Education Loan: ಶಿಕ್ಷಣ ಸಾಲದ ಬಗ್ಗೆ ನೀವು ತಿಳಿದರಬೇಕಾದ ಸಂಗತಿಗಳು
* ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬ್ಯಾಂಕುಗಳು, ಎನ್‌ಬಿಎಫ್‌ಸಿಗಳಿಂದ ಶೈಕ್ಷಣಿಕ ಸಾಲ ಪಡೆಯಬಹುದು
* ಉನ್ನತ ಶಿಕ್ಷಣ ಸಾಲ ಪಡೆಯುವ ಮುನ್ನ ಮರುಪಾವತಿ, ಬಡ್ಡಿ ದರದ ಬಗ್ಗೆ ಖಚಿತಪಡಿಸಿಕೊಳ್ಳಿ
* ಮೊರಟೋರಿಯಂ ಅವಧಿಯನ್ನು ಎರಡು ವರ್ಷಗಳವರೆಗೆ ಹೆಚ್ಚಿಸಬಹುದು.
ಬೆಂಗಳೂರು(ಮಾ.26): ಗುಣಮಟ್ಟದ ಉನ್ನತ ಶಿಕ್ಷಣ (Education)ವು ಸ್ಥಿರವಾದ ವೃತ್ತಿಗೆ ಅಡಿಪಾಯವನ್ನು ಹಾಕುವಲ್ಲಿ ಸಹಾಯ ಮಾಡುತ್ತದೆ. ಆದ್ರೆ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಬಹಳಷ್ಟು ಮಂದಿ ತಮ್ಮ ಕನಸನ್ನ ಕೈಬಿಟ್ಟು ಮುಂದೆ ಸಾಗುತ್ತಾರೆ. ಇನ್ನು ತಮ್ಮ ಡ್ರೀಮ್ ಪೂರೈಸಿಕೊಳ್ಳಲು ಶೈಕ್ಷಣಿಕ ಸಾಲ (Education Loan)ದ ಮೊರೆ ಹೋಗುತ್ತಾರೆ.
ಬ್ಯಾಂಕ್ (Bank)ಗಳು ಮತ್ತು ಎನ್‌ಬಿಎಫ್‌ಸಿ(NBFC)ಗಳು ಉನ್ನತ ಶಿಕ್ಷಣಕ್ಕೆ ಧನಸಹಾಯ ನೀಡುವ ಪ್ರಮುಖ ಮೂಲವಾಗಿದೆ. ಆದಾಗ್ಯೂ, ಶೈಕ್ಷಣಿಕ ಸಾಲದ ಮಹತ್ವ ಹಾಗೂ ಅದರ ಮರುಪಾವತಿ (Repayment) ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ರೆ ಹಲವಾರು ವರ್ಷಗಳವರೆಗೆ ಸಾಲದಲ್ಲಿ ಉಳಿಯುವ ಸಾಧ್ಯತೆಯಿದೆ.
ಕೋರ್ಸ್ ಶುಲ್ಕವನ್ನು ಹೊರತುಪಡಿಸಿ, ನಿಮ್ಮ ಶಿಕ್ಷಣ ಸಾಲದ ಮೊತ್ತವು ಹಾಸ್ಟೆಲ್ ಶುಲ್ಕ ಮತ್ತು ಲ್ಯಾಪ್‌ಟಾಪ್, ಉಪಕರಣಗಳು ಮತ್ತು ಪುಸ್ತಕಗಳ ವೆಚ್ಚ ಸೇರಿದಂತೆ ಪ್ರಮುಖ ವೆಚ್ಚಗಳನ್ನು ಸರಿದೂಗಿಸಲು ಸಾಕಷ್ಟು ದೊಡ್ಡದಾಗಿರಬೇಕು. ದೇಶೀಯ ಮತ್ತು ಸಾಗರೋತ್ತರ ಕೋರ್ಸ್‌ಗಳಿಗೆ ಗರಿಷ್ಠ ಸಾಲದ ಮೊತ್ತವು ಕ್ರಮವಾಗಿ 10 ಲಕ್ಷ ಮತ್ತು 20 ಲಕ್ಷ ರೂ. ಆದಾಗ್ಯೂ, ಐಐಎಂ (IIM)ಗಳು, ಐಐಟಿ (IIT)ಗಳು, ಐಎಸ್‌ಬಿ (ISB) ಮುಂತಾದ ಹೆಸರಾಂತ ಸಂಸ್ಥೆಗಳು ನೀಡುವ ಕೋರ್ಸ್‌ಗಳಿಗೆ ಸಾಲದಾತರು ಹೆಚ್ಚಿನ ಸಾಲ ಸಿಗಬಹುದು.
ಸಾಮಾನ್ಯವಾಗಿ ಕೋರ್ಸ್ ಅವಧಿಯ ಜೊತೆಗೆ 1 ವರ್ಷದ ಮೊರಟೋರಿಯಂ ಅವಧಿಯನ್ನು ನೀಡುತ್ತಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ EMI ಗಳನ್ನು ಪಾವತಿಸಬೇಕಾಗಿಲ್ಲ. ಬಳಿಕ ಸಾಲಗಾರರು ತಮ್ಮ EMI ಗಳನ್ನು ಮರುಪಾವತಿ ಮಾಡಲು ಪ್ರಾರಂಭಿಸಿದ ನಂತರ 15 ವರ್ಷಗಳವರೆಗೆ ಮರುಪಾವತಿ ಅವಧಿಯನ್ನು ಪಡೆಯುತ್ತಾರೆ. ಸಾಲಗಾರನು ನಿಗದಿತ ದಿನಾಂಕದೊಳಗೆ ಕೋರ್ಸ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮೊರಟೋರಿಯಂ ಅವಧಿಯನ್ನು ಎರಡು ವರ್ಷಗಳವರೆಗೆ ಹೆಚ್ಚಿಸಬಹುದು.
ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ
ಶಿಕ್ಷಣ ಸಾಲದ ಬಡ್ಡಿ ದರವು ಸಾಮಾನ್ಯವಾಗಿ ಕೋರ್ಸ್‌ನ ಪ್ರಕಾರ, ಸಂಸ್ಥೆ, ಹಿಂದಿನ ಶೈಕ್ಷಣಿಕ ಕಾರ್ಯಕ್ಷಮತೆ, ವಿದ್ಯಾರ್ಥಿ/ಸಹ-ಅರ್ಜಿದಾರರ ಕ್ರೆಡಿಟ್ ಸ್ಕೋರ್ ಮತ್ತು ಒದಗಿಸಿದ ಭದ್ರತೆಯನ್ನು ಅವಲಂಬಿಸಿ ಸುಮಾರು 6.75% p.a. ನಿಂದ ಪ್ರಾರಂಭವಾಗುತ್ತದೆ. ಬ್ಯಾಂಕುಗಳು ಮೊರಟೋರಿಯಂ ಅವಧಿಯಲ್ಲಿ ಸರಳ ಬಡ್ಡಿದರಗಳನ್ನು ವಿಧಿಸುತ್ತವೆ.
ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲದ ವ್ಯವಸ್ಥೆ ಮಾಡಲು ಅನೇಕ ಶಿಕ್ಷಣ ಸಂಸ್ಥೆ (Education Institutions)ಗಳು, ಬ್ಯಾಂಕ್(Banks)ಗಳು ಮತ್ತು ಎನ್‌ಬಿಎಫ್‌ಸಿ(NBFC)ಗಳೊಂದಿಗೆ ಪಾಲುದಾರಿಕೆ ಹೊಂದಿವೆ. ಆದ್ದರಿಂದ, ಉನ್ನತ ಶಿಕ್ಷಣದ ಆಕಾಂಕ್ಷಿಗಳು ತಮ್ಮ ವಿಶ್ವವಿದ್ಯಾನಿಲಯ/ಸಂಸ್ಥೆಯೊಂದಿಗೆ ಬ್ಯಾಂಕ್‌ಗಳು ಅಥವಾ NBFC ಗಳೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಶಿಕ್ಷಣ ಸಾಲ ಪಾಲುದಾರಿಕೆಗಳ ಬಗ್ಗೆ ಪರಿಶೀಲಿಸಬೇಕು. ಅಂತಹ ಟೈ-ಅಪ್‌ಗಳು ಸಾಲದ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲಗಳನ್ನು ಪಡೆಯಲು ಸಹಾಯ ಮಾಡಬಹುದು.
ಸಾಲದ ಮೂಲಕ ತಮ್ಮ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಯೋಜಿಸುವ ವಿದ್ಯಾರ್ಥಿಗಳು ತಮ್ಮ ಅರ್ಹ ಸಂಸ್ಥೆಗಳ ಮೂಲಕ ನೀಡಲಾಗುವ ಪ್ಲೇಸ್‌ಮೆಂಟ್ ಇತಿಹಾಸ ಮತ್ತು ಸರಾಸರಿ ವೇತನವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಆಗ ನಿರೀಕ್ಷಿತ ಮಾಸಿಕ ಆದಾಯವನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಅವರ EMI ಮತ್ತು ಸಾಲದ ಅವಧಿಯನ್ನು ಯೋಜಿಸುತ್ತದೆ.
ಬಜೆಟ್ ಘೋಷಣೆ ಬಳಿಕ ವಿವಾದದಲ್ಲಿ Chikkamagaluru ನಗರಸಭೆ
ಸ್ವಯಂ, ಮಕ್ಕಳು, ಸಂಗಾತಿಯ ಅಥವಾ ಪೋಷಕರಿಗೆ ಶೈಕ್ಷಣಿಕ ಸಾಲವನ್ನು ಪಡೆಯುವ ವ್ಯಕ್ತಿಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80E ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ, ಸಾಮಾನ್ಯವಾಗಿ ರೂ.4 ಲಕ್ಷದವರೆಗಿನ ಶಿಕ್ಷಣ ಸಾಲಗಳಿಗೆ ಮೇಲಾಧಾರ ಅಥವಾ ಮೂರನೇ ವ್ಯಕ್ತಿಯ ಗ್ಯಾರಂಟಿಗೆ ಒತ್ತಾಯಿಸುವುದಿಲ್ಲ. 7.5 ಲಕ್ಷದವರೆಗಿನ ಸಾಲಗಳಿಗೆ ಅಗತ್ಯವಾಗುತ್ತದೆ.