Asianet Suvarna News Asianet Suvarna News

ಕ್ಯಾನ್ಸರ್ ಮೂರನೇ ಸ್ಟೇಜಲ್ಲಿದ್ದರೂ ಧೈರ್ಯದಿಂದ ಲೈವಲ್ಲೇ ಎಚ್ಚರಿಕೆ ಕೊಟ್ಟ ಆ್ಯಂಕರ್

ಸ್ತನ ಕ್ಯಾನ್ಸರ್ ಅಪಾಯ ಈಗ ಮತ್ತಷ್ಟು ಹೆಚ್ಚಾಗ್ತಿದೆ. ಇದನ್ನು ಗೆದ್ದು ಬರೋದು ಸುಲಭವಲ್ಲ. ನೋವಿನ ಮೇಲೆ ನೋವು ತಿಂದು ಧೈರ್ಯ ಪಡೆಯುವ ಕೆಲ ಮಹಿಳೆಯರು ಇನ್ನೊಬ್ಬರಿಗೆ ಮಾದರಿಯಾಗ್ತಾರೆ. 

News Anchor Reveals Her Diagnosis On Live Tv Says I Thank Cancer For Choosing Me roo
Author
First Published Jan 11, 2024, 1:26 PM IST

ಕ್ಯಾನ್ಸರ್ ಜೀವವನ್ನೇ ಕಿತ್ತು ತಿನ್ನುವ ರೋಗ. ಕ್ಯಾನ್ಸರ್ ಗೆ ಈಗ ಅನೇಕ ರೀತಿಯ ಚಿಕಿತ್ಸೆಗಳಿವೆ. ಆದ್ರೆ ಅನೇಕ ಕ್ಯಾನ್ಸರ್ ಲಕ್ಷಣ ಪತ್ತೆಯಾಗೋದೆ ಕೊನೆ ಹಂತದಲ್ಲಿ. ಆಗ ಎಷ್ಟೇ ಚಿಕಿತ್ಸೆ ನೀಡಿದ್ರೂ ಜೀವ ಉಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಒಂದಲ್ಲ ಒಂದು ಹೊಸ ಹೊಸ ಕ್ಯಾನ್ಸರ್ ಹೆಸರುಗಳು ಕೇಳಿ ಬರ್ತಿವೆ. ಕ್ಯಾನ್ಸರ್ ಗೆದ್ದು ಬಂದ ಅನೇಕರು ನಮ್ಮಲ್ಲಿದ್ದಾರೆ. ಕ್ಯಾನ್ಸರ್ ಬಂದಾಗ ಅನುಭವಿಸಿದ ನೋವು, ಅದನ್ನು ಗೆಲ್ಲಲು ಹೋರಾಡಿದ ದಿನಗಳನ್ನು ಅವರು ಜನರ ಮುಂದಿಟ್ಟಿದ್ದಾರೆ. ಈಗ ಅಮೇರಿಕನ್ ಟಿವಿ ನಿರೂಪಕಿ ಸಾರಾ ಸಿಡ್ನರ್ ಕೂಡ ತಮ್ಮ ಕ್ಯಾನ್ಸರ್ ಬಗ್ಗೆ ಎಲ್ಲರ ಮುಂದೆ ಧೈರ್ಯವಾಗಿ ಮಾತನಾಡಿದ್ದಾರೆ. 

ಸಾರಾ (Sara) ಸಿಡ್ನರ್ ಕ್ಯಾನ್ಸರ್ (Cancer) ನ 3ನೇ ಹಂತದಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ. 51 ಸಾರಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದು, ಅದು ವೈರಲ್ (Viral )ಆಗಿದೆ. ಸಾರಾ, ಕಿಮೋಥೆರಪಿಯ ಎರಡನೇ ತಿಂಗಳಿನಲ್ಲಿದ್ದಾರೆ. ಅವರು ವಿಕಿರಣ ಚಿಕಿತ್ಸೆಗೆ ಒಳಗಾಗಲಿದ್ದು, ಡಬಲ್ ಸ್ತನಛೇದನ ಕೂಡ ಇರಲಿದೆ.  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಸಾರಾ, ಟಿವಿ ವೀಕ್ಷಕರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಎಂಟರಲ್ಲಿ ಒಬ್ಬರಿಗೆ ಈಗ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಸಾರಾ ಎಚ್ಚರಿಕೆ ನೀಡಿದ್ದಾರೆ. 

ಸಸ್ಯಾಹಾರಿಗಳಿಗೆ ಕೋವಿಡ್‌ ಬರುವ ಸಾಧ್ಯತೆ ಶೇ.39ರಷ್ಟು ಕಡಿಮೆ; ಹೊಸ ಅಧ್ಯಯನ

ನನ್ನ ಎಂಟು ಜನ ಸ್ನೇಹಿತರಲ್ಲಿ ನನಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. ನನಗೆ ಹಿಂದೆ ಯಾವಾಗ್ಲೂ ಆರೋಗ್ಯ ಸಮಸ್ಯೆ ಆಗಿರಲಿಲ್ಲ ಎಂದಿದ್ದಾರೆ ಸಾರಾ. ನಾನು ಧೂಮಪಾನ ಮಾಡೋಡಿಲ್ಲ, ಅತಿ ಕಡಿಮೆ ಮದ್ಯಪಾನ ಮಾಡ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇಲ್ಲ. ಆದ್ರೂ ನನಗೆ ಸ್ಟೇಜ್ 3 ಸ್ತನ ಕ್ಯಾನ್ಸರ್ ಆಗಿದೆ ಎಂದು ಸಾರಾ ವಿಡಿಯೋದಲ್ಲಿ ಹೇಳಿದ್ದಾರೆ.

ಸಾರಾ ತಮ್ಮ ವಿಡಿಯೋದಲ್ಲಿ ಮಹಿಳೆಯರಿಗೆ ವಿನಂತಿ ಮಾಡಿದ್ದಾರೆ, ದಯವಿಟ್ಟು, ಬಿಳಿ, ಕಪ್ಪು, ಕಂದು ಎಲ್ಲ ಬಣ್ಣದ ಮಹಿಳೆಯರು ಪ್ರತಿ ವರ್ಷ ಮಮೋಗ್ರಾಮ್ ಮಾಡಿಸಿ. ಅದಕ್ಕಿಂತ ಮೊದಲು ಸ್ವಯಂ ಪರೀಕ್ಷೆಗೆ ಒಳಗಾಗಿ ಎಂದಿದ್ದಾರೆ. ಕ್ಯಾನ್ಸರ್ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ಕ್ಯಾನ್ಸರ್ ಗೆ ಧನ್ಯವಾದ ಹೇಳುತ್ತೇನೆ ಎಂದು ಸಾರಾ ವಿಡಿಯೋದಲ್ಲಿ ಹೇಳಿದ್ದಾರೆ. ಜೀವನದಲ್ಲಿ ನಾವು ಯಾವ ನರಕವನ್ನು ಅನುಭವಿಸಿದರೂ ನಾನು ಈ ಜೀವನವನ್ನು ಹುಚ್ಚಿಯಂತೆ ಪ್ರೀತಿಸುತ್ತೇನೆ ಎಂದು ನಾನು ಅರಿತಿದ್ದೇನೆ ಎಂದು ಸಾರಾ ಹೇಳಿದ್ದಾರೆ.

ಬದುಕುಳಿಯಬೇಕು ಎಂಬುದು ನನ್ನ ಕಲ್ಪನೆಯಲ್ಲಿ ಈಗ ಭಿನ್ನವಾಗಿದೆ. ನನಗೆ ತೊಂದರೆಕೊಡುತ್ತಿದ್ದ ಸಣ್ಣಪುಟ್ಟ ವಿಷ್ಯಗಳಿಗೆ ನಾನು ಈಗ ಗಮನ ನೀಡದ ಕಾರಣ ನಾನು ಖುಷಿಯಾಗಿದ್ದೇನೆ ಎಂದು ಸಾರಾ ಹೇಳಿದ್ದಾರೆ. 
ಸಾರಾ ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕ ಮಹಿಳೆಯರು ಚಿಂತೆಗೊಳಗಾಗಿದ್ದಾರೆ. ಅದ್ರಲ್ಲೂ ವಿಶೇಷವಾಗಿ ಕಪ್ಪು ಮಹಿಳೆಯರಲ್ಲಿ  ಸ್ತನ ಕ್ಯಾನ್ಸರ್‌ ಸಾವಿನ ಅಪಾಯವು ಬಿಳಿ ಮಹಿಳೆಯರಿಗಿಂತ ಶೇಕಡಾ 40 ರಷ್ಟು ಹೆಚ್ಚಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. 

ಇದ್ದಕ್ಕಿದ್ದಂತೆ ಕಾಲು ಊದ್ಕೊಂಡ್ರೆ ಲಿವರ್‌ಗೇನೋ ಆಗಿರುತ್ತೆ! ಆರೋಗ್ಯ ಜೋಪಾನ!

ಸಿಡ್ನರ್ ಅವರ ಧೈರ್ಯವನ್ನು ಜನರು ಮೆಚ್ಚಿದ್ದಾರೆ. ಸಾರಾ ಅಮೆರಿಕದ ಫ್ಲೋರಿಡಾದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ಆಫ್ರಿಕನ್-ಅಮೇರಿಕನ್ ಮತ್ತು ತಾಯಿ ಬ್ರಿಟಿಷ್. ಅವರು ಸಿಎನ್ ಎನ್ ನ್ಯೂಸ್ ಸೆಂಟ್ರಲ್‌ನ ಸಹ ಹೋಸ್ಟ್ ಆಗಿದ್ದಾರೆ. ಅವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಾರೆ. ಎಕ್ಸ್ ಖಾತೆಯಲ್ಲಿ ಸಾರಾ ವಿಡಿಯೋ ನೋಡಿದ ಜನರು, ಬೇಗ ಗುಣಮುಖವಾಗಿ ಬನ್ನಿ ಎಂದು ಹರಸುತ್ತಿದ್ದಾರೆ. 

Follow Us:
Download App:
  • android
  • ios