Asianet Suvarna News Asianet Suvarna News

24 ವರ್ಷದಿಂದ ಅಮ್ಮ ಬಳಸ್ತಿದ್ದ ಮಸಾಲೆ ಡಬ್ಬ ನೋಡಿದ ಮಗಳು ಕಂಗಾಲು!

ಅಡುಗೆ ಮನೆಯ ಮೂಲೆಯಲ್ಲೊಂದು ಕೊಳೆತ ಟೊಮೊಟೊ ಅಥವಾ ಬಾಡಿದ ಆಲೂಗಡ್ಡೆ ಇರೋದು ಸಾಮಾನ್ಯ. ಹಾಗೆ ಹಳೆ ಮಸಾಲೆ ಕವರ್ ನಲ್ಲಿ ಒಂದು ಚಮಚ ಮಸಾಲೆ ಇದ್ರೂ ಅದು ಬೇಕಾಗುತ್ತೆ ಅಂತಾ ಮಹಿಯರು ಜೋಪಾನ ಮಾಡಿರ್ತಾರೆ. ಕೆಲವೊಮ್ಮೆ ಇವರ ಕೆಲಸ ಯುವಕರನ್ನು ದಂಗುಬಡಿಸುತ್ತೆ. ಅದಕ್ಕೆ ಈ ಘಟನೆ ಸಾಕ್ಷ್ಯ. 
 

Trending Woman Reacts Finding Twenty Four Year Old Expired Spices In Mothers Kitchen roo
Author
First Published Jan 11, 2024, 2:26 PM IST

ತಾಯಿಯಾದವಳು ಯಾವಾಗಲೂ ಮಕ್ಕಳ ಒಳಿತನ್ನೇ ಬಯಸುತ್ತಾಳೆ. ಮಕ್ಕಳಿಗಾಗಿ ಹಗಲು ರಾತ್ರಿ ಶ್ರಮವಹಿಸಿ ದುಡಿಯುತ್ತಾಳೆ. ತನಗೆ ಎಷ್ಟೇ ಆಯಾಸವಾಗಿದ್ದರು ಕೂಡ ಮಕ್ಕಳಿಗೆ ಇಷ್ಟವಾಗುವ ತಿಂಡಿಯನ್ನೇ ಮಾಡಿ ಬಡಿಸುತ್ತಾಳೆ. ಅಮ್ಮನ ಕೈರುಚಿಗೆ ಹಾಗೂ ಅವಳ ನಿಸ್ವಾರ್ಥ ಸೇವೆಗೆ ಸರಿಸಾಟಿ ಬೇರೆ ಯಾವುದೂ ಇಲ್ಲ. ಆದರೆ ಆಧುನಿಕ ಯುಗದಲ್ಲಿ ಆಹಾರ ಶೈಲಿ ಬದಲಾಗಿದೆ. ಇದಕ್ಕೆ ಹಿರಿ ವಯಸ್ಸಿನ ಮಹಿಳೆಯರು ಹೊಂದಿಕೊಳ್ಳೋದು ಕಷ್ಟ. 

ಹಿಂದಿನ ಕಾಲದಲ್ಲಿ ಮಸಾಲೆ (Spice) ಪದಾರ್ಥಗಳು ಹಾಗೂ ತರಕಾರಿಗಳು ಸೇರಿದಂತೆ ಹೆಚ್ಚಿನದೆಲ್ಲವನ್ನೂ ಮನೆಯಲ್ಲೇ ತಯಾರಿಸಲಾಗುತ್ತಿತ್ತು. ಆದರೆ  ಈಗ ಹಾಗಲ್ಲ. ಎಲ್ಲರೂ ರೆಡಿಮೇಡ್ (Readymade) ಫುಡ್ ಮೇಲೆ ಅವಲಂಬಿತರಾಗಿದ್ದಾರೆ. ಅವುಗಳ ತಯಾರಿಕೆ, ಶುದ್ಧತೆ, ಗುಣಮಟ್ಟದ ಬಗ್ಗೆ ಹೆಚ್ಚು ಲಕ್ಷ್ಯ ಕೊಡುವುದೇ ಇಲ್ಲ. ಅದರಲ್ಲೂ ಮನೆಯಲ್ಲಿ ವಯಸ್ಸಾದವರಿದ್ದರೆ ಅವರಿಗೆ ಇಂತಹ ಫುಡ್ ಗಳ ಎಕ್ಸ್ಪೈರಿ ಡೇಟ್ (Expiry date) ಗಳ ಕುರಿತು ಗಮನವೂ ಇರುವುದಿಲ್ಲ. ಮನೆಗೆ ಯಾವಾಗ್ಲೋ ತಂದ ಮಸಾಲೆಗಳನ್ನೇ ಈಗ್ಲೂ ಬಳಸುವವರಿದ್ದಾರೆ. ಇಂತಹುದೇ ಒಂದು ನೈಜ ಸಂಗತಿಯ ಬಗ್ಗೆ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ರೆಡಿಮೇಡ್ ಫುಡ್ ಬಳಕೆ ಏನೆಲ್ಲ ಅವಾಂತರ ಸೃಷ್ಟಿಮಾಡುತ್ತೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಮ್ಮ ಬಳಸುತ್ತಿದ್ದ ಮಸಾಲೆ ಡಬ್ಬವನ್ನು ನೋಡಿದ ಮಗಳಿಗೆ ಶಾಕ್ :  ಮೆಕ್ ಗೊನಾಗಲ್ ಹೆಸರಿನ ಯುವತಿ ತನ್ನ ಅಮ್ಮನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ. ಈಕೆಗೆ ಅಮ್ಮನ ಅಡುಗೆಯೆಂದರೆ ಬಹಳ ಪ್ರೀತಿ. ಯಾವಾಗಲೂ ಬಹಳ ರುಚಿಕರವಾಗುತ್ತಿದ್ದ ಅಮ್ಮ ಮಾಡಿದ ಎಪ್ಪಲ್ ಪಾಯಿ ಅಂದಿನ ದಿನ ತನ್ನ ರುಚಿ ಕಳೆದುಕೊಂಡಿತ್ತು. ಅಮ್ಮನ ಕೈರುಚಿಯನ್ನು ಇಷ್ಟಪಡುವ ಗೊನಾಗಲ್ ಗೆ ಅಂದು ಅಮ್ಮನ ಅಡುಗೆ ಯಾಕೋ ಸೇರಲೇ ಇಲ್ಲ. ಆಗ ಅವಳು ಅಮ್ಮನ ಬಳಿ, ಅಮ್ಮ ಇವತ್ತು ಯಾಕೋ ಎಪ್ಪಲ್ ಪಾಯಿ ಟೇಸ್ಟ್ ಆಗಿಲ್ಲ. ಇದರ ರುಚಿ ಕೆಟ್ಟಿದೆ ಎಂದಳು. ಆಗ ಗೊನಾಗಲ್ ತಾಯಿ, ರುಚಿ ಚೆನ್ನಾಗಿಲ್ವಾ, ನಾನು ಯಾವಾಗಲೂ ಬಳಸುವ ಮಸಾಲೆಯನ್ನೇ ಇಂದು ಕೂಡ ಬಳಸಿದ್ದೇನೆ. ಆದರೆ ಜಾಯಿಕಾಯಿ ಸ್ವಲ್ಪ ಜಿಗುಟಾಗಿತ್ತು. ಹಾಗಾಗಿ ಸರಿಯಾಗಿ ಮಿಕ್ಸ್ ಆಗಿಲಿಲ್ಲವೇನೋ  ಎನ್ನುತ್ತ ಡಬ್ಬಿಯಲ್ಲಿದ್ದ ಜಾಯಿಕಾಯಿಯನ್ನು ತೋರಿಸ್ತಾಳೆ.

ಸಸ್ಯಾಹಾರಿಗಳಿಗೆ ಕೋವಿಡ್‌ ಬರುವ ಸಾಧ್ಯತೆ ಶೇ.39ರಷ್ಟು ಕಡಿಮೆ; ಹೊಸ ಅಧ್ಯಯನ

ತಾಯಿ ತೋರಿಸಿದ ಮಸಾಲೆ ಡಬ್ಬವನ್ನು ನೋಡಿದ ಗೊನಾಗಲ್ ಗೆ ಒಮ್ಮೆ ನಿಂತ ನೆಲವೇ ಕುಸಿದಂತಾಗುತ್ತೆ. ಏಕೆಂದರೆ ಆ ಮಸಾಲೆ ಡಬ್ಬಿಯ ಅವಧಿ ಮೀರಿ ಆಗಲೇ 24 ವರ್ಷವಾಗಿತ್ತು. ಮಸಾಲೆ ಡಬ್ಬದ ಮೇಲಿರುವ ಚಿತ್ರದಲ್ಲಿ ಎಕ್ಸಪೈರಿ ಡೇಟ್  ಡಿಸೆಂಬರ್ 16, 1999 ಎಂದು ಬರೆದಿತ್ತು. ಇದನ್ನು ನೋಡಿದ ಗೊನಾಗಲ್ ಮನೆಯಲ್ಲಿರುವ ಮಸಾಲೆ ಡಬ್ಬಗಳ ಅವಧಿಯ ದಿನಾಂಕವನ್ನೂ ಪರೀಕ್ಷೆ ಮಾಡಿದಳು. ಮನೆಯಲ್ಲಿದ್ದ ಮೂವತ್ತು ಡಬ್ಬದಲ್ಲಿ ಕೇವಲ 6 ಡಬ್ಬದಲ್ಲಿ ಮಾತ್ರ ಮಸಾಲೆ ಉಳಿದಿತ್ತು. ಉಳಿದ ಎಲ್ಲವನ್ನೂ ಆಕೆಯ ತಾಯಿ ಬಳಸಿದ್ದಳು. ಈ ಮಸಾಲೆ ಡಬ್ಬ ಹೊರತಾಗಿ ಗೊನಾಗಲ್, ಅನೇಕ ಹಳೆಯ ಹಾಗೂ ಹೆಪ್ಪುಗಟ್ಟಿದ ಮಸಾಲೆಗಳನ್ನು ಮನೆಯಿಂದ ಹೊರಹಾಕಿದಳು. ಇವೆಲ್ಲವುಗಳ ಜೊತೆಗೆ ಗೊನಾಗಲ್ ಬಾಲ್ಯದಲ್ಲಿ ಕುಡಿಯುತ್ತಿದ್ದ ಚೋಕೋ ಮಿಕ್ಸ ಅನ್ನು ಕೂಡ ಆಕೆಯ ತಾಯಿ ಇಟ್ಟುಕೊಂಡಿದ್ದಳು. 

 

ಗೊನಾಗಲ್ ತನ್ನ ತಾಯಿಯ ಬಗ್ಗೆ ಶೇರ್ ಮಾಡಿಕೊಂಡಿರುವ ಈ ಪೋಸ್ಟ್ ಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅಂತಹ ಆಹಾರವನ್ನು ಸೇವಿಸಿದರೂ ನಿಮಗೆ ಏನೂ ಆಗಲಿಲ್ಲವಲ್ಲ ಎಂದಿದ್ದಾರೆ. ಇನ್ಕೆಲವರು ನಮ್ಮ ಮನೆಯಲ್ಲೂ ಹೀಗೇ ಎರಡನೇ ವಿಶ್ವ ಯುದ್ಧದ ಸಮಯದಲ್ಲಿನ ಮಸಾಲೆ ಡಬ್ಬಗಳಿವೆ ಎಂದು ಪೋಸ್ಟ್ ಮಾಡಿದ್ದಾರೆ.

ಎಳ್ಳು ತಿಂದ್ರೆ ಪಿರಿಯೆಡ್ಸ್ ರೆಗ್ಯುಲರ್ ಆಗುತ್ತೆ ಅನ್ನೋದು ನಿಜಾನ?
 

Follow Us:
Download App:
  • android
  • ios