Asianet Suvarna News Asianet Suvarna News

ದಾವಣಗೆರೆ: ಅಪರಿಚಿತ ವಾಹನವೊಂದು ಡಿಕ್ಕಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಸಾವು

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಲ್ಲೆದೇವಪುರ ಹಾಗೂ ಬಸಪ್ಪನಟ್ಟಿ ಗ್ರಾಮಗಳ ನಡುವೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಘಟನೆ 

Hampi Kannada University Professor Dies Due to Road Accident in Davanagere grg
Author
First Published Nov 27, 2022, 10:22 AM IST

ದಾವಣಗೆರೆ(ನ.27):  ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವಾಸುದೇವನ್ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಲ್ಲೆದೇವಪುರ ಹಾಗೂ ಬಸಪ್ಪನಟ್ಟಿ ಗ್ರಾಮಗಳ ನಡುವೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. 

ಪುತ್ರ, ಇಬ್ಬರು ವಿದ್ಯಾರ್ಥಿನಿಯರ ಜೊತೆ ವಾಸುದೇವನ್ ಅವರು ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ವಾಹನ‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ ವಾಸುದೇವನ್ ಸಾವನ್ನಪ್ಪಿದ್ದು ಮೂವರಿಗೆ ಗಾಯಗಳಾಗಿವೆ. 

Uttara Kannada : ಹಂಫ್ಸ್‌ ರಹಿತ ಸರ್ವಿಸ್‌ ರಸ್ತೆ: ಅಪಘಾತ ಸಂಖ್ಯೆ ಹೆಚ್ಚಳ

ಗಾಯಾಳುಗಳನ್ನ ದಾವಣಗೆರೆ ಜಿಲ್ಲೆಯ ಜಗಳೂರು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್ಚಿನ  ಚಿಕಿತ್ಸೆಗಾಗಿ ದಾವಣಗೆರೆ ಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಸುದೇವನ್ ಅವರ ಪುತ್ರ ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ‌ಗಳಾಗಿವೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

Follow Us:
Download App:
  • android
  • ios