Haveri: ಜೀವದ ಹಂಗು ತೊರೆದು ಬಸ್ ಪ್ರಯಾಣ: ಸಾರಿಗೆ ಇಲಾಖೆ‌ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ

ಸಮರ್ಪಕ ಬಸ್ ಸೌಲಭ್ಯವಿರದ ಹಿನ್ನೆಲೆಯಲ್ಲಿ ಸಿಗುವ ಒಂದೇ ಬಸ್‌ನಲ್ಲೇ ಜೀವದ ಹಂಗು ತೊರೆದು ವಿದ್ಯಾರ್ಥಿಗಳು  ಪ್ರಯಾಣ ಮಾಡ್ತಿದ್ದಾರೆ. ಎಷ್ಟೇ ಮನವಿ ಮಾಡಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ದ ಬಸ್ ನಿಲ್ದಾಣದ ಮುಂದೆ ಚಾಪೆ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ ಮಾಡಿದರು.

students protest against transport department in haveri gvd

ಹಾವೇರಿ (ಜು.12): ಸಮರ್ಪಕ ಬಸ್ ಸೌಲಭ್ಯವಿರದ ಹಿನ್ನೆಲೆಯಲ್ಲಿ ಸಿಗುವ ಒಂದೇ ಬಸ್‌ನಲ್ಲೇ ಜೀವದ ಹಂಗು ತೊರೆದು ವಿದ್ಯಾರ್ಥಿಗಳು  ಪ್ರಯಾಣ ಮಾಡ್ತಿದ್ದಾರೆ. ಎಷ್ಟೇ ಮನವಿ ಮಾಡಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ದ ಬಸ್ ನಿಲ್ದಾಣದ ಮುಂದೆ ಚಾಪೆ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ ಮಾಡಿದರು. ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿರೋ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು. ಹಾವೇರಿ ಜಿಲ್ಲೆ ಕೋಡಬಾಳ ಗ್ರಾಮದಲ್ಲಿ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರು. 

ಕೋಡಬಾಳದಿಂದ ಅಕ್ಕೂರಿಗೆ ಶಾಲೆಗೆ ತೆರಳೋ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ಕೊರತೆ ಇದೆ. ಪ್ರತಿ ದಿನ ಹೈಸ್ಕೂಲ್‌ಗೆ ಹೋಗಲು 9ಗಂಟೆಗೆ ಬಸ್ ಅವಶ್ಯಕತೆ ಇದೆ. ಆದರೆ ಕೋಡಬಾಳ ಗ್ರಾಮಕ್ಕೆ ಪ್ರತಿದಿನ ಬಸ್ 11:35ಕ್ಕೆ ಬರುತ್ತಿದೆ. ಇದರಿಂದ ನಾವು ಕಾಲೇಜು, ಶಾಲೆಗೆ ಹೋಗುವಷ್ಟರಲ್ಲಿ ಎರಡು ಕ್ಲಾಸ್ ಮುಗಿದಿರುತ್ತವೆ. ಕೋಡಬಾಳದಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ನಲ್ಲಿ ಶಾಲೆಗೆ ಪ್ರಯಾಣಿಸುತ್ತಾರೆ. ಈ ಕುರಿತು ಒಂದು ವರ್ಷದಿಂದ ಬಸ್‌ಗಾಗಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ. ಯಾವ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳ ಅಳಲು ತೋಡಿಕೊಂಡರು.

ಬೇಡ್ತಿ-ವರದಾ ನದಿ‌ ಜೋಡಣೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ: ಸಚಿವ ಶಿವರಾಮ್ ಹೆಬ್ಬಾರ್

ಮಳೆರಾಯನ ಆರ್ಭಟಕ್ಕೆ ನೂರಾರು ಎಕರೆ ಕಬ್ಬು, ಗೋನಿನ ಜೋಳದ ಬೆಳೆ ನಾಶ: ಜಿಲ್ಲಾದ್ಯಂತ  ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮಳೆ ಪ್ರಮಾಣ ಕಡಿಮೆ ಇದ್ದರೂ ಮಲೆನಾಡು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಲವಡೆ ಈ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೆರೂರು ಗ್ರಾಮದಲ್ಲಿ ಮಳೆರಾಯನ ಆರ್ಭಟಕ್ಕೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ ಮತ್ತು ಚೆಂಡುಹೂವಿನ ಬೆಳೆ ನೀರುಪಾಲಾಗಿದೆ.

ಸಮೀಪದ ರಣಕೇರಿ ಹಳ್ಳದಿಂದ ನೀರು ಬರುತ್ತಿದ್ದು ರಸ್ತೆಯ ಪಕ್ಕದಲ್ಲಿ ಜಮೀನುಗಳಲ್ಲಿ ನೀರು ನಿಂತಿದೆ. ಚೆಂಡುಹೂವಿನ ಬೆಳೆಹಾನಿಯಾಗಿದೆ. ಇನ್ನು ಮೆಕ್ಕೆಜೋಳ ಮತ್ತು ಕಬ್ಬಿನ ಬೆಳೆಗೆ ನೀರು ಹೊಕ್ಕಿದ್ದು ರೈತರ ಆತಂಕದಲ್ಲಿದ್ದಾರೆ. ಚೆಂಡುಹೂವು ಬೆಳೆಗೆ ನೀರು ಬಂದರೆ ಕೊಳೆತು ಹೋಗುತ್ತೆ, ಕಬ್ಬಿನ ಜಮೀನಲ್ಲಿ 15 ದಿನ ನೀರು ನಿಂತರೇ ಕೆಂಪಾಗಿ ಹಾಳಾಗುತ್ತೆ, ಇನ್ನು ಮೆಕ್ಕೆಜೋಳ ಸಹ ಅಧಿಕ ನೀರಿಗೆ ಹಾಳಾಗುತ್ತೆ. ಈ ಹಳ್ಳ ಪ್ರತಿ ವರ್ಷ ರೈತರ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿದೆ.

ಸರಾಯಿಗೆ ದಾಸರಾದ ಪತಿರಾಯರು: ಕಳ್ಳಬಟ್ಟಿ ವಿರುದ್ಧ ಮಹಿಳೆಯರ ಉಗ್ರ ಪ್ರತಿಭಟನೆ

ಪ್ರಾಣವನ್ನೇ ಪಣಕ್ಕಿಟ್ಟು‌ ಮೀನು ಹಿಡಿದ ಯುವಕರು: ಕೋಡಿ ಬಿದ್ದು ನೀರು‌ ಹರಿಯೋ‌ ಜಾಗದಲ್ಲಿ ಬಲೆ ಹಾಕಿ ಮೀನು ಹಿಡಿಯೋಕೆ ಕೂತು ಬಿಡ್ತಾರೆ. ಆದರೆ ಮೀನು ಹಿಡಿಯೋ ಹುಚ್ಚಿನಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಯುವಕರು ಹುಚ್ಚಾಟ  ಮಾಡೋ ಪ್ರಸಂಗಗಳು ಕೆಲವೊಮ್ಮೆ ಅತಿರೇಕ ಅನಿಸಿ ಬಿಡುತ್ವೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು  ಮದಗ ಮಾಸೂರು ಕೆರೆ ಹೆಸರು ನೀವು ಕೇಳೇ ಇರ್ತೀರಿ. ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಅನ್ನೋ ಹಾಡು ಬಾಲ್ಯದಲ್ಲಿ ಓದಿದ ನೆನಪಿರಬೇಕಲ್ಲವೇ? ಹೌದು! ಇದು ಅದೇ ಕೆರೆ. 

ಐತಿಹಾಸಿಕ ಮದಗ ಮಾಸೂರು ಕೆರೆ ಕೋಡಿ‌ಬಿದ್ದು ಜಲಪಾತದಂತೆ ದುಮ್ಮಿಕ್ಕುತ್ತಿದೆ. ಸಾವಿರಾರು ಜನ ಈ ದೃಷ್ಯ ಕಣ್ತುಂಬಿಕೊಳ್ಳೋಕೆ ಬರ್ತಿರ್ತಾರೆ. ಆದರೆ ಇಲ್ಲೊಂದು ಯುವಕರ ಗುಂಪು ಭೋರ್ಗರೆಯೋ ನೀರಲ್ಲಿ ಮೀನು ಹಿಡಿಯೋ ದುಸ್ಸಾಹಸ ಮಾಡಿದೆ‌.ಪ್ರಾಣದ ಹಂಗು ತೊರೆದು ಮೀನುಗಳನ್ನು ಹಿಡಿಯುತ್ತಿರುವ ಯುವಕರ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಸ್ವಲ್ಪ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿದರೂ ಹರಿಯೋ ನೀರಿನಲ್ಲಿ ಕೊಚ್ಚಿ ಹೋಗೋ ಸಂಭವ ಇರುತ್ತೆ. ಅಂಥಾದ್ರಲ್ಲಿ ಈ ಯುವಕರು‌ ಬಲೆ  ಹಾಕಿ ಮೀನು ಹಿಡಿಯೋ ದೃಷ್ಯ ಎದೆ ಝಲ್ ಎನಿಸುತ್ತೆ.

Latest Videos
Follow Us:
Download App:
  • android
  • ios