Datta Peetha: ಪರಿಷ್ಕೃತ ಶಾಲಾ ಪಠ್ಯದಲ್ಲಿ ದತ್ತಪೀಠದ ಬಗ್ಗೆ ಪಾಠ

*  ವೈದಿಕ ಧರ್ಮದ ದೋಷದಿಂದ ಹೊಸ ಧರ್ಮ ಉದಯ ಎಂಬ ವಿವಾದಿತ ಅಂಶವೂ ಪರಿಷ್ಕರಣೆ
*  ರೋಹಿತ್‌ ಚಕ್ರತೀರ್ಥ ಸಮಿತಿಯಿಂದ ಅನೇಕ ಸೂಕ್ಷ್ಮ ವಿಚಾರ ಪರಿಷ್ಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ
*  ಮುಂದಿನ ವರ್ಷಕ್ಕೆ ಪರಿಷ್ಕರಣೆ: ನಾಗೇಶ್‌
 

Lesson About Datta Peetha in Revised School Text in Karnataka grg

ಬೆಂಗಳೂರು(ಮಾ.25): ವೈದಿಕ ಧರ್ಮದ(Vedic Religion) ದೋಷಗಳಿಂದಾಗಿಯೇ ಅನೇಕ ಹೊಸ ಧರ್ಮಗಳು ಉದಯವಾದವು ಎಂಬ ಅಂಶವಿದ್ದ ಆರನೇ ತರಗತಿ ಸಮಾಜ ವಿಜ್ಞಾನ ವಿಷಯ ಸೇರಿದಂತೆ 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯಗಳನ್ನು ಪರಿಷ್ಕರಿಸಿರುವ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯು ಇಂತಹ ಅನೇಕ ಸೂಕ್ಷ್ಮ ವಿಚಾರಗಳನ್ನು ಪರಿಷ್ಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜತೆಗೆ 600 ವರ್ಷಗಳ ಕಾಲ ಭಾರತದ(India) ಈಶಾನ್ಯ ರಾಜ್ಯಗಳನ್ನು ಆಳಿದ ಅಹೋಮ… ರಾಜವಂಶದ ಪಾಠ, ಕಾಶ್ಮೀರ ಕಣಿವೆ ಮತ್ತು ಭಾರತದ ಕೆಲವು ಉತ್ತರ ಭಾಗಗಳಲ್ಲಿ 300 ವರ್ಷಗಳ ಕಾಲ ಆಳಿದ ಕಾರ್ಕೋಟ ರಾಜವಂಶದ ಬಗ್ಗೆ, ಬಾಬಾಬುಡನ್‌ ಗಿರಿಯ ಜೊತೆಗೆ ದತ್ತಪೀಠದ ವಿಚಾರಗಳನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೂಗಳ(Hindu) ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಹ ಕೆಲ ಅಂಶಗಳು ಆರನೇ ತರಗತಿಯ ಸಮಾಜ ವಿಜ್ಞಾನ(Social Science) ವಿಷಯದ ಭಾಗ 1ರ ಪಠ್ಯದಲ್ಲಿವೆ(Text) ಎಂಬ ಆರೋಪದ ಹಿನ್ನೆಲೆಯಲ್ಲಿ 10ನೇ ತರಗತಿ ವರೆಗೆ ಸಮಾಜ ವಿಜ್ಞಾನ ಪಠ್ಯದಲ್ಲಿ ಇರುವ ಅಂತಹ ಎಲ್ಲ ಸೂಕ್ಷ್ಮ ವಿಚಾರಗಳನ್ನು ಪರಿಷ್ಕರಿಸಲು ಶಿಕ್ಷಣ ಇಲಾಖೆ(Department of Education)  ಪಠ್ಯ ಪರಿಷ್ಕರಣಾ ಸಮಿತಿ ರಚಿಸಿತ್ತು. ಸಮಿತಿ ತನ್ನ ವರದಿ ನೀಡಿದ್ದು, ಸಮಿತಿಯು ಪರಿಷ್ಕರಿಸಿರುವ ರಾಜ್ಯ ಪಠ್ಯಕ್ರಮದ ಎಲ್ಲಾ ಪಠ್ಯಪುಸ್ತಕಗಳನ್ನು 2022-23ನೇ ಶೈಕ್ಷಣಿಕ ವರ್ಷಕ್ಕೆ ಮುದ್ರಣ ಮಾಡುವಂತೆಯೂ ಸರ್ಕಾರ ಆದೇಶ ಮಾಡಿದೆ.

ಪಠ್ಯದಲ್ಲಿ Bhagavad Gita ಅಳವಡಿಸಲು ಸಮಿತಿ ರಚನೆ

ವೈದಿಕ ಧರ್ಮದ ಲೋಪಗಳಿಂದಾಗಿ ಅನೇಕ ಹೊಸ ಧರ್ಮಗಳ ಉದಯವಾದವು. ಹಿಂದೆ ಯಾಗ ಯಜ್ಞಗಳನ್ನು ನಡೆಸುವಾಗ ಕೃಷಿಗೆ ಉಪಯೋಗಿಸುತ್ತಿದ್ದ ಪ್ರಾಣಿಗಳನ್ನು ಬಲಿಕೊಡಲಾಗುತ್ತಿತ್ತು. ಅಲ್ಲದೆ, ದವಸ ಧಾನ್ಯಗಳನ್ನು ಯಜ್ಞಕುಂಟದಲ್ಲಿ ಸುಡುತ್ತಿದ್ದುದರಿಂದ ಆಹಾರದ ಅಭಾವ ಉಂಟಾಗುತ್ತಿತ್ತು ಎಂಬುದು ಸೇರಿದಂತೆ ಇಂತಹ ಅನೇಕ ಅಂಶಗಳನ್ನು 6ನೇ ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿದ್ದವು. ಇಂತಹ ಅಂಶಗಳಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಪಠ್ಯ ಪರಿಷ್ಕರಣೆ ಮಾಡಿರುವ ಸಮಿತಿಯು ಇಂತಹ ಸೂಕ್ಷ್ಮ ವಿಚಾರಗಳನ್ನು ಪರಿಷ್ಕರಿಸಿ ವರದಿ ನೀಡಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ತೀವ್ರ ವಿವಾದಕ್ಕೊಳಗಾಗಿದ್ದ ಟಿಪ್ಪು ಸುಲ್ತಾನ್‌(Tipu Sultan) ಕುರಿತ ಪಠ್ಯವನ್ನು ಸಮಿತಿ ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಆದರೆ, ಟಿಪ್ಪು ಅನ್ನು ವೈಭವೀಕರಿಸಿದ್ದ ಅಂಶಗಳನ್ನು ಕೈಬಿಟ್ಟು ಪಠ್ಯ ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಡಳಿತಗಾರನಾಗಿ ಇತಿಹಾಸದಲ್ಲಿ(History) ಟಿಪ್ಪು ಸುಲ್ತಾನ್‌ ಅಧ್ಯಯನ ಅಗತ್ಯ. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿ ಪಠ್ಯಪುಸ್ತಕ ಪರಿಷ್ಕೃರಣಾ ಸಮಿತಿಯು ಟಿಪ್ಪು ಸುಲ್ತಾನ್‌ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ವೈಭವೀಕರಿಸಿದ್ದು ಕಂಡುಬಂದಿತ್ತು. ಅಂತಹ ಅಂಶಗಳನ್ನು ಕಡಿತಗೊಳಿಸಲಾಗಿದೆ.

ಮದರಸಾಗಳಲ್ಲಿಯೂ ಹೊಸ ಶಿಕ್ಷಣ ಪದ್ಧತಿ: ಕರ್ನಾಟಕದ 20 ಸಾವಿರ ಶಾಲೆಗಳಲ್ಲಿ NEP ಜಾರಿ: ಸಚಿವ ನಾಗೇಶ್

ವರದಿಯನ್ನು ಅನುಸರಿಸಿ, ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷಕ್ಕೆ ಲಭ್ಯವಿರುವ ಪಠ್ಯಪುಸ್ತಕಗಳಲ್ಲಿ ಸಮಿತಿಯು ಶಿಫಾರಸು ಮಾಡಿದ ಬದಲಾವಣೆಗಳನ್ನು ಸೇರಿಸಲು ಪಠ್ಯಪುಸ್ತಕ ಸೊಸೈಟಿಯನ್ನು ಕೇಳಲು ಆದೇಶವನ್ನು ಹೊರಡಿಸಿದೆ.

ಮುಂದಿನ ವರ್ಷಕ್ಕೆ ಪರಿಷ್ಕರಣೆ: ನಾಗೇಶ್‌

ರೋಹಿತ್‌ ಚತ್ರ ತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ನೀಡಿರುವ ವರದಿ ಬಂದಿದೆ. ವರದಿಯ ಅನುಸಾರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಪರಿಷ್ಕರಣೆಗೂ ಇಲಾಖೆ ಆದೇಶ ಮಾಡಿದೆ. ಈ ವರದಿ ಕುರಿತ ವಿವರಗಳನ್ನು ಶೀಘ್ರ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios