CBSE, NCRTE ಪಠ್ಯಕ್ರಮದಿಂದ ಮೊಘಲರ ಪಾಠಗಳಿಗೆ ಕೊಕ್
12ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಮೊಘಲ… ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ತೆಗೆದುಹಾಕಿದೆ.
ನವದೆಹಲಿ: 12ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಮೊಘಲ… ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ತೆಗೆದುಹಾಕಿದೆ. 2023-24ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ಈ ಸೂಚನೆ ಸಿಬಿಎಸ್‌ಇ ಹಾಗೂ ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸುವ ಎಲ್ಲ ರಾಜ್ಯಗಳಿಗೆ ಅನ್ವಯಿಸಲಿದೆ.
ನವೀಕರಿಸಿದ ಪಠ್ಯಕ್ರಮದ ಪ್ರಕಾರ, ಥೀಮ್ಸ್ ಆಫ್ ಇಂಡಿಯನ್ ಹಿಸ್ಟರಿ-ಪಾರ್ಟ್ 2 ಎಂಬ ಇತಿಹಾಸ ಪುಸ್ತಕದಲ್ಲಿ ಅರಸರು ಹಾಗೂ ಚರಿತ್ರೆ; ಮೊಘಲ್ ನ್ಯಾಯಾಲಯಗಳು (16 ಹಾಗೂ 17ನೇ ಶತಮಾನ) ಪಾಠವನ್ನು ತೆಗೆದು ಹಾಕಲಾಗಿದೆ. ಇದೇ ವೇಳೆ, 12ನೇ ಕ್ಲಾಸ್‌ನ ಸಿವಿಕ್ಸ್ ಪುಸ್ತಕದಲ್ಲಿನ ವಿಶ್ವ ರಾಜಕೀಯದಲ್ಲಿ ಅಮೆರಿಕ ಪ್ರಾಬಲ್ಯ ಹಾಗೂ ಶೀತಲ ಸಮರದ ಯುಗ ಎಂಬ ಅಧ್ಯಾಯ ಕೈ ಬಿಡಲಾಗಿದೆ. 12ನೇ ತರಗತಿಯ ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ ಪಠ್ಯಪುಸ್ತಕದಲ್ಲಿ ಇನ್ನು ಮುಂದೆ ಜನಪ್ರಿಯ ಚಳವಳಿಗಳ ಉದಯ ಮತ್ತು ಒಂದು ಪಕ್ಷದ ಪ್ರಾಬಲ್ಯದ ಯುಗ ಪಾಠಗಳು ಇರುವುದಿಲ್ಲ.
5, 8ನೇ ತರಗತಿಗೆ ಪರೀಕ್ಷೆ :ಬಯಲಾಗಲಿದೆಯಾ CBSE ಬೋಧಿಸುತ್ತಿರುವ ಖಾಸಗಿ ಶಾಲೆಗಳ ಬಣ್ಣ
11ನೇ ತರಗತಿಯ ಪಠ್ಯಪುಸ್ತಕವನ್ನೂ ಎನ್‌ಸಿಇಆರ್‌ಟಿ ನವೀಕರಿಸಿದೆ. ವಿಶ್ವ ಇತಿಹಾಸದಲ್ಲಿ ನಿರೂಪಣೆಗಳು ಪುಸ್ತಕದಲ್ಲಿ ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್, ಸಂಸ್ಕೃತಿಗಳ ಮುಖಾಮುಖಿ ಮತ್ತು ದಿ ಇಂಡಸ್ಟ್ರಿಯಲ್ ರೆವಲ್ಯೂಷನ್ ನಂತಹ ಅಧ್ಯಾಯಗಳನ್ನು ತೆಗೆದುಹಾಕಿದೆ. ಇನ್ನು 10ನೇ ತರಗತಿಯ ಪ್ರಜಾಪ್ರಭುತ್ವ ರಾಜಕೀಯ-2 ಪಠ್ಯಪುಸ್ತಕದಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ, ಜನಪ್ರಿಯ ಹೋರಾಟಗಳು ಮತ್ತು ಚಳವಳಿ ಮತ್ತು ಪ್ರಜಾಪ್ರಭುತ್ವಕ್ಕೆ ಸವಾಲುಗಳು ಅಧ್ಯಾಯಗಳನ್ನು ತೆಗೆದುಹಾಕಿದೆ.
ಏ.1ಕ್ಕೂ ಮುನ್ನ ತರಗತಿ ಆರಂಭ ಮಾಡದಂತೆ CBSE ಸೂಚನೆ