ಎಂಬಿಎ ಸೇರಿದಂತೆ ಹಲವು ಡಿಗ್ರಿ ಪದವಿಗಳ ಕಾಲ ಮುಗಿಯಿತು. ಈಗ ಡಿಗ್ರಿ ಪಡೆದು ಕೆಲಸ ಗಿಟ್ಟಿಸಿಕೊಳ್ಳುವ ಕಾಲ ಇದಲ್ಲ. ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಡಿಗ್ರಿ ಪಡೆಯುವ ವಿದ್ಯಾರ್ಥಿಗಳು ಏನು ಮಾಡಬೇಕು?
ನವದೆಹಲಿ (ಜೂ.15) ಎಂಬಿಎ, ಕಂಪ್ಯೂಟರ್ ಸೈನ್ಸ್, ಸಾಫ್ಟ್‌ವೇರ್ ಈ ಎಲ್ಲಾ ಕೋರ್ಸ್, ಡಿಗ್ರಿ ಕಾಲ ಮುಗಿಯಿತು. ನಿಮ್ಮಲ್ಲಿ ಡಿಗ್ರಿ ಇದೆ ಎಂದ ತಕ್ಷಣ ನಿಮ್ಮನ್ನು ಕರೆದು ಉದ್ಯೋಗ ಕೊಡುವುದಿಲ್ಲ. ಡಿಗ್ರಿಯಲ್ಲಿ ನೀವು ಎಷ್ಟೇ ಟ್ಯಾಲೆಂಟ್ ಆಗಿದ್ದರೂ ಉದ್ಯೋಗ ವಲಯದ ಲಕ್ಷಣಗಳೇ ಬದಲಾಗಿದೆ. ಪದವಿ ಪೂರೈಸಿದ ಮಾತ್ರಕ್ಕೆ ಕೆಲಸ ಸಿಗಬೇಕು ಎಂದಿಲ್ಲ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (CEA)ಅನಂತ್ ನಾಗೇಶ್ವರನ್ ಹೇಳಿದ್ದಾರೆ. ಭಾರತದ ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳು, ಪೋಷಕರು ಒಂದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇದು ಆತಂಕ ಹೆಚ್ಚಿಸಲಿದೆ ಎಂದಿದ್ದಾರೆ.
ಭಾರತದಲ್ಲಿ ಶಿಕ್ಷಣ ಹಾಗೂ ಉದ್ಯೋಗ
ಭಾರತದಲ್ಲಿ ಹೈಸ್ಕೂಲ್, ಕಾಲೇಜು, ಸ್ನಾತಕೋತ್ತರ ಪದವಿ, ಬಳಿಕ ಖಾಸಗಿ ವಲಯದಲ್ಲಿ ಉದ್ಯೋಗ ಹುಡುತಾಟ ಅಥವಾ ಯುಪಿಎಸ್‌ಸಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿ ಉದ್ಯೋಗದ ನಿರೀಕ್ಷೆ. ಇದೇ ಮಾರ್ಗದಲ್ಲಿ ಎಲ್ಲರೂ ಸಾಗುತ್ತಿದ್ದಾರೆ. ಇದೀಗ ಎಲ್ಲಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ನಾಗೇಶ್ವರನ್ ಹೇಳಿದ್ದಾರೆ.
ಸ್ವಿಟ್ಜರ್‌ಲೆಂಡ್, ಜರ್ಮನಿ, ಜಪಾನ್, ಸೌತ್ ಕೊರಿಯಾ ಸೇರಿದಂತೆ ಹಲವು ದೇಶಗಳಲ್ಲಿ ವೆಲ್ಟಿಂಗ್, ಪ್ಲಂಬಿಂಗ್, ಕಾರ್ಪೆಂಟ್ರಿ, ಎಲೆಕ್ಟ್ರಿಕಲ್ ಕೆಲಸ ಸೇರಿದಂತೆ ಹಲವು ಕೆಲಸಗಳಿಗೆ ಅತ್ಯಂಗ ಗೌರವ ನೀಡಲಾಗುತ್ತದೆ. ಭಾರತದಲ್ಲಿ ಈ ಕೆಲಸಗಳನ್ನು ನಿಕೃಷ್ಠವಾಗಿ ಕಾಣಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಈ ಕೆಲಸಗಾರರು, ಈ ವರ್ಗದ ಕೆಲಸಕ್ಕೆ ಬೇಡಿಕೆ ಇದ್ದರೂ ಯಾರೂ ಇಲ್ಲ. ಟ್ರೇಡ್ ಸ್ಕಿಲ್,ಸಾಫ್ಟ್ ಸ್ಕಿಲ್ ಕ್ಷೇತ್ರಗಳು ವಿಶ್ವದೆಲ್ಲೆಡೆ ಬೇಡಿಕೆಯ ಕ್ಷೇತ್ರಗಳಾಗಿದೆ. ಇದಕ್ಕೆ ಬೆಲೆ ಬರಬೇಕು ಎಂದು ನಾಗೇಶ್ವರನ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟೇಟಸ್, ಪೋಸ್ಟ್ ಬಗ್ಗೆ ಹೆಚ್ಚು ತಲಕೆಡಿಸಿಕೊಳ್ಳದೇ ಗೌರವುಯತ ಕ್ಷೇತ್ರ ಆಯ್ಕೆ ಮಾಡಿದರೆ ಸಾಕು. ಉದ್ಯೋಗ ಇದ್ದೇ ಇದೆ. ಎಐ ಯುಗದಲ್ಲಿ ಹಲವು ಬದಲಾವಣೆಗಳಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಉದ್ಯೋಗ ಪರಿಮಿತಿ ಬದಲಾಗಲಿದೆ. ಹೀಗಾಗಿ ಎಂಬಿಎ, ಕಂಪ್ಯೂಟರ್ ಸೈನ್ಸ್, ಸಾಫ್ಟ್‌ವೇರ್ ಡಿಗ್ರಿ ಮುಗಿಸಿ ಹೊರಬಂದ ತಕ್ಷಣ ಉದ್ಯೋಗ ಸಿಗಬೇಕು ಎಂದಿಲ್ಲ. ಬಾರಿ ಬೇಡಿಕೆಯ ಉದ್ಯೋಗ ಯುಗ ಮುಗಿದಿದೆ. ಈಗ ಪರಿಸ್ಥಿತಿ ಬದಲಾಗಿದೆ ಎಂದು ನಾಗೇಶ್ವರನ್ ಹೇಳಿದ್ದಾರೆ.


