ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು
* ಬಡ ಶಾಲಾ ಮಕ್ಕಳಿಂದ ಶೂ-ಸಾಕ್ಸ್‌ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಶಿಕ್ಷಣ ವಿರೋಧಿ ನಾಗೇಶ್
* ಸಚಿವ ನಾಗೇಶ್ ಮನುಷ್ಯತ್ವ ಇಲ್ಲ, ವಜಾ ಮಾಡಿ: ಸಿದ್ದರಾಮಯ್ಯ
* ಸರ್ಕಾರಿ ಶಾಲಾ ಮಕ್ಕಳಿಗೆ ಅಗೌರವ ತೋರಿದ ನಾಗೇಶ್
ಬೆಂಗಳೂರು(ಜು.10): ಶಾಲಾ ಮಕ್ಕಳ ಶೂ, ಸಾಕ್ಸ್ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿದ್ದೆ ಬಿಡಿಸಬೇಕಾದರೆ ನಾವು ಎಚ್ಚರಿಸಬೇಕಾಯಿತು. ಬಡ ಶಾಲಾ ಮಕ್ಕಳಿಂದ ಶೂ-ಸಾಕ್ಸ್‌ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಶಿಕ್ಷಣ ವಿರೋಧಿ ಬಿ.ಸಿ. ನಾಗೇಶ್ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್ ಅವರ ಎಡವಟ್ಟುಗಳು ಒಂದೋ, ಎರಡೋ? ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ನಾಡಿನ ಗಣ್ಯರಿಗೆ ಅವಮಾನ ಮಾಡಿದ ಇವರು ಸರ್ಕಾರಿ ಶಾಲಾ ಮಕ್ಕಳಿಗೆ ಅಗೌರವ ತೋರಿದ್ದಾರೆ ಅಂತ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ನನ್ನ ಗುರು, ನಾನು ಅವರ ಶಿಷ್ಯನೇ: ಸಚಿವ ಎಂಟಿಬಿ ನಾಗರಾಜ್
ತಮ್ಮ ಜವಾಬ್ದಾರಿ ನಿರ್ವಹಿಸಲು ಕೈಲಾಗದೆ ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕಾಗಿಯೇ ಹೊರತು ಶೂ, ಸಾಕ್ಸ್‌ಗಾಗಿ ಅಲ್ಲ ಎಂದು ಹೇಳಿದ್ದರು. ಸರ್ಕಾರಕ್ಕೆ ಶೂ, ಸಾಕ್ಸ್ ನೀಡಲೂ ಯೋಗ್ಯತೆ ಇಲ್ಲದಿದ್ದರೆ ನಮ್ಮ ಪಕ್ಷದಿಂದಲೇ ನೀಡುವುದಾಗಿ ಪ್ರಕಟಿಸಿದ ಬಳಿಕ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಆದೇಶ ಮಾಡಿದ್ದಾರೆ. ಅವರ ನಿದ್ದೆ ಬಿಡಿಸಬೇಕಾದರೂ ನಾವೇ ಎಚ್ಚರಿಸಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.