Asianet Suvarna News Asianet Suvarna News

11ಕ್ಕೆ ಮದುವೆ, 20ಕ್ಕೆ ತಂದೆ, ರಾಜಸ್ಥಾನದ ಈ ಬಡಯುವಕ 21ಕ್ಕೆ ವೈದ್ಯಕೀಯ ಕಾಲೇಜಿಗೆ ಆಯ್ಕೆ!

ಬಡತನದಿಂದ ಹೊರ ಬರಲು ಶಿಕ್ಷಣವೇ ಸಾಧನ ಎಂಬುದನ್ನು ಸಾಬೀತು ಪಡಿಸುವ ಕತೆ ಈತನದು. ಹಳ್ಳಿಮುಕ್ಕನಾದವ ಇಂದು ವೈದ್ಯನಾಗುವ ಹಂತದಲ್ಲಿದ್ದಾನೆ. ಅವನ ಕುಟುಂಬದ ಬದುಕೇ ಬದಲಾಗಲಿದೆ..

Meet man who was forced to marry at 11 became father at 20 but cracked NEET medical exam at 21 skr
Author
First Published Jun 24, 2024, 4:27 PM IST

ರಾಜಸ್ಥಾನದ ರಾಮ್‌ಲಾಲ್ 11 ವರ್ಷದ ಬಾಲಕನಾಗಿದ್ದಾಗ ಆತನಿಗೆ ಮದುವೆ ಮಾಡಿದರು. ಹೊಸ ಬಟ್ಟೆ ಸಿಗುತ್ತೆ, ಎಲ್ಲರ ಗನ ತನ್ನ ಮೇಲಿರುತ್ತೆ ಎಂದು ಖುಿಯಲ್ಲೇ ಮದುವೆಯಾದ! ಆಗ ಆತ 6ನೇ ತರಗತಿ ಓದುತ್ತಿದ್ದ.

ಸಿಕ್ಕಾಪಟ್ಟೆ ಬಡತನ, ತಂದೆ ಕೂಲಿ ಕೆಲಸ, ತಾಯಿ ಮೇವು ಮಾರಿ ದುಡಿಯುತ್ತಿದ್ದಳು. ತಂದೆತಾಯಿಗೆ ವಿದ್ಯೆಯ ವಿಷಯ ಗೊತ್ತಿಲ್ಲ. ಮಗ ಓದುತ್ತೇನೆಂದಾಗ ಹೊಡೆದಿದ್ದ ರಾಮ್‌ಲಾಲ್ ತಂದೆ. 10ನೇ ತರಗತಿಗೆ ಬರುವವರೆಗೆ ರಾಮ್‌ಗೆ ವೈದ್ಯಕೀಯ ಎಂದರೇನು, ಅದಕ್ಕೆ ಹೇಗೆ ಪ್ರವೇಶ ಪಡೆಯುವುದು, ನೀಟ್ ಪರೀಕ್ಷೆ ಎಂದರೇನು- ಏನೊಂದೂ ತಿಳಿದಿರಲಿಲ್ಲ. ಈ ಮಧ್ಯೆ 20 ವರ್ಷಕ್ಕೆ ಆತ ಹೆಣ್ಣುಮಗುವಿಗೆ ತಂದೆಯಾದ. ಜವಾಬ್ದಾರಿ ಬಹಳಷ್ಟು ಹೆಚ್ಚಿತ್ತು. ಆದರೆ, ಓದುವ ಉತ್ಸಾಹ ಆತನಿಂದ ನೀಟ್ ವೈದ್ಯಕೀಯ ಪರೀಕ್ಷೆ ಬೇಧಿಸುವಂತೆ ಮಾಡಿದೆ. ಕುಗ್ರಾಮದ ಮುಗ್ಧ ಬಾಲಕನೊಬ್ಬ ಈಗ ವೈದ್ಯನಾಗುವ ಹಂತದಲ್ಲಿದ್ದಾನೆ. ಅವನದಷ್ಟೇ ಅಲ್ಲ ಆತನ ಕುಟುಂಬದ ಅದೃಷ್ಟವೇ ಬದಲಾಗಲಿದೆ. ಜೊತೆಗೆ, ಹಲವಾರು ಬಡ ಮಕ್ಕಳಿಗೆ ದೊಡ್ಡ ಪ್ರೇರಣೆಯಾಗಲಿದ್ದಾನೆ ರಾಮ್‌ಲಾಲ್.

ಸಾರಾ ಅಲಿ ಖಾನ್ ಮೇಲೆ 5 ಕೋಟಿಗೆ ಮೊಕದ್ದಮೆ ಹೂಡಿದ 'ಕೇದಾರನಾಥ' ನಿರ್ದೇಶಕ; ನಂತರ ಏನಾಯಿತು?
 

ರಾಜಸ್ಥಾನದ ಚಿತ್ತೋರ್‌ಗಢದ ಘೋಸುಂಡಾ ನಿವಾಸಿ ರಾಮಲಾಲ್ ಭೋಯ್ ಈ ಪ್ರತಿಭೆ. ಆತ 6ನೇ ತರಗತಿಯಲ್ಲಿದ್ದಾಗ ಕುಟುಂಬದ ಜನರು ನೃತ್ಯ ಮಾಡುತ್ತಿದ್ದರು, ಹಾಡುತ್ತಿದ್ದರು. ಅವನೂ ಎಂಜಾಯ್ ಮಾಡುತ್ತಿದ್ದ. ಅವನ ಹೆಂಡತಿಯೂ ಅದೇ ವಯಸ್ಸಿನವಳು. ಇಬ್ಬರೂ ಮದುವೆ ಎಂದರೇನೆಂದು ಗೊತ್ತಿರದೆ ಹಾಡಿ ಕುಣಿದರು. ಮದುವೆಯಾದ ನಂತರ, ಸುಮಾರು ಆರು ವರ್ಷಗಳ ಕಾಲ ಹೆಂಡತಿ ತನ್ನ ಅತ್ತೆಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ರಾಮಲಾಲ್ ಪತ್ನಿ ಕೂಡ 10ನೇ ತರಗತಿವರೆಗೆ ಓದಿದ್ದಾಳೆ. ನೀಟ್ ಪರೀಕ್ಷೆಗೆ ಕೇವಲ ಆರು ತಿಂಗಳ ಮೊದಲು ರಾಮಲಾಲ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

10ನೇ ತರಗತಿವರೆಗೂ ವೈದ್ಯನಾಗುವುದು ಹೇಗೆಂದು ಗೊತ್ತಿರಲಿಲ್ಲ..
ರಾಮಲಾಲ್ ತನ್ನ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದ. 10ನೇ ತರಗತಿಯಲ್ಲಿ ಶೇ.74 ಅಂಕ ಪಡೆದಿದ್ದ. ರಾಮ್‌ಲಾಲ್ ಪ್ರಕಾರ, ಕುಟುಂಬದೊಂದಿಗೆ ವೃತ್ತಿಜೀವನದ ಬಗ್ಗೆ ಮಾತನಾಡುವುದು ಸಹ ಅರ್ಥಹೀನವಾಗಿತ್ತು. ಹೆಚ್ಚಿನ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಉದಯಪುರಕ್ಕೆ ಹೋದಾಗ ಜೀವಶಾಸ್ತ್ರ ವಿಷಯ ಮತ್ತು ನೀಟ್ ಪರೀಕ್ಷೆಯ ಮಾಹಿತಿ ಸಿಕ್ಕಿತು.

ಅಲ್ಲಿಯವರೆಗೆ NEET ನಂತಹ ಪರೀಕ್ಷೆ ಇದೆ ಎಂದು ತಿಳಿದಿರಲಿಲ್ಲ ಮತ್ತು ಅದರಲ್ಲಿ ಉತ್ತೀರ್ಣನಾದ ನಂತರ ಡಾಕ್ಟರ್ ಆಗಬಹುದು ಎಂದು ಗೆಳೆಯರೊಂದಿಗೆ ಮಾತನಾಡುವಾಗ ತಿಳಿಯಿತು. ಆ ನಂತರ ರಾಮಲಾಲ್ ಜೀವಶಾಸ್ತ್ರ ವಿಷಯದೊಂದಿಗೆ 11 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣನಾದ. ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಹಾಸ್ಟೆಲ್ ನಲ್ಲಿದ್ದುಕೊಂಡು ಇದನ್ನೆಲ್ಲಾ ಮಾಡಿದ.

ರತನ್ ಟಾಟಾ ಹೆಸರೇಕೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿಲ್ಲ?
 

ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ರಾಮಲಾಲ್ ತಮ್ಮ 5ನೇ ಪ್ರಯತ್ನದಲ್ಲಿ 2022ರಲ್ಲಿ NEET ವೈದ್ಯಕೀಯ ಪರೀಕ್ಷೆಯನ್ನು ಭೇದಿಸಿದ್ದಾರೆ. ರಾಮಲಾಲ್ 632 ಅಂಕ ಗಳಿಸಿದ್ದಾರೆ. ಅವರು ಅಖಿಲ ಭಾರತ 12901 ರ್ಯಾಂಕ್ ಗಳಿಸಿದರು. ಅವರು ತಮ್ಮ ವಿಭಾಗದಲ್ಲಿ 5137 ರ್ಯಾಂಕ್ ಪಡೆದರು. ಇದರಿಂದ ಅವರು ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಇನ್ನು ಕೆಲ ವರ್ಷಗಳಲ್ಲೇ ರಾಮ್‌ಲಾಲ್ ವೈದ್ಯರಾಗಲಿದ್ದಾರೆ. 

Latest Videos
Follow Us:
Download App:
  • android
  • ios