ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತೀರ್ಣ, ಪಾವಗಡದ ಶಾಲೆಯೊಂದರಲ್ಲಿ ಪೋಷಕರ ಪ್ರತಿಭಟನೆ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತೀರ್ಣರಾದ ಹಿನ್ನೆಲೆ ಆಕ್ರೋಶಗೊಂಡ ಪೋಷಕರು ಶಾಲೆ ಎದುರು ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

students poor performance Parents protest at Pavagada school after SSLC Exam Result 2024 gow

ಪಾವಗಡ (ಮೇ.10): ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತೀರ್ಣರಾದ ಹಿನ್ನೆಲೆ ಆಕ್ರೋಶಗೊಂಡ ಪೋಷಕರು ಶಾಲೆ ಎದುರು ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ‌ ಮಂಗಳವಾಡ ಗ್ರಾಮದಲ್ಲಿರುವ ತಿರುಮಲ ರಾಘವೇಂದ್ರ ಪ್ರೌಢ ಶಾಲೆ ಎದುರು ಪೊಷಕರು ಪ್ರತಿಭಟನೆ ನಡೆಸಿದ್ದಾರೆ. ಇದೊಂದು ಸರ್ಕಾರಿ ಅನುದಾನಿತ ಪ್ರೌಢಶಾಲೆಯಾಗಿದ್ದು, ಈ ಬಾರಿ 56 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು‌. 17 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.‌

10 ಲಕ್ಷ ಕೊಡಿ ಪೇಪರ್ ಖಾಲಿ ಬಿಡಿ : ನೀಟ್ ಆಕಾಂಕ್ಷಿಗಳಿಗೆ ಶಿಕ್ಷಕನ ಆಮಿಷ, ಎಫ್‌ಐಆರ್ ದಾಖಲು

ಕಳೆದ ಒಂದು ವರ್ಷದಿಂದ ನಾಲ್ವರು ಶಿಕ್ಷಕರಿಲ್ಲದ ಪರಿಣಾಮ ಮಕ್ಕಳು ಅನುತೀರ್ಣರಾಗಿದ್ದಾರೆ. ಇಂಗ್ಲಿಷ್ , ವಿಜ್ಞಾನ, ಗಣಿತ, ಹಿಂದಿ ವಿಷಯಗಳಿಗೆ ಇಲ್ಲಿ ಶಿಕ್ಷಕರಿಲ್ಲ. ಶಾಲಾ ಆಡಳಿತ ಮಂಡಳಿ ಬೇಜವಬ್ದಾರಿಯಿಂದ ವರ್ತಿಸಿದೆ. ಶಿಕ್ಷಕರಿಲ್ಲದ ಪರಿಣಾಮ ನಾಲ್ಕು ವಿಷಯಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ಮಕ್ಕಳು ಅನುತೀರ್ಣರಾಗಲು ಶಾಲೆ ಆಡಳಿತ ಮಂಡಳಿ ಕಾರಣ ಎಂದು  ಪೋಷಕರು ಆರೋಪ ವ್ಯಕ್ತಪಡಿಸಿ ಶಾಲೆ ಎದುರು ಪ್ರತಿಭಟನೆ ನಡೆಸಿ  ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

ಎಸ್‌ಎಸ್‌ಎಲ್‌ಸಿ ರಿಸಲ್ಟ್‌: ಯಾದಗಿರಿಯಲ್ಲಿ 675 ಶಿಕ್ಷಕರ ಕೊರತೆ ಮಧ್ಯೆಯೂ ಉತ್ತಮ ಫಲಿತಾಂಶ

ಕಳೆದ ಏಪ್ರಿಲ್ ನಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಗೆ ಶೇ. 75.16 ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ 11664 ಬಾಲಕರು, 10486 ಬಾಲಕಿಯರು ಸೇರಿ ಒಟ್ಟು 22150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7805 ಬಾಲಕರು ಹಾಗೂ 8870 ಬಾಲಕಿಯರು ಸೇರಿ ಒಟ್ಟು 16675 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 75.28 ಫಲಿತಾಂಶ ಲಭಿಸಿದೆ. ಶಿರಾ ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿರುವ ಹರ್ಷಿತಾ ಡಿಎಂ.ಎಂಬ ವಿದ್ಯಾರ್ಥಿನಿ 625 ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

100 ಫಲಿತಾಂಶ ಬಂದ ಶಾಲೆಗಳು:  ಚಿಕ್ಕನಾಯಕನಹಳ್ಳಿ ತಾಲೂಕಿನ 5 ಸರ್ಕಾರಿ ಹಾಗೂ 3 ಅನುದಾನ ರಹಿತ ಶಾಲೆಗಳು, ಗುಬ್ಬಿ 3 ಸರ್ಕಾರಿ ಹಾಗೂ 3 ಅನುದಾನರಹಿತ, ಕುಣಿಗಲ್ ನ 3 ಸರ್ಕಾರಿ ಶಾಲೆ, ತಿಪಟೂರಿನ 4 ಸರ್ಕಾರಿ ಹಾಗೂ 6 ಅನುದಾನ ರಹಿತ ಶಾಲೆಗಳು, ತುಮಕೂರಿನ 3 ಸರ್ಕಾರಿ ಹಾಗೂ 12 ಅನುದಾನರಹಿತ, ತುರುವೇಕೆರೆಯ 6 ಸರ್ಕಾರಿ ಹಾಗೂ 3 ಅನುದಾನ ರಹಿತ ಶಾಲೆಗಳಿಗೆ 100 ಕ್ಕೆ 100 ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ 611 ಕ್ಕೂ ಹೆಚ್ಚು ಅಂಕಗಳನ್ನು 26 ಶಾಲೆಗಳ ವಿದ್ಯಾರ್ಥಿಗಳು ಲಭಿಸಿದೆ.

Latest Videos
Follow Us:
Download App:
  • android
  • ios