ಒಂದು ಕಡೆ ಬಸ್ ಇಲ್ಲ, ಇನ್ನೊಂದು ಕಡೆ ಕಟ್ಟಡ ಇಲ್ಲ; ಬೀದಿಗೆ ಬಂದ ವಿದ್ಯಾರ್ಥಿಗಳು!
ಕಾಲೇಜ್ ನಡೆಸುತ್ತಿರುವ ಬಿಲ್ಡಿಂಗ್ ಬಾಡಿಗೆ ಕಟ್ಟದಿರುವ ಹಿನ್ನೆಲೆ ಕಟ್ಟಡದ ಮಾಲೀಕ ಹಾಗೂ ಮ್ಯಾನೇಜ್‌ಮೆಂಟ್ ನಡುವೆ ಜಟಾಪಟಿ ನಡೆದಿದೆ. ಮಾತಿನ ಚಕಮಕಿ ತೀವ್ರವಾಗಿ ಕಟ್ಟಡ ಮಾಲೀಕರು ಶಾಲಾ ಕಾಲೇಜಿಗೆ ಬೀಗ ಹಾಕಿದ್ದಾರೆ. ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿಗಳು ಕೊಠಡಿಯಿಂದ ಬೀದಿಗೆ ಬಂದಿದ್ದಾರೆ.
ತುಮಕೂರು (ನ.28) : ಸರ್ಕಾರಿ ಶಾಲೆ ಅಭಿವೃದ್ಧಿ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಕೆಲವು ಕಡೆ ಕನಿಷ್ಟ ಮೂಲಭೂತ ಸೌಲಭ್ಯಗಳಿಲ್ಲ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ದಿನನಿತ್ಯ ಪರದಾಡುತ್ತಿದ್ದಾರೆ. ಬಸ್ ಸೌಲಭ್ಯ ಕಲ್ಪಿಸದೆ ಸರ್ಕಾರದ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುವುದು ಅನುಮಾನ.
ಶಾಲಾ-ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಆಕ್ರೋಶಗೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ತುಮಕೂರಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಆಲದಮರದ ಬಳಿ ವಿದ್ಯಾರ್ಥಿಗಳು ಜಮಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ದಿನನಿತ್ಯ ಶಾಲೆ ಕಾಲೇಜಿಗೆ ಹೋಗಿಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಹೋಗಿಬರಲು ಅನುಕೂಲವಿಲ್ಲದೆ ಮನೆಯಲ್ಲೇ ಉಳಿದಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ, ಸಾರಿಗೆ ಸಂಸ್ಥೆಯೂ ಸ್ಪಂದಿಸುತ್ತಿಲ್ಲ. ತರಗತಿಯಲ್ಲಿ ಕೂಡಬೇಕಾದ ವಿದ್ಯಾರ್ಥಿಗಳು ಬಸ್ ಕಾಯುತ್ತಾ ಹೆದ್ದಾರಿಗೆ ಕೂಡುವಂತಾಗಿದೆ!
Haveri: ಜೀವದ ಹಂಗು ತೊರೆದು ಬಸ್ ಪ್ರಯಾಣ: ಸಾರಿಗೆ ಇಲಾಖೆ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ
ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಿರಾದಿಂದ ಬರುವ ಬಸ್ ಗಳು ವಿದ್ಯಾರ್ಥಿಗಳಿಗೆ ನಿಲ್ಲಿಸುತ್ತಿಲ್ಲ. ಸ್ಟಾಪ್ ಮಾಡುವಂತೆ ಕೇಳಿಕೊಂಡರು ಬಸ್ ಚಾಲಕರು ನಿಲ್ಲಿಸದೇ ಹಾಗೆ ಹೊರಡುತ್ತಾರೆ. ಇದರಿಂದ ಸೂಕ್ತ ಸಮಯಕ್ಕೆ ತರಗತಿ ಹಾಜರಾಗಲು ಆಗುತ್ತಿಲ್ಲ. ಸಂಜೆ ಮನೆ ತಲುಪಲೂ ತೊಂದರೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಕಾಲೇಜ್‌ಗೆ ಬೀಗ: ವಿದ್ಯಾರ್ಥಿಗಳು ಬೀದಿಗೆ
ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮ್ಯಾನೇಜ್‌ಮೆಂಟ್ ಹಾಗೂ ಕಾಲೇಜ್ ಕಟ್ಟಡ ಮಾಲೀಕರ ನಡುವಿನ ಜಟಾಪಟಿಯಲ್ಲಿ ವಿದ್ಯಾರ್ಥಿಗಳು ಬೀದಿಗೆ ಬಂದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಕಾಲೇಜ್ ನಡೆಸುತ್ತಿರುವ ಬಿಲ್ಡಿಂಗ್ ಬಾಡಿಗೆ ಕಟ್ಟದಿರುವ ಹಿನ್ನೆಲೆ ಕಟ್ಟಡದ ಮಾಲೀಕ ಹಾಗೂ ಮ್ಯಾನೇಜ್‌ಮೆಂಟ್ ನಡುವೆ ಜಟಾಪಟಿ ನಡೆದಿದೆ. ಮಾತಿನ ಚಕಮಕಿ ತೀವ್ರವಾಗಿ ಕಟ್ಟಡ ಮಾಲೀಕರು ಶಾಲಾ ಕಾಲೇಜಿಗೆ ಬೀಗ ಹಾಕಿದ್ದಾರೆ. ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿಗಳು ಕೊಠಡಿಯಿಂದ ಬೀದಿಗೆ ಬಂದಿದ್ದಾರೆ.
ದಾವಣಗೆರೆಯ ವಿವೇಕಾನಂದ ಬಡಾವಣೆಯಲ್ಲಿರುವ ಮಹೇಶ್ ಪಿಯು ಕಾಲೇಜ್ ಕಟ್ಟಡದ ಬಾಡಿಗೆ ಕೊಡದ ಹಿನ್ನೆಲೆ ಕಟ್ಟಡ ಮಾಲೀಕರು ಕಾಲೇಜಿಗೆ ಬೀಗ ಹಾಕಿದ್ದಾರೆ. ಕಳೆದ ಒಂದು ವಾರದಿಂದ ಗೇಟ್ ಗೆ ಬೀಗ ಹಾಕಿರುವ ಕಟ್ಟಡದ ಮಾಲೀಕ. ಇದರಿಂದ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ 45 ಜನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೆ ಗೇಟ್ ಮುಂದೆಯೇ ನಿಂತಿದ್ದಾರೆ.
ದಾವಣಗೆರೆ: ಅಪರಿಚಿತ ವಾಹನವೊಂದು ಡಿಕ್ಕಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಸಾವು
ಮ್ಯಾನೇಜ್ಮೆಂಟ್ ಹಾಗೂ ಕಟ್ಟಡ ಮಾಲೀಕರ ನಡುವಿನ ಸಮಸ್ಯೆಯಿಂದಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಪೋಷಕರು ಕಾಲೇಜ್ ಮುಂದೆ ಮೌನ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಜೊತೆಗೆ ಬಂದ ಪೋಷಕರು ಕಾಲೇಜು ಮುಂದೆ ಮೌನ ಪ್ರತಿಭಟನೆಗೆ ಮುಂದಾದ ಪೋಷಕರು. ಪೋಷಕರು ಪ್ರತಿಭಟನೆ ನಡೆಸಿದರೂ ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಇನ್ನೊಂದೆಡೆ ಕಟ್ಟಡದ ಮಾಲೀಕರೂ ಬಾಡಿಗೆ ಕಟ್ಟದೆ ಗೇಟ್ ತೆಗೆಯಲು ಬಿಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಕಳೆದ 8 ದಿನಗಳಿಂದ ತರಗತಿ ಇಲ್ಲದೆ ಕಾಲೇಜ್ ಗೇಟ್ ಬಳಿ ಬಂದು ವಾಪಸ್ ಹೋಗುತ್ತಿರುವ ವಿದ್ಯಾರ್ಥಿಗಳು