ಶಾಲಾ ಶುಲ್ಕದ ನಡುವೆ ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ: ಖಾಸಗಿ ಶಾಲೆಗಳ ವಾಹನ ಶುಲ್ಕ ಹೆಚ್ಚಳ?
ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಕೇವಲ ಆನ್‌ಲೈನ್ ಶಿಕ್ಷಣ ಮಾತ್ರ ನಡೀತಾ ಇತ್ತು. ಆದರೆ ಇದೀಗ ಆನ್‌ಲೈನ್ ಬಂದ್ ಆಗಿ ಭೌತಿಕ ತರಗತಿ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ.
ವರದಿ: ನಂದೀಶ್, ಮಲ್ಲೇನಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.10): ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಕೇವಲ ಆನ್‌ಲೈನ್ ಶಿಕ್ಷಣ ಮಾತ್ರ ನಡೀತಾ ಇತ್ತು. ಆದರೆ ಇದೀಗ ಆನ್‌ಲೈನ್ ಬಂದ್ ಆಗಿ ಭೌತಿಕ ತರಗತಿ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ. ಇದರ ಮಧ್ಯೆ ಕೆಲ ಖಾಸಗಿ ಶಾಲೆಗಳಲ್ಲಿ ವಾಹನ ಶುಲ್ಕ ಹೆಚ್ಚಳ ಡೀಸೆಲ್, ವಾಹನದ ಬಿಡಿ ಭಾಗಗಳು, Insurance, ಸರ್ವಿಸ್ ಚಾರ್ಜ್ ಎಲ್ಲವೂ ಸೇರಿದಂತೆ ರೇಟ್ ಹೆಚ್ಚಳವಾಗಿದೆ ಅಂತ ಹೇಳಿ ಪೋಷಕರಿಗೆ ವಾಹನ ಶುಲ್ಕ ದರ ಏರಿಕೆ ಮಾಡಲಾಗಿದೆ.
ಕೆಲ ಖಾಸಗಿ ಶಾಲಾ ಒಕ್ಕೂಟ ಅಡಿಯಲ್ಲಿ ಬರುವ ಖಾಸಗಿ ಶಾಲೆಗಳಲ್ಲಿ ಪ್ರತೀ ಶಾಲೆಯಲ್ಲಿ ಶೇ. 15 ರಿಂದ 20ರಷ್ಟು ಶುಲ್ಕ ಹೆಚ್ಚಿಸಲು ಖಾಸಗಿ ಶಾಲೆಗಳು ಸಭೆ ನಡೆಸಿ ದರ ಏರಿಕೆ ಮಾಡಲು ಖಾಸಗಿ ಶಾಲೆಗಳು ನಿರ್ಧಾರ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಆದರೆ ಕೆಲ ಖಾಸಗಿ ಶಾಲೆಗಳ ನಿರ್ಧಾರಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಯ ಶುಲ್ಕವೂ ಜಾಸ್ತಿ ಮಾಡಲು ಮುಂದಾಗಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾಟ ಕೊಟ್ಟಿದೆ. ಆದ್ರೆ ಇದರ ಮಧ್ಯೆ ವಾಹನ ಶುಲ್ಕ ಹೆಚ್ಚಳ ಮಾಡಿದ್ರೆ ಮತ್ತಷ್ಟು ಕಷ್ಟವಾಗುತ್ತೆ ಅಂತ ಪೋಷಕರು ಅಳಲು ವ್ಯಕ್ತಪಡಿಸಿದ್ದಾರೆ.
ಪಠ್ಯ ತಿರುಚಲು ಖರ್ಚು ಮಾಡ್ತೀರಿ, ಶೂಗೆ ಹಣ ಇಲ್ಲವೇ?: ಪ್ರಿಯಾಂಕ್ ಖರ್ಗೆ
ವಾಹನ ಶುಲ್ಕ ಹೆಚ್ಚಳ ಖಾಸಗಿ ಶಾಲಾ ಒಕ್ಕೂಟಗಳಲ್ಲಿ ಪರ- ವಿರೋಧ: ಖಾಸಗಿ ಶಾಲಾ ವಾಹನಗಳ ಶುಲ್ಕ ಹೆಚ್ಚಳ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ವಿರೋಧ ವ್ಯಕ್ತಪಡಿಸಿದೆ. ರುಪ್ಸಾ ವ್ಯಾಪ್ತಿಯ ಶಾಲೆಗಳು ವಾಹನಗಳ ದರ ಏರಿಕೆ ಮಾಡಿಲ್ಲ.ಈ ಶೈಕ್ಷಣಿಕ ವರ್ಷದಲ್ಲಿ ನಾವು ಶುಲ್ಕ ಹೆಚ್ಚಳ ಮಾಡಲ್ಲ.ಯಾಕೆಂದರೆ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಪೋಷಕರಿಗೆ ಮೊದಲೇ ಕೊಟ್ಟಿರುತ್ತೇವೆ. ಶುಲ್ಕ ನಿಗದಿ, ವಾಹನ ಶುಲ್ಕ ಎಲ್ಲಾವು ಸೇರಿರುತ್ತೆ. ಆದ್ರೆ ಮಧ್ಯದಲ್ಲಿ ಶುಲ್ಕ ಹೆಚ್ಚಳ ಮಾಡಿದ್ರೆ ಪೋಷಕರಿಗೆ ಹಾಗೂ ಶಾಲಾ ಮಂಡಳಿ ನಡುವೆ ತಿಕ್ಕಾಟ ನಡೆಯುವ ಸಾಧ್ಯತೆ ಹೆಚ್ಚು ಇರುತ್ತೆ.
ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು
ಇನ್ನು ಮುಂದಿನ ಶೈಕ್ಷಣಿಕ ವರ್ಷ ಶಾಲಾವಾಹನ ದರ ಹೆಚ್ಚಳ ಮಾಡಲಾಗುವುದು ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಅಲ್ಲದೆ ಈಗಷ್ಟೇ ಚೇತರಿಕೆ ಕಾಣ್ತಿರೋ ಜನರಿಗೆ ಶಾಲಾ ವಾಹನಗಳ ದರ ಏರಿಕೆ ಮಾಡೋದು ಬೇಡ. ಬರುವ ವರ್ಷ ಮಾಡಿದರೆ ಸೂಕ್ತ ಎನ್ನುತ್ತಿರುವ ಕೆಲ ಪೋಷಕರು ಈಗ ವಾಹನ ಶುಲ್ಕ ಹೆಚ್ಚಳ ಮಾಡಿದ್ರೆ ಕಷ್ಟವಾಗಲಿದೆ ಹಾಗೂ ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯ ಮಾಡಿದ್ದಾರೆ.