ಮಧ್ಯಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಕೈಯಲ್ಲಿ ಗಾಳಿ ಹಾಕಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಬಿಸಿಲ ಧಗೆಗೆ ಸುಸ್ತಾದ ಬಾಲಕನಿಂದ ಸೇವೆ ಮಾಡಿಸಿಕೊಂಡ ಶಿಕ್ಷಕಿ

ಬೇಸಿಗೆಯ ಸೆಖೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಾಣಿ ಪಕ್ಷಿಗಳು ಬಿಸಿಲ ಧಗೆ ತಡೆದುಕೊಳ್ಳಲಾಗದೇ ಪರಿತಪಿಸುತ್ತಿವೆ. ಅನೇಕರು ಬಿಸಿಲ ದಾಹವನ್ನು ಕಡಿಮೆ ಮಾಡಿಕೊಳ್ಳಲು ತಂಪು ಪಾನೀಯ ಎಳನೀರು ಐಸ್‌ಕ್ರೀಂ ಮೊರೆ ಹೋಗುತ್ತಿದ್ದಾರೆ. ಹೀಗಿರುವಾಗ ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಕೈಯಲ್ಲಿ ಗಾಳಿ ಹಾಕಿಸಿಕೊಳ್ಳುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ವಿದ್ಯಾರ್ಥಿಗಳಿಗೆ ಪಾಠ ಮಾಡೋದು ಬಿಟ್ಟು ಗಾಳಿ ಹಾಕಿಸಿಕೊಂಡ ಶಿಕ್ಷಕಿ

ವೈರಲ್ ಆಗಿರುವ ವೀಡಿಯೋದಲ್ಲಿ ಬಾಲಕ ಸಣ್ಣ ಪೇಪರ್ ಬೀಸಣಿಕೆಯಿಂದ ಟೀಚರ್‌ಗೆ ಗಾಳಿಯಾಡಿಸುತ್ತಿದ್ದರೆ ಶಿಕ್ಷಕಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಫೋನ್‌ನಲ್ಲಿ ಮಾತನಾಡುತ್ತಾ ಪುಸ್ತಕದಲ್ಲಿ ಏನೋ ಬರೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇತ್ತ ಬಾಲಕ ಟೀಚರ್‌ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ ಒಮ್ಮೆ ಎಡಗೈನಿಂದ ಮತ್ತೊಮ್ಮೆ ಬಲಗೈನಿಂದ ಗಾಳಿ ಬೀಸುತ್ತಾ ಸುಸ್ತಾದಂತೆ ಕಾಣುತ್ತಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವೀಡಿಯೋ ವೈರಲ್ ಆಗ್ತಿದ್ದಂತೆ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಇಂತಹ ಶಿಕ್ಷಕಿಯನ್ನು ಅಮಾನತು ಮಾಡಿ ಜನರಿಗೆ ಗಾಳಿ ಹಾಕುವ ಶಿಕ್ಷೆ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕನ ಮುಖ ನೋಡಿದರೆ ಅಯ್ಯೋ ಎನಿಸುತ್ತಿದೆ ಆತ ಟೀಚರ್‌ಗೆ ಗಾಳಿ ಬೀಸಿ ಆತನ ಕೈಗಳು ಸುಸ್ತಾದಂತೆ ಕಾಣುತ್ತಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಶಾಲೆಯಿಂದ ಹೊರತಳ್ಳುವಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಲಾಲಿ ಹಾಡಿ ಮಲಗಿಸಿದವಳ ಚಿರನಿದ್ರೆಗೆ ಜಾರಿಸಿದ ಮಗ: 4ನೇ ಮಹಡಿಯಿಂದ ಕೆಳಗೆಸೆದು ಮಗನಿಂದಲೇ ಅಮ್ಮನ ಹತ್ಯೆ

ಸರ್ಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ, ದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸ್ಥಿತಿ ಶೋಚನಿಯವಾಗಿದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಅವರ ಪುಟ್ಟ ಕೈಗಳಲ್ಲಿ ತಮ್ಮೆಲ್ಲಾ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಕೆಲ ತಿಂಗಳ ಹಿಂದೆ ಶಿಕ್ಷಕಿಯೊಬ್ಬರು ಪುಟ್ಟ ಮಕ್ಕಳ ಕೈನಿಂದ ಮೈಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಉತ್ತರ ಪ್ರದೇಶದ ಚಿತ್ರಕೂಟದ ಶಾಲೆಯೊಂದರ ಶಿಕ್ಷಕಿ ಮಧುಕುಮಾರಿ ಶಾಲೆಯ ನೆಲದ ಮೇಲೆ ಉದ್ದನೇ ಮಲಗಿ ಮಕ್ಕಳಿಂದ ತುಳಿಸಿಕೊಂಡು ಮಸಾಜ್ ಮಾಡಿಸಿಕೊಂಡಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆದ ನಂತರ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ: ಸಂಸದ ರಾಘವ್ ಚಡ್ಡಾಗೆ ಈಗ 'ಜೆಡ್' ಕೆಟಗರಿ ಭದ್ರತೆ ನೀಡಿದ ಕೇಂದ್ರ

Scroll to load tweet…