ರಿಕ್ಷಾ ಚಾಲಕನ ಮಗಳು ಪ್ರೇಮಾ ಜಯಕುಮಾರ್, ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಪೋಷಕರ ಬೆಂಬಲದಿಂದ ಈ ಯಶಸ್ಸು ಗಳಿಸಿದ್ದಾರೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಅವರ ಸಾಧನೆ ಎಲ್ಲರಿಗೂ ಪ್ರೇರಣೆ.

ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಯಾವಾಗಲೂ ಅಪರೂಪದ ಬುದ್ಧಿವಂತಿಕೆಯೇ ಬೇಕು ಎಂಬುದಿಲ್ಲ. ಅದರ ಬದಲು, ಕಠಿಣ ಪರಿಶ್ರಮ, ಇಚ್ಛಾಶಕ್ತಿ ಮತ್ತು ಉತ್ಸಾಹವೇ ಮುಖ್ಯ. ಸಿಎ ಪ್ರೇಮಾ ಜಯಕುಮಾರ್ ಅವರ ಬದುಕು ಇದಕ್ಕೆ ಅತ್ಯುತ್ತಮ ಉದಾಹರಣೆ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯಲ್ಲಿ ಅವರು ಉತ್ತಮ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಪ್ರೇಮಾ ಜಯಕುಮಾರ್ ಬಾಲ್ಯದಲ್ಲಿ ಪ್ರತಿಭಾವಂತೆಯಾಗಿರಲಿಲ್ಲ ಅಥವಾ ಎಲ್ಲದರಲ್ಲೂ ಚುರುಕುತನ ಹೊಂದಿರಲಿಲ್ಲ. ಆದರೆ ತಮ್ಮ ಬಲವಾದ ಇಚ್ಛಾಶಕ್ತಿ, ಪರಿಶ್ರಮ ಮತ್ತು ದೃಢನಿಶ್ಚಯದಿಂದ ಅವರು ಈ ಸಾಧನೆ ಮಾಡಿದರು. ಅವರು 24ನೇ ವಯಸ್ಸಿನಲ್ಲಿ ಐಸಿಎಐ ಸಿಎ 2025 ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು, 800 ಅಂಕಗಳಲ್ಲಿ 607 ಅಂಕಗಳನ್ನು ಗಳಿಸಿದರು. ಇದರಲ್ಲಿ ಅವರಿಗೆ ಶೇಕಡಾ 75.88ರಷ್ಟು ಅಂಕ ಬಂದಿದೆ

ಪ್ರೇಮಾ ಜಯಕುಮಾರ್ ಯಶಸ್ಸಿನ ಕಥೆ

ಪ್ರೇಮಾ ಜಯಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ತಮಗೆ ಮಾತ್ರವಲ್ಲ, ಅವರ ಸಹೋದರ ಧನರಾಜ್ ಕೂಡ ಮೊದಲ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರೇಮಾ ಅವರ ತಂದೆ ಜಯಕುಮಾರ್ ಪೆರುಮಾಳ್ ಮುಂಬೈನ ಮಲಾಡ್ ಪ್ರದೇಶದಲ್ಲಿ ರಿಕ್ಷಾ ಚಾಲಕರಾಗಿದ್ದು, ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಭವಿಷ್ಯ ಒದಗಿಸಲು ತನ್ನೆಲ್ಲ ಜೀವನವನ್ನೇ ಮಕ್ಕಳಿಗಾಗಿ ಮುಡಿಪಿಟ್ಟರು. ಪೆರುಮಾಳ್ ಅವರು ವಿದ್ಯಾವಂತರಾಗಿರಲಿಲ್ಲ, ಆದರೆ ಶಿಕ್ಷಣದ ಮಹತ್ವ ಅವರಿಗೆ ಚೆನ್ನಾಗಿ ತಿಳಿದಿತ್ತು.

ಪ್ರೇಮಾ ಜಯಕುಮಾರ್ ಖಂಡ್ವಾಲಾ ಕಾಲೇಜಿನಿಂದ ಪದವಿ ಪೂರ್ಣಗೊಳಿಸಿ, ಬಳಿಕ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಕಾಂ ಪದವಿ ಪಡೆದರು. ಕಾಲೇಜು ದಿನಗಳಿಂದಲೇ ಅವರು ಸಿಎ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. 2008ರಲ್ಲಿ ಸಿಎ ಪ್ರವೇಶ ಪರೀಕ್ಷೆಯಾಗಿರುವ ಸಿಪಿಟಿ ಮತ್ತು ಐಪಿಸಿಇಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರು.

ಸಿಎ ಪರೀಕ್ಷೆಗೆ ತಯಾರಿ ಮಾಡುವ ಸಂದರ್ಭದಲ್ಲಿ ಪ್ರೇಮಾ ಅನೇಕ ಅಡಚಣೆಗಳನ್ನು ಎದುರಿಸಿದರು. ಕೇವಲ 300 ಚದರ ಅಡಿ ವಿಸ್ತೀರ್ಣದ ಚಾಲ್‌ನಲ್ಲಿ ಜೀವನ ನಡೆಸುತ್ತಿದ್ದ ಕಾರಣ, ಅವರಿಗೆ ಅಧ್ಯಯನಕ್ಕೆ ಸರಿಯಾದ ಪರಿಸರ ಸಿಗಲಿಲ್ಲ. ಆದರೆ ಸೀಮಿತ ಸಂಪನ್ಮೂಲಗಳು ಮತ್ತು ಜೀವನದ ಸವಲತ್ತುಗಳ ಕೊರತೆಯ ನಡುವೆಯೂ, ಅವರು ಬಹಳ ದೊಡ್ಡ ಸಾಧನೆ ಮಾಡಿದರು. ಹೆಚ್ಚು ಅನುಕೂಲ ಹೊಂದಿರುವವರಿಗೂ ಸುಲಭವಾಗದಂತಹ ಯಶಸ್ಸನ್ನು ಅವರು ತೋರಿಸಿದರು. ಈ ಯಶಸ್ಸನ್ನು ತಾನು ಪೋಷಕರ ಹಾಗೂ ಶಿಕ್ಷಕರ ಬೆಂಬಲದಿಂದಲೇ ಸಾಧಿಸಿದ್ದಾಗಿ ಪ್ರೇಮಾ ಹೇಳುತ್ತಾರೆ.

ತಂದೆ ಪೆರುಮಾಳ್ ಮತ್ತು ತಾಯಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲವನ್ನೂ ಉಳಿತಾಯವೇ ಮಾಡಿದ್ದರು. ತಿಂಗಳಿಗೆ ಕೇವಲ 15,000 ರೂ. ಆದಾಯ ಹೊಂದಿದ್ದರೂ, ಅವರು ಕುಟುಂಬವನ್ನು ಪೋಷಿಸುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಹಣಕಾಸಿನ ವ್ಯವಸ್ಥೆ ಮಾಡಿದರು. ಅಂತಿಮವಾಗಿ ತಮ್ಮ ತಮಿಳುನಾಡಿನ ವಲ್ಲುಪುರಂ ಜಿಲ್ಲೆಯ ಪೂರ್ವಜರ ಜಮೀನನ್ನು ಮಾರುವುದರ ಮೂಲಕ ಮಕ್ಕಳ ಭವಿಷ್ಯಕ್ಕಾಗಿ ಹಣ ವ್ಯವಸ್ಥೆ ಮಾಡಿದರು.

ಪ್ರೇಮಾ ಜಯಕುಮಾರ್ ಅವರ ಯಶೋಗಾಥೆ, ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಎಲ್ಲವನ್ನು ಸಾಧ್ಯವನ್ನಾಗಿ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.