ಅವೈಜ್ಞಾನಿಕ ಆದೇಶ ವಾಪಸ್ಸಿಗೆ ಸರ್ಕಾರಕ್ಕೆ ರುಪ್ಸಾ ಮನವಿ, ಇಲ್ಲವಾದರೆ ಪ್ರತಿಭಟನೆ ಎಚ್ಚರಿಕೆ!
ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ನಡುವೆ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಶಿಕ್ಷಣ ಇಲಾಖೆ ಹೊರಡಿಸಿದ್ದ ಅವೈಜ್ಞಾನಿಕ ಆದೇಶ ವಾಪಸ್ ಪಡೆಯುವಂತೆ ಶಿಕ್ಷಣ ಇಲಾಖೆಗೆ ರುಪ್ಸಾ ಮನವಿ ಮಾಡಿದೆ.
ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾ ನೆಟ್ ಸುವರ್ಣ
ಬೆಂಗಳೂರು (ಅ.1): ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ನಡುವೆ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಶಿಕ್ಷಣ ಇಲಾಖೆ ಹೊರಡಿಸಿದ್ದ ಅವೈಜ್ಞಾನಿಕ ಆದೇಶ ವಾಪಸ್ ಪಡೆಯುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಲು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಪದಾಧಿಕಾರಿಗಳ ಜೊತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ರು.ಸಭೆಯಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳ ಕುರಿತು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹಾಗೂ ಪದಾಧಿಕಾರಿಗಳೊಂದಿಗೆ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಚರ್ಚೆ ನಡೆಸಿದ್ರು. ಸುಮಾರು ಒಂದು ಗಂಟೆಗಳ ಕಾಲ ಖಾಸಗಿ ಶಾಲೆಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ರು. ಇತ್ತೀಚಿಗೆ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ರುಪ್ಸಾ ಒಕ್ಕೂಟದ ಅಡಿಯಲ್ಲಿ ಬರುವ ಖಾಸಗಿ ಶಾಲೆಗಳ ಮೇಲೆ ಬಿಇಒ ,ಡಿಡಿಪಿಐ ಕಿರುಕುಳ ಕೊಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರು. ಆಲ್ಲದೆ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ಆದೇಶಗಳನ್ನು ವಾಪಸ್ ಪಡೆಯುವಂತೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇನ್ನು ಖಾಸಗಿ ಶಾಲೆಗಳ ಮೇಲೆ ಸಮರ ಸಾರಿದ್ದ ಸರ್ಕಾರ ಶಿಕ್ಷಣ ಇಲಾಖೆಯ ಕೆಲ ಆದೇಶಗಳನ್ನು ವಾಪಸ್ ಪಡೆಯುವಂತೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಮನವಿ ಮಾಡಿದೆ.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
ಶಿಕ್ಷಣ ಇಲಾಖೆ ಹೊರಡಿಸಿದ್ದ 9 ಅಂಶಗಳ ಆದೇಶ ವಾಪಸಿಗೆ ಬಿಗಿಪಟ್ಟು
ಅನಧಿಕೃತ ಶಾಲೆಗಳು( ನೋಂದಣಿ ಇಲ್ಲದ)
ಅನಧಿಕೃತ ಸಿಬಿಎಸ್ ಇ /ಐಸಿಎಸ್ ಇ ಇತರೆ ಪಠ್ಯಕ್ರಮದ ಶಾಲೆಗಳು
ಅನಧಿಕೃತ ತರಗತಿಗಳು ನಡೆಸುತ್ತಿರುವ ಶಾಲೆಗಳ ಸಂಖ್ಯೆ
ಅನಧಿಕೃತ ಮಾಧ್ಯಮ/ ಪಠ್ಯ ಕ್ರಮದ ಶಾಲೆ
ಅನಧಿಕೃತವಾಗಿ ಬೇರೆ ಕಡೆ ಸ್ಥಳಾಂತರ ಮಾಡಿರುವ ಶಾಲೆಗಳು
ಅನಧಿಕೃತ ಹಸ್ತಾಂತರ ಮಾಡಿರುವ ಶಾಲೆಗಳ ಸಂಖ್ಯೆ
ಅನಧಿಕೃತವಾಗಿ ಎರಡು ಪಠ್ಯಕ್ರಮ ಹೊಂದಿರುವ ಶಾಲೆಗಳ ಸಂಖ್ಯೆ
ಶಾಲೆಯ ಹೆಸರು ಬದಲಾವಣೆ ಮಾಡಿಕೊಂಡಿರುವ ಶಾಲೆಗಳು
ಒಂದೇ ಕಾಂಪೌಂಡಿನಲ್ಲಿರುವ ಎರಡುಶಾಲೆಗಳು(ಅನುಮತಿಯೊಂದಿಗೆ)
ರುಪ್ಸಾ, ಕ್ಯಾಮ್ಸ್ ಮೇಲೆ ಮಾನನಷ್ಟ ಕೇಸ್: ಶಿಕ್ಷಣಾಧಿಕಾರಿಗಳ ಎಚ್ಚರಿಕೆ
ಇನ್ನೂ ಕಳೆದ 20 ,30 ವರ್ಷಗಳಿಂದ ಶಾಲೆಗಳನ್ನ ನಡೆಸುತ್ತಿದ್ದೇವೆ.ಶಿಕ್ಷಣ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ಶಾಲೆಗಳ ಮೇಲೆ ಅನಧಿಕೃತ ಪಟ್ಟಿ ಕಟ್ಟಲಾಗಿತ್ತು. ಕೂಡಲೇ ಸರ್ಕಾರ ಈ ಆದೇಶ ವಾಪಸ್ ಪಡೆಯಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ರುಪ್ಸಾ ಒಕ್ಕೂಟ ಎಚ್ಚರಿಕೆ.