ಮಹಿಳೆಯರ ಉಡುಗೆ ಧರಿಸಿದ್ದಲ್ಲದೆ, ಕೆಂಪು ಬಳೆಗಳು, ಬಿಂದಿ, ಲಿಪ್‌ಸ್ಟಿಕ್ ಹಾಕಿಕೊಂಡು ಅಲಂಕಾರ ಮಾಡಿಕೊಂಡಿದ್ದ. ಆದರೂ, ವಿಶ್ವವಿದ್ಯಾಲಯದ ಅಧಿಕಾರಿಗಳು ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಒಂದು ಕಾರಣದಿಂದ ಸಿಕ್ಕಿಬಿದ್ದಿದ್ದಾನೆ ನೋಡಿ..

ಹೊಸದಿಲ್ಲಿ (ಜನವರಿ 15, 2024): ಪಂಜಾಬ್‌ನ ಫರೀದ್‌ಕೋಟ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಯುವಕನೊಬ್ಬ ತನ್ನ ಗೆಳತಿಯಂತೆ ಡ್ರೆಸ್ ಮಾಡಿಕೊಂಡು, ಆಕೆಯಂತೆ ವೇಷ ಧರಿಸಿ ಎಕ್ಸಾಂ ಬರೆಯಲು ಹೋಗಿರುವ ಘಟನೆ ನಡೆದಿದೆ. ಪರೀಕ್ಷಾ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದ ವ್ಯಕ್ತಿ ಕೊನೆಗೆ ತಾನೇ ಸಿಕ್ಕಿಬಿದ್ದಿದ್ದಾನೆ. 

ಜನವರಿ 7 ರಂದು, ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ, ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್‌ಜಿತ್ ಕೌರ್ ವೇಷ ಧರಿಸಿ ಪರೀಕ್ಷೆ ಬರೆಯಲು ನಿರ್ಧರಿಸಿದ. 

ಇದನ್ನು ಓದಿ: 24 ವರ್ಷದಿಂದ ಅಮ್ಮ ಬಳಸ್ತಿದ್ದ ಮಸಾಲೆ ಡಬ್ಬ ನೋಡಿದ ಮಗಳು ಕಂಗಾಲು!

ಮಹಿಳೆಯರ ಉಡುಗೆ ಧರಿಸಿದ್ದಲ್ಲದೆ, ಕೆಂಪು ಬಳೆಗಳು, ಬಿಂದಿ, ಲಿಪ್‌ಸ್ಟಿಕ್ ಹಾಕಿಕೊಂಡು ಅಲಂಕಾರ ಮಾಡಿಕೊಂಡಿದ್ದ. ಆದರೂ, ವಿಶ್ವವಿದ್ಯಾಲಯದ ಅಧಿಕಾರಿಗಳು ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. 

ಅಂಗ್ರೇಜ್ ಸಿಂಗ್ ನಕಲಿ ವೋಟರ್‌ ಐಡಿ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಬಳಸಿಕೊಂಡು ತಾನು ಪರಮ್ಜಿತ್‌ ಕೌರ್‌ ಅಂತ ಸಾಬೀತುಪಡಿಸಿದ್ದ. ಆದರೆ, ಬಯೋಮೆಟ್ರಿಕ್ ಸಾಧನದಲ್ಲಿ ನಿಜವಾದ ಅಭ್ಯರ್ಥಿಯ ಫಿಂಗರ್‌ಪ್ರಿಂಟ್‌ಗಳನ್ನು ಹೊಂದಿಸಲು ಅವನ ಬೆರಳಚ್ಚುಗಳು ವಿಫಲವಾದ ನಂತರ ವಿವಿ ಸಿಬ್ಬಂದಿಗೆ ಅನುಮಾನ ಬಂದು ಆತನನ್ನು ವಿಚಾರಣೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಆತನ ಎಲ್ಲ ಪ್ಲ್ಯಾನ್‌ ವರ್ಕೌಟ್‌ ಆಗಿದ್ದರೂ, ಇದರಲ್ಲಿ ಸಿಕ್ಕಿಬಿದ್ದಿದ್ದಾನೆ.

ಇದನ್ನು ಓದಿ: ಬಾಲಕನ ಹೊಟ್ಟೆಯೊಳಗಿದೆ ಟ್ರಾಕ್ಟರ್, ಮಿಮಿಕ್ರಿಗೆ ಮನಸೋತ ಆನಂದ್ ಮಹೀಂದ್ರ!

ಈ ಹಿನ್ನೆಲೆ ಗರ್ಲ್‌ಫ್ರೆಂಡ್‌ ಪರಮ್ಜಿತ್‌ ಕೌರ್‌ ಅರ್ಜಿಯನ್ನು ವಜಾ ಮಾಡಿದ್ದು, ಇದರ ಜತೆಗೆ ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮ ಪ್ರಾರಂಭಿಸಲಾಗಿದೆ.

Scroll to load tweet…

ಇನ್ನು ಓದಿ: ಕ್ಯಾನ್ಸರ್ ಮೂರನೇ ಸ್ಟೇಜಲ್ಲಿದ್ದರೂ ಧೈರ್ಯದಿಂದ ಲೈವಲ್ಲೇ ಎಚ್ಚರಿಕೆ ಕೊಟ್ಟ ಆ್ಯಂಕರ್