Asianet Suvarna News Asianet Suvarna News

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಪ್ರತಿಷ್ಠಿತ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ‌ ವಿದ್ಯಾಲಯ ಹತ್ತನೇ ಘಟಿಕೋತ್ಸವದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ರಾಜ್ಯಪಾಲರು ಗೌರವಿಸಿದ್ದಾರೆ,

Vijayanagara Sri Krishnadevaraya University 10th Convocation gow
Author
First Published Dec 9, 2022, 10:06 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಡಿ.9): ಪ್ರತಿಷ್ಠಿತ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ‌ ವಿದ್ಯಾಲಯ ಹತ್ತನೇ ಘಟಿಕೋತ್ಸವದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ರಾಜ್ಯಪಾಲರು ಗೌರವಿಸಿದ್ರು. ಶಿಕ್ಷಣವಂತರನ್ನಾಗಿಸಲು ಸಹಕಾರ ನೀಡಿದ ಪೋಷಕರು ಹಾಗೂ ಕುಟುಂಬಸ್ಥರನ್ನು ಸತ್ಕರಿಸುವುದನ್ನು ಮರೆಯದೆ ಸಮಾಜ ಮತ್ತು ದೇಶದ ಅಭಿವೃದ್ದಿಗೆ ಕೊಡುಗೆಯನ್ನು ನೀಡುವಂತಾಗಬೇಕೆಂದು ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ಥಾವರ ಚಂದ್ ಗೆಹ್ಲೋಟ್ ಇದೇ ವೇಳೆ ಹೇಳಿದರು. ಆಧುನಿಕ ವರ್ತಮಾನಕ್ಕೆ ತಕ್ಕಂತೆ ಶಿಕ್ಷಣದಲ್ಲಿ ಕೌಶಲ್ಯತೆಗೆ ಹೆಚ್ಚಿನ ಒತ್ತು ನೀಡಿ ನೈತಿಕತೆ ಮತ್ತು ಮೌಲ್ಯವುಳ್ಳ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ನೂತನ ಎನ್.ಇ.ಪಿ ಮಾತೃಭಾಷೆಗೆ ಹೆಚ್ಚು ಒತ್ತನ್ನು ನೀಡಿದ್ದು ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಕಲಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.

ದೇಶ ಪ್ರಾಚೀನ ಕಾಲದಲ್ಲಿ ಜ್ಞಾನ ಮತ್ತು ವಿಜ್ಞಾನದಲ್ಲಿ ನೈಪುಣ್ಯತೆ ಯನ್ನು ಹೊಂದಿದ್ದರಿಂದ ವಿಶ್ವಗುರು ಸ್ಥಾನದಲ್ಲಿತ್ತು. ಪುನಃ ಈ ಸ್ಥಾನವನ್ನು ಪಡೆದುಕೊಳ್ಳಲು ಯುವ ಸಮೂಹದ ಕೌಶಲ್ಯತೆ, ಪ್ರತಿಭೆಯನ್ನು ಬಳಸಿಕೊಳ್ಳುವಲ್ಲಿ ನಿರಂತರ ಪ್ರಯತ್ನ ಮಾಡುವ ಮೂಲಕ ನವಭಾರತ ನಿರ್ಮಾಣ ಮಾಡುವಲ್ಲಿ ಬದ್ದರಾಗೋಣ, ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದರು.

ದೇಶದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ 25 ವರ್ಷಗಳಿದ್ದು ಅಮೃತ ಮಹೋತ್ಸವದ ವರ್ಷದಲ್ಲಿ ದೇಶದ ಗೌರವ ಮತ್ತು ಅಭಿವೃದ್ದಿ ಭಾರತ ನಿರ್ಮಾಣ ಕರ್ತವ್ಯದ ಕಾಲದಲ್ಲಿ ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ದೇಶ ವಹಿಸುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ದೇಶದ ಘನತೆ, ಗೌರವವನ್ನು ಮತ್ತೊಷ್ಟು ಹೆಚ್ಚಿಸುವ ಅವಕಾಶ ಇದರಿಂದ ಲಭಿಸಿದೆ. ದೇಶ ಜಾಗತಿಕ ಮಟ್ಟದಲ್ಲಿ ಸಾರ್ವಭೌಮಿಕವಾದ ಭಾವನೆ ಹೆಚ್ಚಿಸಲು ಕೆಲಸ ಮಾಡಲಿದೆ. ಒಂದೇ ಭಾರತ, ಒಂದೇ ಭೂಮಿ, ಒಂದೇ ಪರಿವಾರದ ತಳಹದಿಯಲ್ಲಿ ಮುಂದೆ ಸಾಗಲಿದ್ದು ವಿದ್ಯಾರ್ಥಿಗಳು ತಮ್ಮ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರದ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಡುಗೆ ನೀಡುವಂತಾಗಲಿ ಎಂದು ತಿಳಿಸಿದರು. 

ಇಂದು ಬಳ್ಳಾರಿ ವಿವಿ ಘಟಿಕೋತ್ಸವ: ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಡಾಕ್ಟರೇಟ್

ಗೌರವ ಡಾಕ್ಟರೇಟ್ ನೀಡಿದ ರಾಜ್ಯಪಾಲರು:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಿ.ಜಿ.ಕೆರೆ ಪ್ರಗತಿಪರ ರೈತ ಎಸ್.ಸಿ.ವೀರಭದ್ರಪ್ಪ, ಬಳ್ಳಾರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಬಹದ್ದೂರ್ ಎಸ್.ಶೇಷಗಿರಿರಾವ್ ಇವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿದ್ದು ಇವರ ಮಗ ಬಹದ್ದೂರ್ ಮುರಳೀಧರ್ ಸ್ವೀಕರಿಸಿದರು. ಹೊಸಪೇಟೆಯ ಡಾ.ಮಲ್ಲಿಕಾರ್ಜುನ ವಿ.ಜಾಲಿ ಇವರಿಗೂ ಗೌರವ ಡಾಕ್ಟರೇಟ್ ನೀಡಿದ್ದು ಇವರು ಗೈರು ಹಾಜರಾಗಿದ್ದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 60 ಚಿನ್ನದ ಪದಕಗಳ ಪೈಕಿ ಒಟ್ಟು 48 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಯಿತು. ವಿವಿಧ ವಿಭಾಗಗಳ ಒಟ್ಟು 17 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಎಲ್ಲ ವಿಭಾಗಗಳ ಸ್ನಾತಕ ಪದವಿಯ 63 ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಿಂದ 73 ಒಟ್ಟು 136 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಬೆಂಗಳೂರು: ಶಿಕ್ಷಣ ಇಲಾಖೆ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಆಕ್ರೋಶ

ನಾಲ್ಕು ಚಿನ್ನ ಪಡೆದ ಅಕ್ಷತಾ:
ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ವಾಣಿಜ್ಯ ಶಾಸ್ತ್ರ ವಿಭಾಗದ ಅಕ್ಷಿತಾ ಕುಮಾರಿ ಅವರಿಗೆ 4 ಚಿನ್ನದ ಪದಕ ಮತ್ತು ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ಹೇಮಂತ ಟಿ.ಎಲ್ ಹಾಗೂ ವಿ.ಶ್ರೀಕೃಷ್ಣ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಪ್ರೀತಿ.ಆರ್  ಇವರಿಗೆ 3 ಚಿನ್ನದ ಪದಕಗಳನ್ನು ಮತ್ತು ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Follow Us:
Download App:
  • android
  • ios