ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದ ಮೂಲಕ ಹಲವು ಕೂತಹಲ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಪುಟ್ಟ ಬಾಲಕನ ಹೊಟ್ಟೆಯೊಳಗೆ ಟ್ರಾಕ್ಟರ್ ಇದೆ ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆನಂದ್ ಮಹೀಂದ್ರ ಇಂಪ್ರೆಸ್ ಮಾಡಿದ ಈ ಬಾಲಕ ಪ್ರತಿಭೆ ಏನು?
ಮುಂಬೈ(ಜ.11) ಉದ್ಯಮಿ ಆನಂದ್ ಮಹೀಂದ್ರ ಸೋಶಿಯಲ್ ಮಿಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಪ್ರತಿ ಬಾರಿ ಹಲವು ರೋಚಕ, ಕುತೂಹಲಕಾರಿ ಮಾಹಿತಿ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇಷ್ಟೇ ಅಲ್ಲ ಖಡಕ್, ಹಾಸ್ಯಭರಿತ ಉತ್ತರದ ಮೂಲಕವೂ ಆನಂದ್ ಮಹೀಂದ್ರ ಭಾರಿ ಜನಪ್ರಿಯರಾಗಿದ್ದಾರೆ. ಇದೀಗ ಆನಂದ್ ಮಹೀಂದ್ರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಟ್ರಾಕ್ಟರ್ ಮೇಲೆ ಕುಳಿತಿರುವ ಈ ಬಾಲಕ, ಟ್ರಾಕ್ಟರ್ ಶಬ್ದವನ್ನು ಮಿಮಿಕ್ರಿ ಮಾಡಿದ್ದಾನೆ. ಈತನ ಪ್ರತಿಭೆಗೆ ಮಾರುಹೋದ ಆನಂದ್ ಮಹೀಂದ್ರ, ಈ ಬಾಲಕನ ಹೊಟ್ಟೆಯೊಳಗೆ ಟ್ರಾಕ್ಟರ್ ಇದೆ ಎಂದಿದ್ದಾರೆ.
ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಬಗೆ ಬಗೆಯ ಕಮೆಂಟ್‌ಗಳು ವ್ಯಕ್ತವಾಗಿದೆ. ಮಹೀಂದ್ರ ಟ್ರಾಕ್ಟರ್ ಮೇಲೆ ಕುಳಿತ ಈ ಬಾಲಕನ ಬಳಿಕ ಮತ್ತೊರ್ವ ಟ್ರಾಕ್ಟರ್ ಮಿಮಿಕ್ರಿ ಮಾಡಲು ಹೇಳಿದ್ದಾನೆ. ಟ್ರಾಕ್ಟರ್ ಚಲಿಸುವ ಶಬ್ದ, ಗೇರ್ ಬದಲಾವಣೆ ಹಾಗೂ ಟ್ರಾಕ್ಟರ್ ಸ್ಪೀಡ್‌ಗೆ ಅನುಸಾರವಾಗಿ ಟ್ರಾಕ್ಟರ್ ಶಬ್ದ ಬದಲಾಗುವ ರೀತಿಯನ್ನು ಮಿಮಿಕ್ರಿ ಮಾಡಿದ್ದಾನೆ.
10 ಸಾವಿರ ರೂಗೆ ಕಾರು ತಯಾರಿಸುತ್ತೀರಾ? ಪರ್ಫೆಕ್ಟ್ ಉತ್ತರ ನೀಡಿದ ಆನಂದ್ ಮಹೀಂದ್ರ!
ಈ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ ಈ ಬಾಲಕನ ಹೊಟ್ಟೆಯೊಳಗೆ ಟ್ರಾಕ್ಟರ್ ಇದೆ. ಆದರೆ ಈ ಟ್ರಾಕ್ಟರ್ ಎಂಜಿನ್ ಕೆಲಸ ಮಾಡುತ್ತಿಲ್ಲ ಎಂದು ಈ ಬಾಲಕ ಮಿಮಿಕ್ರಿ ಮಾಡಿರುವ ಸಾಧ್ಯತೆ ಇಲ್ಲ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹಲವರು ತಮ್ಮ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಾಲ್ಯದ ದಿನಗಳು, ಟ್ರಾಕ್ಟರ್ ಜೊತೆಗಿನ ನಂಟು ಕುರಿತು ಹಲವು ಕತೆಗಳನ್ನು ಹಂಚಿಕೊಂಡಿದ್ದಾರೆ.
ಮತ್ತೆ ಕೆಲವರು ಟ್ರಾಕ್ಟರ್ ಮೂಲಕ ವ್ಯವಸಾಯವನ್ನು ಯಾವ ರೀತಿ ಮಾಡಲಾಗುತ್ತಿದೆ. ಟ್ರಾಕ್ಟರ್ ಹಾಗೂ ಇತರ ಸಲಕರಣೆಗಳಿಂದ ಕೃಷಿ ಚಟುವಟಿಕೆಯಲ್ಲಾಗಿರುವ ಲಾಭಗಳ ಕುರಿತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪಂಜಾಬ್ ಮೂಲದ ರೈತರು, ಅದೆಷ್ಟೇ ದುಬಾರಿ ಕಾರುಗಳು ಮನೆ ಮುಂದೆ ನಿಂತಿದ್ದರೂ ಟ್ರಾಕ್ಟರ್ ಮೇಲಿನರುವ ಅಭಿಮಾನ ಪ್ರೀತಿ ಎಲ್ಲಕ್ಕಿಂತ ಮಿಗಿಲು ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆನಂದ್ ಮಹೀಂದ್ರ ಹೀಗೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ಮಗುವಿನ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಮಹೀಂದ್ರ XUV 700 ಕಾರುಗಳು 700 ರೂಪಾಯಿಗೆ ಖರೀದಿಸಬಹುದು ಅನ್ನೋ ಮುದ್ಗ ಮಗುವಿನ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ, ಹೀಗೆ ಮಾಡಿದರೆ ನಾವು ದಿವಾಳಿಯಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದರು.
ಫೈನಲ್ ಸೋಲಿನ ನೋವಿನಲ್ಲಿರುವ ಹೃದಯಗಳಿಗೆ ಆನಂದ್ ಮಹೀಂದ್ರ ಸೋಮವಾರದ ಮೋಟಿವೇಶನ್!
ಇದೇ ವೇಳೆ ಆನಂದ್ ಮಹೀಂದ್ರ ಹಲವರು ಸಣ್ಣ ಸಣ್ಣ ಕಾರ್ಯಗಳನ್ನು ಪ್ರಶಂಸಿಸಿ ಅವರಿಗೆ ಪ್ರೋತ್ಸಾಹವನ್ನೂ ನೀಡಿದ್ದಾರೆ. ಇತ್ತೀಚೆಗೆ ಅಂಕೋಲಾದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೇರಳೆ ಹಣ್ಣು ಮಾರಾಟ ಮಾಡುವ ಸ್ಥಳೀಯ ಹಾಲಕ್ಕಿ ಸಮುದಾಯದ ಮಹಿಳೆಯನ್ನು ಆನಂದ್ ಮಹೀಂದ್ರ ಪ್ರಶಂಸಿಸಿದ್ದರು. ಸ್ಥಳೀಯವಾಗಿ ಸಿಗುವ ನೇರಳೆ ಹಣ್ಣನ್ನು ಗಿಡದ ಎಲೆಯಲ್ಲಿ ಮಾರಾಟ ಮಾಡಿ ಬಳಿಕ ಪ್ರಯಾಣಿಕರು ಎಸೆದ ಆ ಎಲೆಗಳನ್ನು ಆಯ್ದು ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ ಹಾಲಕ್ಕಿ ಮಹಿಳೆ ಕಾರ್ಯವನ್ನು ಉದ್ಯಮಿ ಆನಂದ ಮಹೀಂದ್ರಾ ಶ್ಲಾಘಿಘಿಸಿದ್ದರು.
