Asianet Suvarna News Asianet Suvarna News

ಕರ್ನಾಟಕ ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಗೆ ಬಂದಿದೆ: ರವಿ ಮಾಳಗೇರ

*  ಕವಿವಿ ಸಿಂಡಿಕೇಟ್ ಸದಸ್ಯತ್ವ ಸ್ಥಾನದಿಂದ ತೆಗೆದಿರುವುದು ಸರಿ ಅಲ್ಲ
*  ಕವಿವಿ ಮುಚ್ಚುತ್ತಾರೆ ಎಂದ ಸಿಂಡಿಕೇಟ್ ಸದಸ್ಯ ರವಿ ಮಾಳಗೇರ 
*  ಕವಿವಿಯಲ್ಲಿ ಆಡಳಿತವನ್ನ ಯಾರು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ
 

Ravi Malagera Talks Over Karnatak Univesity Dharwad grg
Author
Bengaluru, First Published Jul 12, 2022, 3:13 PM IST

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಜು.12): ಕವಿವಿಯಲ್ಲಿ ಹತ್ತು ಹಲವು ಕರ್ಮಕಾಂಡಗಳಿವೆ. ರಾಜ್ಯದ ಪ್ರತಿಷ್ಠಿತ ಹಾಗೂ ಪುರಾತನ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆ ಪಾತ್ರವಾದ ಕರ್ನಾಟಕ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದ ಜೊತೆಗೆ ಮುಚ್ಚಿ ಹೋಗುವ ಸ್ಥಿತಿಗೆ ಬಂದು ತಲುಪಿದೆ ಅಂತ ಕವಿವಿ ಸಿಂಡಿಕೇಟ್ ಸದಸ್ಯ ರವಿ ಮಾಳಗೇರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು(ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕುಲಪತಿ ಡಾ.ಕೆ.ಬಿ.ಗುಡಸಿ ಈವರೆಗೆ ಎರಡು ವರ್ಷಗಳ ಅವಧಿಯಲ್ಲಿ ಒಂದು ಬಾರಿಯೂ ದಿಲ್ಲಿಗೆ ಹೋಗಿಲ್ಲ. ನಮ್ಮ ವಿವಿಯ ರ‍್ಯಾಂಕ್ ನೂರರಿಂದ 148 ಕ್ಕೆ ಸ್ಥಾನಕ್ಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Professor Recruitment Scam: ಕವಿವಿ ರಿಜಿಸ್ಟ್ರಾರ್‌ ಅರೆಸ್ಟ್‌ ಆಗಿ 5 ದಿನವಾದರೂ ಅಮಾನತಿಲ್ಲ..!

ವಿವಿಯಲ್ಲಿ ಉಸಿರುಗಟ್ಟುವ ವಾತವರಣವಿದೆ. ಐದು ಎಕರೆ ಭೂಮಿಯನ್ನು ಕೇಂದ್ರೀಯ ವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಿದೆ. 5 ಕೋಟಿ ಬೆಲೆ ಬಾಳುವ ಭೂಮಿ ನಯಾ ಪೈಸೆ ಪಡೆಯದೆ ಮಂಜೂರು ಮಾಡಿದೆ ಎಂದು ಕಿಡಿಕಾರಿದರು. ಕುಲಪತಿಯನ್ನು ಬರುವ ದಿನಗಳಲ್ಲಿ ಕಂಪನಿ ಸಿಇಓ ತರಹ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಅಂತ ದೂರಿದ್ದಾರೆ. ಕವಿವಿ ಕುಲಪತಿ ಗುಡಸಿ ಮನೆ ನವೀಕರಣಕ್ಕೆ 42 ಲಕ್ಷ ವೆಚ್ಚ ಮಾಡಿದ್ದಾರೆ. ಇದರ ದುರಸ್ತಿ ಬದಲಿಗೆ ಹೊಸ ಕಟ್ಟಡ ಕಟ್ಟಬಹುದಾಗಿತ್ತು ಎಂದರು.

ಅದೇ ರೀತಿ ಒಂದೂವರೆ ವರ್ಷದ ಹಿಂದೆ ಖರೀದಿಸಿದ್ದ 36 ಲಕ್ಷದ ಸರ್ವರ್ ಬಳಕೆಯಾಗದೆ ಬಿದ್ದಿತ್ತು. ಅದರ ಗುತ್ತಿಗೆದಾರರ ಜೊತೆಗೆ ರಾಜೀ ಸಂಧಾನ ಮಾಡಿ ಆರೂವರೆ ಲಕ್ಷದ ಯಂತ್ರ ಕೊಡಲು ಒಪ್ಪಿಸಿದೆ. ಪಿಂಚಣಿ ವೇತನ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಡೆಲ್ ಲ್ಯಾಪ್ ಟ್ಯಾಪ್ ಟೆಂಡರ್  ಮಾಡಿಸಿರುವ ಜೊತೆಗೆ ಅನೇಕ ಕೆಲಸ ಕಾರ್ಯಗಳು ಮಾಡಿರುವುದಾಗಿ ರವಿ ಮಾಳಗೇರ ಪಟ್ಟಿ ನೀಡಿದರು.

Solar Scam in Karnatak University: ಕವಿವಿಯಲ್ಲಿ ಕೋಟಿ ಮೊತ್ತದ ಹಗರಣ

ಕವಿವಿ ಸಿಂಡಿಕೇಟ್ ಸದಸ್ಯ ರವಿ‌ ಮಾಳಗೇರ ಅವರನ್ನು ತೆಗೆದು ಆ ಸ್ಥಾನಕ್ಕೆ ಡಾ. ಸಂದೀಪ ಬೂದಿಹಾಳ ಅವರ ನೇಮಕ ಮಾಡಿರುವುದು ಶಾಸಕ ಅರವಿಂದ ಬೆಲ್ಲದ ಅವರ ಗಮನಕ್ಕೆ ಬಂದಿಲ್ಲವಂತೆ. ಸರಕಾರದ ಮಟ್ಟದಲ್ಲಿ ಆಗಿದೆ ಎಂದು ಹೇಳಿದ್ದಾರೆ. ಇನ್ನು ಐದು ತಿಂಗಳ ಅವಧಿ ಇತ್ತು. ಆದರೆ ಏಕಾಏಕಿಯಾಗಿ ಇದು ಮಾಡಿದ್ದು ತಪ್ಪು. ಇದರಿಂದಾಗಿ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕವಿವಿಯ ಕಾಯ್ದೆ ಪ್ರಕಾರ ಹೀಗೆ ಮಾಡಲು ಬರಲ್ಲ. ಕವಿವಿ ಹಾಗೂ ರಾಜ್ಯದ ಬಿಜೆಪಿ ಸರಕಾರದಲ್ಲಿ ಕೆಲಸ ಮಾಡಿದವರಿಗೂ ಬೆಲೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕವಿವಿಯಲ್ಲಿ ಆಡಳಿತವನ್ನ ಯಾರು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ, ಇನ್ನು ಕವಿವಿಯಲ್ಲಿ ಕೊಟ್ಯಂತರ ಹಣ ಸರಕಾರದಿಂದ ಬಿಡುಗಡೆಯಾಗುತ್ತೆ. ಅಲ್ಲಿ ಕೆಲಸ ಕಾಮಗಾರಿಗಳು ಆಗದೆ ಹಣ ಪೋಲಾಗುತ್ತಿದೆ. ಇಂತಹ ವಿಷಯಗಳನ್ನ ನಾನು ಧ್ವನಿ ಎತ್ತುವುದಕ್ಕೆ ಸರ್ಕಾರದವರು ನನ್ನ ಸದಸ್ಯತ್ವ ಸ್ಥಾನದಿಂದ‌ ತೆಗೆದು ಹಾಕಿದ್ದಾರೆ. ನನ್ನನ್ನ ಸದಸ್ಯತ್ವ ಸ್ಥಾನದಿಂದ ತಗೆದಿದ್ದು ಸರಿಯಲ್ಲ ಎಂದು ಕುಲಪತಿಗಳ ವಿರುದ್ಧ ಕಿಡಿಕಾರಿದರು. 
 

Follow Us:
Download App:
  • android
  • ios