Raichuru: 2ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡಿ ಕಲಿಸಿಕೊಡದ ಶಿಕ್ಷಕ, ಎಸಿ ತರಾಟೆ

2ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡಿ ಕಲಿಸಿಕೊಡದ ಶಿಕ್ಷಕನಿಗೆ ಎಸಿ ತರಾಟೆ.  ಎರಡು ದಿನದಲ್ಲಿ ಮಕ್ಕಳಿಗೆ ಒದಲು, ಬರೆಯಲು ಬರಬೇಕು ಇಲ್ಲದಿದ್ದರೇ ಕ್ರಮ ಎಂದು ಎಚ್ಚರಿಕೆ.

Raichuru Ac take class to teacher who does not teach ABCD to 2nd standard students gow

ರಾಯಚೂರು (ಅ.20): ತಾಲೂಕಿನ ಲಿಂಗನಖಾನದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಹಾಯಕ ಆಯುಕ್ತ ರಜನಿಕಾಂತ್‌ ಚವ್ಹಾಣ್‌ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ 2 ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡ ಬಾರದ ಕಾರಣಕ್ಕೆ, ಅವುಗಳನ್ನು ಕಲಿಸಿಕೊಡದ ಶಿಕ್ಷಕರಿಗೆ ಎಸಿ ತರಾಟೆಗೆ ತೆಗೆದುಕೊಂಡರು. ಸಹಾಯಕ ಆಯುಕ್ತರು ತರಗತಿಯಲ್ಲಿ ಮಕ್ಕಳಿಗೆ ಕೆಲ ವರ್ಣಮಾಲೆ ಪ್ರಶ್ನೆಗಳನ್ನು ಕೇಳಿದರು. ಆದರೆ, ಮಕ್ಕಳು ಉತ್ತರಿಸಲು ತಡಬಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಓದಲು, ಬರೆಯಲು ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾಭಾಸ ಮಾಡಿಸದೆ ಏನು ಮಾಡುತ್ತಿದ್ದೀರಿ? ಮುಖ್ಯೋಪಾಧ್ಯಾಯರು ಯಾರು? ಎಂದು ಶಿಕ್ಷಕರಿಗೆ ಕ್ಲಾಸ್‌ ತೆಗೆದುಕೊಂಡರು. ಎರಡು ದಿನದಲ್ಲಿ ಮಕ್ಕಳಿಗೆ ಒದಲು, ಬರೆಯಲು ಬರಬೇಕು ಇಲ್ಲದಿದ್ದರೇ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಸರ್ಕಾರಿ ಶಾಲೆಗಳಲ್ಲಿ ಇದೀಗ ಸರ್ಕಾರಿ ಪಬ್ಲಿಕ್‌ ಶಾಲೆ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದೆ. ಕನ್ನಡ ಶಾಲೆಗಳಿಗೂ ಇಂಗ್ಲೀಷ್‌ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ, ಮಕ್ಕಳಿಗೆ ಇಂಗ್ಲೀಷ್‌ ಕಲಿಸುವಲ್ಲಿ ಶಿಕ್ಷಕರು ಕೆಲವೊಂದು ಕಡೆ ಅಸೆಡ್ಡೆತನ ತೋರಲಾಗುತ್ತಿದೆ. ನಾನು ಟೀಚರ್‌ ಆಗಿ ಬಂದರೇ, ಎರಡು ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.

ಮಕ್ಕಳಿಗೆ ಕಾಳಜಿಯಿಂದ ಶಿಕ್ಷಣ ಕಲಿಸಬೇಕು. ಶಾಲಾ ಪರಿಸರ ಉತ್ತಮವಾಗಿದೆ. ಒಳ್ಳೆಯ ಬಿಲ್ಡಿಂಗ್‌ ಸೇರಿ ಎಲ್ಲಾ ಅಗತ್ಯ ಸೌಲಭ್ಯವಿದ್ದರೂ, ಸರಿಯಾಗಿ ಶಿಕ್ಷಣ ನೀಡಲು ಏನು ತೊಂದರೆ ನಿಮಗೆ?. ಯಾವಾಗಲೂ ಸಮಸ್ಯೆ ಹುಡುಕಬಾರದು, ಪರಿಹಾರ ಕಂಡುಕೊಳ್ಳಬೇಕು. ಮಕ್ಕಳಿಗೆ ಎಬಿಸಿಡಿ ಬಾರದಿದ್ದರೂ, ಆರಾಮವಾಗಿ ಇದ್ದೀರಿ. ಹೀಗಾದರೆ ಮಕ್ಕಳ ಭವಿಷ್ಯ ಏನಾಗಬೇಕು. ಈ ಮಕ್ಕಳಿಗೆ ಒಂದು ವಾರದಲ್ಲಿ ಓದಲು, ಬರೆಯಲು ಬರಬೇಕು. ಇಲ್ಲದಿದ್ದರೇ ಕಠಿಣ ಕ್ರಮ ಕೈಗೊಳ್ಳುವುದೆಂದು ಎಚ್ಚರಿಸಿದರು.

ಎನ್‌ಇಪಿಯಲ್ಲಿ ಹಿಂದಿ ಹೇರಿಕೆ ಇಲ್ಲ: ಧರ್ಮೇಂದ್ರ ಪ್ರಧಾನ್‌

ವಿದ್ಯಾರ್ಥಿ ವೇತನ ನೀಡುವ ಎನ್‌.ಎಂ.ಎಂ.ಎಸ್‌ ಪರೀಕ್ಷೆಗೆ ಅರ್ಜಿ
ಚಾಮರಾಜನಗರ: 2022-23ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಎನ್‌.ಎಂ.ಎಂ.ಎಸ್‌ ಪರೀಕ್ಷೆಯನ್ನು ಡಿ. 18 ರಂದು ನಡೆಸಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1 ಸಾವಿರ ರು. ಮಾಸಿಕ ವಿದ್ಯಾರ್ಥಿ ವೇತನವನ್ನು 12ನೇ ತರಗತಿವರೆಗೆ ನೀಡಲಿದ್ದು ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ನ.30 ಕೊನೆ ದಿನ: ಸಚಿವ ಅಶ್ವತ್ಥ್‌ ನಾರಾಯಣ

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ನವೋದಯ ಶಾಲೆ, ವಾಜಪೇಯಿ ಶಾಲೆ, ಏಕಲವ್ಯ, ಕೆಜಿಎ, ಡಾ. ಅಂಬೇಡ್ಕರ್‌ ವಸತಿ ಶಾಲೆ, ಕೇಂದ್ರೀಯ ವಿದ್ಯಾಲಯ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಿರುವುದಿಲ್ಲ ಅರ್ಜಿ ಸಲ್ಲಿಸಲು ಸಂಬಂಧಿ​ಸಿದ ಶಾಲಾ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ತಮ್ಮ ಶಾಲೆಯ ವಿದ್ಯಾರ್ಥಿಗಳ ಅರ್ಜಿಯನ್ನು ನಿಗದಿ ಪಡಿಸಿರುವ ಅಂಶಗಳಂತೆ ಆನ್‌ಲೈನ್‌ ಮೂಲಕ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು ಅ. 25 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು ಪ್ರಾಂಶುಪಾಲ ಎಚ್‌.ಕೆ. ಪಾಂಡು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios