರಾಮಿಕ ರೋಗ ಸಂದರ್ಭದವನ್ನು ಭಾರತ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿದೆ.

ನಿಮ್ಮ ಸೈಕಲ್ ಜೊತೆಗೆ ಮೆಟ್ರೋ ಪ್ರಯಾಣ ಮಾಡಲು BMRCL ಅವಕಾಶ

ನಾವು ಸ್ಥಳೀಯವಾಗಿ ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನಮ್ಮ ರಾಷ್ಟ್ರದ 100 ಕೋಟಿ ಜನರಿಗೆ ಕೋವಿಡ್ 19 ರ ವಿರುದ್ಧ ಲಸಿಕೆಯನ್ನು ನೀಡುವ ಮೂಲಕ ಹಿರಿದಾದ ಸಾಧನೆ ಮಾಡಲಾಗಿದೆ.  ಯುನಿಸೆಫ್ ಗೆ ಶೇ.60 ರಷ್ಟು ಲಸಿಕೆಯನ್ನು ಭಾರತ ಪೂರೈಸಿರುವುದು ನಮ್ಮ ಸಾಧನೆಗೆ ಕೈಗನ್ನಡಿಯಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾನಿಲಯವು ಕಳೆದ 70 ವರ್ಷಗಳಿಂದ  ಮಾನವ ಸಂಪನ್ಮೂಲವನ್ನು ಎಲ್ಲ ಕ್ಷೇತ್ರಗಳಿಗೆ ಕೊಡುಗೆ ನೀಡುವದರೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತನ್ನ ಪಾಲು ಹೊಂದಿದೆ. ದೇಶದ ವೈಜ್ಞಾನಿಕ ಶಕ್ತಿಯ ಮತ್ತು ಹೊಸ ಶಿಕ್ಷಣ ನೀತಿಯ ಹಿನ್ನಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದ ಉನ್ನತ ಶಿಕ್ಷಣ ಸಂಸ್ಥೆ ಆಗಿದೆ ಎಂದು ಡಾ.ಸಾಳುಂಕೆ ತಿಳಿಸಿದರು.

ವಿದ್ಯಾರ್ಥಿಗಳು, ಯುವ ಸಮುದಾಯ ದೇಶಕ್ಕೆ ಅವಶ್ಯವಿರುವ ದೊಡ್ಡ ಶಕ್ತಿ. ಕಷ್ಟಕರ ಸಮಯದಲ್ಲಿ ಮುನ್ನುಗ್ಗುವ ಧೈರ್ಯ ಹೊಂದಬೇಕು.  ವೃತ್ತಿ ಬದುಕನ್ನು ಯೋಜಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಮಾಂತ್ರಿಕ ಸೂತ್ರವಿಲ್ಲ. ವಿದ್ಯಾರ್ಥಿಗಳಾಗಿ ತಾವು ಪಡೆದಿರುವ ಜ್ಞಾನ ಮತ್ತು ಶಿಕ್ಷಣದ ಆಧಾರದ ಮೇಲೆ  ಜೀವನ ಮಾರ್ಗವನ್ನು ರೂಪಿಸಿಕೊಳ್ಳಬೇಕೆಂದು ಡಾ.ದಿನಕರ ಸಾಳುಂಕೆ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.

ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋತ್ ಅವರು ಘಟಿಕೋತ್ಸವದ ಅಧ್ಯಕ್ಷತೆವಹಿಸಿದ್ದರು ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

Koppal; ಭಾರೀ ವಿವಾದದಲ್ಲಿ ಐತಿಹಾಸಿಕ ದೇಗುಲ, ಶಾಸ್ತ್ರೋಕ್ತವಾಗಿ ವಿಗ್ರಹ ಪುನರ್

ಕವಿವಿ ಗೌರವ ಡಾಕ್ಟರೇಟ್ ಪ್ರದಾನ:  ಕರ್ನಾಟಕ ವಿಶ್ವವಿದ್ಯಾಲಯದ 72 ನೇ ವಾರ್ಷಿಕ ಘಟಿಕೋತ್ಸವ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಪ್ರೊ‌.ಶ್ರೀನಿವಾಸ ಕೆ‌.ಸೈದಾಪುರ ಹಾಗೂ ಮನೋಜ ಗೊರ್ಕೆಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಉನ್ನತ ಶಿಕ್ಷಣವು ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆ ನೀಡಬೇಕು :  ಉನ್ನತ ಶಿಕ್ಷಣವು ಏಕ್ ಭಾರತ,ಶ್ರೇಷ್ಠ ಭಾರತ ಹಾಗೂ ಆತ್ಮನಿರ್ಭರ ಭಾರತ ನಿರ್ಮಿಸಲುಪೂರಕವಾಗಬೇಕು. ಪದವೀಧರರು ದೇಶದ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆಗಳನ್ನು ನೀಡಬೇಕು. ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು. ಕರ್ನಾಟಕ ವಿವಿಯು 73 ವರ್ಷಗಳಿಗೂ ಅಧಿಕ ಕಾಲದಿಂದ ಶಿಕ್ಷಣ ಹಾಗೂ ದೇಶದ ವಿಕಾಸಕ್ಕೆ ತನ್ನ ಕೊಡುಗೆಗಳನ್ನು ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ.

ನಾವು ನಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿ ಜನಸಾಮಾನ್ಯರ ಬದುಕಿನ ಏಳ್ಗೆಗೆ ಕಾರಣರಾಗಬೇಕು.ಜೀವನ ಸಾರ್ಥಕ ಪಡಿಸಿಕೊಳ್ಳಲು ನಿಮ್ಮ ಶಿಕ್ಷಣ ವರದಾನವಾಗಿದೆ. ಏಕ ಭಾರತ,ಶ್ರೇಷ್ಠ ಭಾರತ,ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಪಡೆದವರ ಕೊಡುಗೆ ಅಧಿಕವಾಗಿ ಪ್ರಾಪ್ತಿಯಾಗಬೇಕು. ಶಿಕ್ಷಣದ ಪ್ರಸಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಭಾರತ ಸರ್ಕಾರದ ನೂತನ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗಳು,ಕ್ರೀಡೆಗೆ ಆದ್ಯತೆ ಇದೆ. ಕ್ರೀಡೆಗಳ ಮೂಲಕ ಆರೋಗ್ಯ ಭಾರತ, ಸದೃಢ ಕರ್ನಾಟಕ ಕಟ್ಟಬೇಕು  ಎಂದರು.

ಪದವಿಗಳ ಪ್ರಧಾನ 147 ಪಿಹೆಚ್‌ಡಿ,4 ಎಂ.ಫಿಲ್,3943 ಸ್ನಾತಕೋತ್ತರ,17762 ಸ್ನಾತಕ,26 ಕಾನೂನು,119 ಡಿಪ್ಲೊಮಾ ಹಾಗೂ 27 ಸರ್ಟಿಫಿಕೇಟ್ ಕೋರ್ಸುಗಳು ಸೇರಿ ಒಟ್ಟು 948 ಜನರಿಗೆ ಖುದ್ದಾಗಿ ಮತ್ತು 21080 ಜನರಿಗೆ ಅನುಪಸ್ಥಿತಿಯಲ್ಲಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಸ್ವಾಗತಿಸಿ, ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಗಣ್ಯರ ಪರಿಚಯ ಮಾಡಿದರು.

ಕುಲಸಚಿವ ಯಶಪಾಲ್ ಕ್ಷೀರಸಾಗರ,ಮೌಲ್ಯಮಾಪನ‌ ಕುಲಸಚಿವ ಡಾ.ಸಿ.ಕೃಷ್ಣಮೂರ್ತಿ ಹಾಗೂ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಗಣ್ಯರು ಉಪಸ್ಥಿತರಿದ್ದರು ಘಟಿಕೋತ್ಸವದಲ್ಲಿ ಕವಿವಿ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ , ವಿವಿಧ ನಿಖಾಯಗಳ ಡೀನ್ ರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಮತ್ತು ಅವಳಿನಗರದ ಗಣ್ಯರು ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios