ಏ.1ಕ್ಕೂ ಮುನ್ನ ತರಗತಿ ಆರಂಭ ಮಾಡದಂತೆ CBSE ಸೂಚನೆ

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳನ್ನು ಏ.1ಕ್ಕೂ ಮೊದಲು ಪ್ರಾರಂಭಿಸದಂತೆ ತನ್ನ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಸಿಬಿಎಸ್‌ಸಿ (ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ) ಎಚ್ಚರಿಕೆ ನೀಡಿದೆ.

CBSE instructs schools and colleges not to start classes before April 1st akb

ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳನ್ನು ಏ.1ಕ್ಕೂ ಮೊದಲು ಪ್ರಾರಂಭಿಸದಂತೆ ತನ್ನ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಸಿಬಿಎಸ್‌ಸಿ (ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ) ಎಚ್ಚರಿಕೆ ನೀಡಿದೆ. ಈಗಾಗಲೇ ಹಲವು ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆ ಪ್ರಾರಂಭಿಸಿರುವ ಬೆನ್ನಲ್ಲೇ ಈ ಸೂಚನೆ ಹೊರಬಿದ್ದಿದೆ. ಶಾಲೆಗಳನ್ನು ಬೇಗ ಪುನರಾರಂಭಿಸಿ ಕಡಿಮೆ ಅವಧಿಯಲ್ಲೇ ವರ್ಷದ ಪಠ್ಯವನ್ನು ಪೂರ್ಣಗೊಳಿಸಲು ಶಾಲೆಗಳು ಪ್ರಯತ್ನಿಸುತ್ತವೆ. ಇದು ಮಕ್ಕಳಿಗೆ ಅಪಾಯವನ್ನುಂಟು ಮಾಡುತ್ತದೆ. ಅಲ್ಲದೇ ಮಕ್ಕಳಿಗೆ ದೈಹಿಕ ಶಿಕ್ಷಣ, ಮೌಲ್ಯ ಶಿಕ್ಷಣದಂತಹ ಇತರ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸಿಗುವುದಿಲ್ಲ ಎಂದು ಸಿಬಿಎಸ್‌ಸಿ ತಿಳಿಸಿದೆ.

ಮಾರ್ಕ್ಸ್ ಹಾಗೂ ಶೇ.100 ಫಲಿತಾಂಶದ ಗುರಿ ಹೊಂದಿರುವ ಖಾಸಗಿ ಶಾಲೆಗಳು 9ನೇ ತರಗತಿ ಪಾಸಾದ ಹಾಗೂ 11ನೇ ತರಗತಿ ಅಥವಾ ಪ್ರಥಮ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ  ಬೇಸಿಗೆಯ ಎರಡು ತಿಂಗಳುಗಳ ರಜೆಯನ್ನು ಕೂಡ ನೀಡದೇ 10ನೇ ಹಾಗೂ 12ನೇ ತರಗತಿಗಳನ್ನು ಆರಂಭಿಸಿ ಪಾಠ ಮಾಡಲು ಶುರು ಮಾಡಿವೆ. ಇದು ವಿದ್ಯಾರ್ಥಿಗಳ ಒತ್ತಡವನ್ನು ಹೆಚ್ಚಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಬಿಡುವೇ ಇಲ್ಲದಂತೆ ಮಾಡುತ್ತಿದೆ. ಈಗಾಗಲೇ ಪರೀಕ್ಷಾ ಒತ್ತಡಕ್ಕೆ ಮಕ್ಕಳು ಮಾತ್ರವಲ್ಲದೇ ಪೋಷಕರು ಕೂಡ ಒಳಗಾಗುತ್ತಿದ್ದಾರೆ. ಈ ಮಧ್ಯೆ ಶಾಲೆಗಳು ರಜೆಯ ದಿನಗಳಲ್ಲಿಯೂ ತರಗತಿ ಆರಂಭಿಸಲು ಮುಂದಾಗಿದ್ದು, ಇದನ್ನು ಗಮನಕ್ಕೆ ತೆಗೆದುಕೊಂಡಿರುವ ಸಿಬಿಎಸ್‌ಇ ಶಾಲೆಗಳ ಈ ಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. 

CBSE Board Exams 2023: ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಈ ವಿಧಾನ ಅನುಸರಿಸಿ

 

CBSE Board Exam 2023: CBSE ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಬಿಡುಗಡೆ

Latest Videos
Follow Us:
Download App:
  • android
  • ios