Funny husband wife fancy dress kid: ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ಇಡಲಾಗುವುದು. ಇತ್ತೀಚೆಗೆ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಶಾಲೆಯಲ್ಲಿ ಪ್ರಾಜೆಕ್ಟ್‌ ವರ್ಕ್‌, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಈಗ ಪುಟ್ಟ ಪೋರ ವಿಶೇಷ ಕಾಸ್ಟ್ಯೂಮ್‌ ಹಾಕಿ ಗಮನಸೆಳೆದಿದ್ದಾನೆ. 

ಶಾಲೆಯೊಂದರಲ್ಲಿ ಮಗುವಿಗೆ ಅಪಘಾತ ಆಗಿದೆ ಅಥವಾ ಹೊಡೆದು ಗಾಯ ಆಗಿದೆ ( Funny husband wife fancy dress kid ) ಎನ್ನುವ ರೀತಿಯಲ್ಲಿ ಕಾಸ್ಟ್ಯೂಮ್‌ ಹಾಕಿಸಲಾಗಿದೆ. ಇದನ್ನು ನೋಡಿ ಅನೇಕರು ನಕ್ಕಿದ್ದಾರೆ. ಕೆಲವರು ಹೊಗಳಿದರೆ, ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಈ ಮಗು ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಪ್ರಥಮ ಬಹುಮಾನ ಗೆದ್ದುಕೊಂಡಿದೆ. ಮಗುವಿಗೆ ಯಾರೋ ಹೊಡೆದು, ಗಾಯ ಆದ ರೀತಿಯಲ್ಲಿ ಕಾಸ್ಟ್ಯೂಮ್‌ ಮಾಡಲಾಗಿದೆ. ಇದನ್ನು ನೋಡಿದರು ನಕ್ಕು, ನಕ್ಕು ಸುಸ್ತಾಗಿದ್ದಾರೆ.

ಟೈಟಲ್‌ ನೋಡಿ ಎಲ್ಲರಿಗೂ ಕಂಗಾಲು!

ಈ ಛದ್ಮವೇಷಕ್ಕೆ "ನಾನು ನನ್ನ ಹೆಂಡತಿಯೊಂದಿಗೆ ಜಗಳ ಆಡಿದೆ" ಎಂಬ ಟೈಟಲ್‌ ಕೊಟ್ಟಿದ್ದಾರೆ. ಇದನ್ನು ಅವನು ಬೋರ್ಡ್‌ ಮಾಡಿಕೊಂಡು, ದೇಹಕ್ಕೆ ಅಂಟಿಸಿಕೊಂಡಿದ್ದಾನೆ. ಆ ಹುಡುಗ ಕೂಡ ಸಪ್ಪೆ ಮುಖ ಹಾಕಿಕೊಂಡಿದ್ದನು. ಇದನ್ನು ನೋಡಿದವರೆಲ್ಲರೂ ನಕ್ಕಿದ್ದಾರೆ. ಹೆಂಡತಿ ಜೊತೆ ಜಗಳ ಆಗಿದ್ದಕ್ಕೆ ಇಷ್ಟೆಲ್ಲ ಆಯ್ತು ಎಂದು ಅವನ ಮುಖಭಾವ ಹೇಳುತ್ತಿತ್ತು. ಒಟ್ಟಿನಲ್ಲಿ ಈ ಕ್ರಿಯೇಟಿವಿಟಿ ನೋಡಿ ಎಲ್ಲರೂ ನಕ್ಕಿದ್ದಾರೆ.

ದುಬಾರಿಯಲ್ಲ

ಕೆಲವೊಮ್ಮೆ ಜನರ ಹೃದಯಗಳನ್ನು ಗೆಲ್ಲಲು ತುಂಬ ಶ್ರಮ ಬೇಕಿಲ್ಲ, ಅದರ ಬದಲಿಗೆ ಸೃಜನಶೀಲತೆ, ಹಾಸ್ಯಪ್ರಜ್ಞೆ, ಪರಿಪೂರ್ಣ ಮುಖಭಾವವಿದ್ದರೆ ಸಾಕು. ಒಟ್ಟಿನಲ್ಲಿ ಈ ಕಾಸ್ಟ್ಯೂಮ್‌ ಸರಳವಾಗಿದೆ, ತಮಾಷೆಯಿಂದಿದೆ, ಮರೆಯಲಾಗದಂತಿತ್ತು. ಈ ಅತ್ಯುತ್ತಮ ಆಲೋಚನೆಗಳು ದುಬಾರಿಯಾಗಿರಬೇಕಾಗಿಲ್ಲ, ಬುದ್ಧಿವಂತಿಕೆ ಇದ್ದರೆ ಸಾಕು.

ಕೆಲವರಿಂದ ನೆಗೆಟಿವ್‌ ಪ್ರತಿಕ್ರಿಯೆ!

ಒಟ್ಟಿನಲ್ಲಿ ಇಂತಹ ಕಾರ್ಯಕ್ರಮ, ಅಥವಾ ಇಂಥಹ ವೇಷ ಮಾತ್ರ ಮಕ್ಕಳು ಮತ್ತು ಪೋಷಕರು ವರ್ಷಗಟ್ಟಲೆ ನೆನೆದು ನಗುವಂತಹ ನೆನಪುಗಳನ್ನು ಸೃಷ್ಟಿಸುತ್ತವೆ. ಹಾಸ್ಯದೊಂದಿಗೆ ಬೆರೆತ ಶುದ್ಧ ಮುಗ್ಧತೆ ಯಾವಾಗಲೂ ಗೆಲುವಿನ ಸಂಯೋಜನೆಯಾಗಿದೆ. ಆದರೆ ಮಗುವಿಗೆ ಈ ರೀತಿ ಛದ್ಮವೇಷ ಹಾಕಿಸಬಾರದಿತ್ತು, ಪತ್ನಿಯೇ ಯಾವಾಗಲೂ ದಬ್ಬಾಳಿಕೆ ಮಾಡುತ್ತಾಳೆ ಎಂದು ಬಿಂಬಿಸಬಾರದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.