ಬೆಂಗಳೂರಿನ ಆರ್ ಆರ್ ನಗರದಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ 72 ವರ್ಷದ ತಾಯಿಯನ್ನು ಅವರ ಮಗನೇ ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ.

ಅಮ್ಮನ ಅನಾರೋಗ್ಯವೇ ಮಗನಿಗೆ ಹೊರೆಯಾಯಿತೇ?

ಬೆಂಗಳೂರು: ಅನಾರೋಗ್ಯಕ್ಕೆ ಒಳಗಾಗಿದ್ದ ತಾಯಿಯನ್ನೇ ಮಗನೋರ್ವ 4ನೇ ಮಹಡಿಯಿಂದ ಕೆಳಗೆಸೆದು ಕೊಂದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ನಡೆದಿದೆ. 72 ವರ್ಷದ ಸಾವಿತ್ರಮ್ಮ ಮಗನಿಂದಲೇ ಹೀಗೆ ಭಯಾನಕವಾಗಿ ಹತ್ಯೆಗೀಡಾದ ಮಹಿಳೆ. ಮೃತ ಸಾವಿತ್ರಮ ಅವರು ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಇವರ ಆರೈಕೆ ಮಾಡಿ ರೋಸಿ ಹೋಗಿದ್ದ ಮಗ ಅವರನ್ನೇ ಕೊಲ್ಲುವ ಕಠೋರ ನಿರ್ಧಾರ ಮಾಡಿದ್ದು, ತಾನು ವಾಸ ಮಾಡುತ್ತಿದ್ದ ಕಟ್ಟಡದ 4ನೇ ಮಹಡಿಯಿಂದ ಕೆಳಗೆ ಎಸೆದು ಅವರನ್ನು ಸಾಯಿಸಿದ್ದಾನೆ. 4ನೇ ಮಹಡಿಯಿಂದ ಕೆಳಗೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಹಾಸಿಗೆ ಹಿಡಿದಿದ್ದ ಅಮ್ಮನನ್ನು ಮಹಡಿಯಿಂದ ಕೆಳಗೆಸೆದು ಕೊಂದ ಮಗ

ಆರ್ ಆರ್ ನಗರದ ಬಿಯಿಎಂಎಲ್ ಲೇಔಟ್‌ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿತ್ರಮ್ಮ ಅವರ 42 ವರ್ಷದ ಮಗ ವೆಂಕಟೇಶ್ ತಾಯಿಯನ್ನೇ ಕೊಲೆ ಮಾಡಿದ ಆರೋಪಿ.

ಇದನ್ನೂ ಓದಿ: ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ: ಸಂಸದ ರಾಘವ್ ಚಡ್ಡಾಗೆ ಈಗ 'ಜೆಡ್' ಕೆಟಗರಿ ಭದ್ರತೆ ನೀಡಿದ ಕೇಂದ್ರ

ತಾಯಿಯ ನಿರಂತರವಾದ ಅನಾರೋಗ್ಯವನ್ನು ನೋಡುವುದಕ್ಕೆ ಸಾಧ್ಯವಾಗದೇ ಅವರನ್ನು ಸಾಯಿಸುವ ನಿರ್ಧಾರ ಮಾಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ವೆಂಕಟೇಶ್‌ಗೆ ಮದುವೆಯಾಗಿದ್ದು ತನ್ನ ಪತ್ನಿಯ ಜತೆ 2ನೇ ಮಹಡಿಯಲ್ಲಿ ವಾಸವಿದ್ದ. ಘಟನೆ ನಡೆದಂದು ತಾಯಿಯನ್ನು 4ನೇ ಮಹಡಿಗೆ ಎತ್ತಿಕೊಂಡು ಹೋದ ಆರೋಪಿ ಬಳಿಕ ಆಕೆಯನ್ನು 4ನೇ ಮಹಡಿಯಿಂದ ಕೆಳಗೆಸೆದಿದ್ದಾನೆ. ಘಟನೆಯ ಬಳಿಕ ಪೊಲೀಸರು ಪಾಪಿ ಮಗನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದ ಆರೋಪಿಯ ಮಾನಸಿಕ ಸ್ಥಿತಿ ಬಗ್ಗೆಯೂ ವೈದ್ಯರ ಮೂಲಕ ಪರಿಶೀಲಿಸಲಾಗುತ್ತಿದೆ.

ಲಾಲಿ ಹಾಡಿ ಮಲಗಿಸಿದವಳ ಚಿರನಿದ್ರೆಗೆ ಜಾರಿಸಿದ ಪಾಪಿ ಮಗ

ಬಾಲ್ಯದಲ್ಲಿ ಮಕ್ಕಳಿಗೆ ಅನಾರೋಗ್ಯವಾದರೆ ಮಗು ಸಂಪೂರ್ಣವಾಗಿ ಹುಷಾರಾಗುವವರೆಗೆ ಅಮ್ಮನಿಗೆ ಸರಿಯಾಗಿ ನಿದ್ದೆಯೇ ಬರದು. ಆಕೆ ತನಗೆ ಸಾಧ್ಯವಾದ ಎಲ್ಲಾ ಆರೈಕೆಗಳನ್ನು ಮಗುವಿಗಾಗಿ ಮಾಡುತ್ತಾಳೆ. ಅಂತಹ ತಾಯಿ ತನ್ನ ಇಳಿವಯಸ್ಸಿನಲ್ಲಿ ಅನಾರೋಗ್ಯಪೀಡಿತವಾದರೆ ಆಕೆಯನ್ನು ನೋಡುವುದು ಮಕ್ಕಳ ಕರ್ತವ್ಯ. ಅಮ್ಮನಿಲ್ಲದ ಮಕ್ಕಳು ಛೇ ಅಮ್ಮ ಇದ್ದಿದ್ದರೆ ಎಂದು ಮರುಗುತ್ತಿದ್ದರೆ ಇಲ್ಲಿ ಪಾಪಿ ಮಗ ಅನಾರೋಗ್ಯಕ್ಕೀಡಾದ ಅಮ್ಮನನ್ನು ಕೊಂದೇ ಬಿಟ್ಟಿರುವುದು ವಿಧಿ ವಿಪರ್ಯಾಸವೇ ಸರಿ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ