ಎನ್‌ಇಪಿಯಿಂದ ಭಾರತದ ಶಿಕ್ಷಣ ನೀತಿಗೆ ಬಲ: ರಾಜ್ಯಪಾಲ ಗೆಹಲೋತ್
- ಎನ್‌ಇಪಿಯಿಂದ ಭಾರತದ ಶಿಕ್ಷಣ ನೀತಿಗೆ ಬಲ
- ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಭಿಮತ
- ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆಯುರ್ವೇದ, ಹೋಮಿಯೋಪತಿ ಕಾಲೇಜುಗಳ ಪದವಿ ಪ್ರದಾನ
ಧಾರವಾಡ (ಡಿ.11) : ಭಾರತದ ಶಿಕ್ಷಣ ನೀತಿ ಬಲಪಡಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದ್ದು ದೇಶದ ಪ್ರತಿಯೊಂದು ವಿಶ್ವವಿದ್ಯಾಲಯಗಳು ಇದನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತ ಭವನದಲ್ಲಿ ಶನಿವಾರ ನಡೆದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಂಗ ಸಂಸ್ಥೆಗಳಾದ ಡಾ. ಬಿ.ಡಿ. ಜತ್ತಿ ಹೋಮಿಯೋಪತಿಕ್ ಕಾಲೇಜು ಹಾಗೂ ಸಿ.ಬಿ. ಗುತ್ತಲ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ಭಾರತವನ್ನು ಆತ್ಮನಿರ್ಭರ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಈ ಶಿಕ್ಷಣ ನೀತಿಗೆ ಪೂರಕವಾಗಲಿದೆ. ಆದ್ದರಿಂದ ವಿಶ್ವವಿದ್ಯಾಲಯಗಳು ಹೊಸ ಶಿಕ್ಷಣ ನೀತಿ ವಿಷಯದಲ್ಲಿ ಗಂಭೀರತೆ ಹೊಂದಬೇಕು ಎಂದರು.
ದೇಶವು ವಿವಿಧ ಸಂಸ್ಕೃತಿ, ಭಾಷೆಗಳ ನಾಡು. ವಿಭಿನ್ನ ಸಂಸ್ಕೃತಿಯ ನಾಡಿನಲ್ಲಿ ಕೇಂದ್ರ ಸರ್ಕಾರ ಪ್ರತಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಿದ್ದು ಸಕಲ ಭಾಷೆಗಳ ಸಮಾನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲೂ ಮಾತೃ ಭಾಷೆಗಳಿಗೆ ಹೆಚ್ಚಿನ ಮಾನ್ಯತೆ ನೀಡಿರುವುದನ್ನು ನಾವು ಗಮನಿಸಬೇಕು ಎಂದರು.
ಆಯುರ್ವೇದ, ಹೋಮಿಯೋಪತಿಕ್‌ಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಮಾನ್ಯತೆ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ವೈದ್ಯರು ತಮ್ಮ ಗೌರವ ತರುವುದಲ್ಲದೇ ಭಾರತವನ್ನು ವಿಶ್ವಮಾನವ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಪದವೀಧರರಿಗೆ ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಅಲೋಪತಿಕ್ ಚಿಕಿತ್ಸೆಯಿಂದಲೂ ಸಾಧ್ಯವಾಗದ ಅನೇಕ ದೀರ್ಘಕಾಲದ ರೋಗಗಳಿಗೆ ಆಯುರ್ವೇದ ಹಾಗೂ ಹೋಮಿಯೋಪತಿ ಪರಿಹಾರ ಇದೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಎರಡು ವೈದ್ಯಕೀಯ ಪದ್ಧತಿಗೆ ಪಾರಂಪರಿಕ ಇತಿಹಾಸವಿದೆ. ಈ ಪದ್ಧತಿ ಬಗ್ಗೆ ಮಾಹಿತಿ ಇಲ್ಲದೇ ಅಲೋಪತಿ ಬಳಸುತ್ತಿದ್ದೇವೆ. ಇಂಗ್ಲಿಷ್ ಔಷಧಿಯಿಂದಾಗಿ ದಿನದಿಂದ ದಿನಕ್ಕೆ ಭಾರತೀಯರ ಜೀವನ, ಆಹಾರ ಹಾಗೂ ಚಿಕಿತ್ಸಾ ಪದ್ಧತಿ ಬೇರೆಡೆಯೇ ಹೊರಳುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ಮಾಡುವ ಮೂಲಕ ಭಾರತೀಯ ವೈದ್ಯಕೀಯ ಪದ್ಧತಿಗೆ ಮಾನ್ಯತೆ ಬರುವಂತಾಗಬೇಕು ಎಂದರು.
Kannada University ಘಟಿಕೋತ್ಸವ: ಭಾರತ ಜ್ಞಾನದ ವಿಶ್ವಗುರು ಆಗಲಿ: ರಾಜ್ಯಪಾಲ
ಭಾರತೀಯ ವೈದ್ಯಕೀಯ ಪರಂಪರೆಗೆ ಮತ್ತಷ್ಟುಇಂಬು ನೀಡಲು ಕೇಂದ್ರ ಸರ್ಕಾರ ಆಯುರ್ವೇದಿಕ್ ಹಾಗೂ ಹೋಮಿಯೋಪತಿಕ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಏಮ್ಸ್‌ನಲ್ಲೂ ಈ ಎರಡೂ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಜತೆಗೆ ಹೊಸ ಹೊಸ ಆಯುರ್ವೇದಿಕ್, ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್ ಆರಂಭಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದ ಸಚಿವ ಜೋಶಿ, ಇಡೀ ಜಗತ್ತು ಭಾರತದತ್ತ ನೋಡುತ್ತಿದ್ದು ಸಮಾಜಕ್ಕೆ ನಾವು ಉತ್ತಮ ವೈದ್ಯರು, ಶಿಕ್ಷಕರು, ನರ್ಸ್ ಒದಗಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಎರಡೂ ಕಾಲೇಜಿನ ರಾರಯಂಕ್ ಪಡೆದ 50 ವಿದ್ಯಾರ್ಥಿಗಳು ಸೇರಿ 135 ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಪದವಿ ಪ್ರದಾನ ಮಾಡಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ, ಮೇಯರ್ ಈರೇಶ ಅಂಚಟಗೇರಿ, ಸಭಾದ ಸದಸ್ಯರಾದ ಅರುಣ ಜೋಶಿ, ಎಂ.ಆರ್. ಪಾಟೀಲ, ಎಸ್. ರಾಧಾಕೃಷ್ಣನ್, ಡಾ. ಎಸ್.ಬಿ. ಹಿಂಚಿಗೇರಿ, ಪ್ರಾಚಾರ್ಯರಾದ ಡಾ. ವೈಷ್ಣವಿ ಸತೀಶ ಹಾಗೂ ಡಾ. ಎಸ್.ಟಿ. ಹೊಂಬಳ ಇದ್ದರು.