ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ

ರಾಜ್ಯದಲ್ಲಿ ಮದರಸಗಳು ದೇಶದ್ರೋಹದ ಪಾಠ ಮಾಡುತ್ತಿವೆ. ಮದರಸಗಳು ಯಾಕೇ ಬೇಕು ಅಲ್ಲಿ ಏನ್ ಬೋಧನೆ ಮಾಡುತ್ತಾರೆ ?  ಎಂದು ಮದರಸಗಳ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

madrasa teach  sedition says mp renukacharya  gow

ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್ 
 

ದಾವಣಗೆರೆ (ಮಾ.26): ಹೈ ಕೋರ್ಟ್ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಹಿಜಾಬ್ ಎಳೆದು ತಂದಿದ್ದು ಬಿಜೆಪಿ ಅಲ್ಲ ಅದನ್ನು  ಎಳೆದು ತಂದಿದ್ದು ಪಿಎಪ್ ಐ, ಎಸ್ ಡಿಪಿಐ ಸಂಘಟನೆಗಳು ಎಂದು ಹೊನ್ನಾಳಿ  ಶಾಸಕ ರೇಣುಕಾಚಾರ್ಯ (mp renukacharya) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ನಾನು ಯಾವುದೇ ನಕಲಿ ಪ್ರಮಾಣ ಪತ್ರ ‌ಪಡೆದಿಲ್ಲಾ, ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯನವರ ಬಗ್ಗೆ ಆಪಾರ ಗೌರವವಿದೆ ಅವರು ಹೇಳಿದಂತೆ ಹಿಜಾಬ್ ಗೆ (Hijab)  ಕಾರಣ ನಾವಲ್ಲ. ಹಿಜಾಬ್ ಸೃಷ್ಟಿ ಮಾಡಿದ್ದು ನಾವಲ್ಲ ಕೆಲ ದೇಶದ್ರೋಹಿ ಸಂಘಟನೆಗಳು ಯುಟಿ ಖಾದರ್, ಜಮೀರ್ ಅಹಮದ್ ಅಂತವರು ಹಿಜಾಬ್ ಎಳೆದು ತಂದರು. ಅದನ್ನು ಸದನಕ್ಕೆ ಎಳೆದು ತಂದಿದ್ದು ರಾಜಕೀಯವಾಗಿ ಬಳಕೆಮಾಡಿಕೊಂಡಿದ್ದು ಕಾಂಗ್ರೆಸ್ (Congress) ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. 

ಹಿಜಾಬ್ ಈಗ ಮುಗಿದ ಅಧ್ಯಾಯ, ಈ ನೆಲೆದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಆದ್ರೆ  ಕೆಲ ದೇಶ ದ್ರೋಹಿ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ಕೊಟ್ಟವು, ಪ್ರತಿಭಟನೆ ಮಾಡಿದವು. ಇದನ್ನೇನು ಪಾಕಿಸ್ತಾನ್, ಬಾಂಗ್ಲಾ ಮಾಡಿಕೊಂಡಿದ್ದೀರಾ?  ಅದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. ಹಿಜಾಬ್ ನ್ನು ಬಹಿಷ್ಕಾರ ಮಾಡಿ ಎಂದು ನಾವು ಎಲ್ಲೂ ಹೇಳಿಲ್ಲ. ಸದನದಲ್ಲಿ ಅದರ ಪರವಾಗಿ ಧ್ವನಿ ಎತ್ತಿದವರು ಕಾಂಗ್ರೆಸ್ಸಿಗರು ಹಿಜಾಬ್ ಅನ್ನು ಕಾಂಗ್ರೆಸ್ಸಿಗರು ಸೃಷ್ಟಿ ಮಾಡಿದ್ದು ಎಂದರು.

ಬಜೆಟ್ ಘೋಷಣೆ ಬಳಿಕ ವಿವಾದದಲ್ಲಿ Chikkamagaluru ನಗರಸಭೆ

ಮದರಸಗಳ ವಿರುದ್ಧ ರೇಣುಕಾಚಾರ್ಯ ಕಿಡಿ
ರಾಜ್ಯದಲ್ಲಿ ಮದರಸಗಳು ದೇಶದ್ರೋಹದ ಪಾಠ ಮಾಡುತ್ತಿವೆ. ಮದರಸಗಳು ಯಾಕೇ ಬೇಕು ಅಲ್ಲಿ ಏನ್ ಬೋಧನೆ ಮಾಡುತ್ತಾರೆ? ಮುಗ್ಧ ಮಕ್ಕಳ ಮೇಲೆ ಪ್ರಚೋಧನಾಕಾರಿ ಪಾಠ ಮಾಡ್ತಾರೆ. ಅವರು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತ್ ಮಾತಾಕಿ ಜೈ ಎಂದು ಆ ಮಕ್ಕಳು ಹೇಳೊಲ್ಲ. ಮದರಸಾಗಳು ನಿಮಗೆ ಯಾಕೇ ಬೇಕು. ಮದರಸಗಳು ಬ್ಯಾನ್ ಆಗಬೇಕು, ಶಿಕ್ಷಣ ಸಚಿವರು ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡುತ್ತೇನೆ. ನಾವು ಎಲ್ಲಾ ಮಠ ಮಂದಿರಗಳಿಗೆ ಎಲ್ಲರಿಗೂ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಮಸೀದಿಗಳಿಗೆ ನೀವು ಎಲ್ಲರಿಗೂ ಅವಕಾಶ ಕೊಡಿ. ನನ್ನಂತಹ ಯಾರೋ ಒಬ್ಬರಿಗೆ ಅವಕಾಶ ಕೊಟ್ಟರೆ ಸಾಲದು ಎಲ್ಲಾ ಸಾರ್ವಜನಿಕರಿಗೂ ಮುಕ್ತ ಅವಕಾಶ ಆಗಬೇಕು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಶುಲ್ಕ ಹೆಚ್ಚಳ, ಖಾಸಗಿ ಆಸ್ಪತ್ರೆಗಳು ಗರಂ

ನಾನು ಯಾವುದೇ ನಕಲಿ ಪ್ರಮಾಣ ಪತ್ರ ‌ಪಡೆದಿಲ್ಲಾ, ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ. 
ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂಬ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೇಸ್ ವಕ್ತಾರ ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಮಗಳನ್ನು ವಿನಾಃ ಕಾರಣ ಇದರಲ್ಲಿ ಎಳೆ ತಂದಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ ಇವರ ವಿರುದ್ದ ಮಾನನಷ್ಟ ಮೊಕದೊಮ್ಮೆ ಹಾಕುತ್ತೇನೆಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.ಕಾಂಗ್ರೇಸ್ ರಾಜ್ಯದಲ್ಲಿ ಮುಳುಗಿದ ಹಡಗು ಸಿದ್ದರಾಮಯ್ಯನವರೇ ವಿನಾಃ ಕಾರಣ ಗೊಂದಲ ಸೃಷ್ಟಿ ಮಾಡ ಬೇಡಿ. ನಾನೇ ನಕಲಿ ಪ್ರಮಾಣ ಪತ್ರ ಪಡೆದಿದ್ದರೇ ತನಿಖೆ ಮಾಡಲಿ.ಇಲ್ಲಿನ  ಮಾಜಿ ಶಾಸಕರು ಜಾತ್ಯಾತೀತರಲ್ಲಾ ನನ್ನ ವಿರುದ್ದ ಪ್ರತಿಭಟನೆ ಮಾಡಲಿ ನಾನು ಬೇಡ ಎನ್ನುವುದಿಲ್ಲ. ನಾನು ಯಾವುದೇ ಪ್ರಮಾಣ ಪತ್ರ ಪಡೆದಿಲ್ಲ. ಮೂವರಿಗೂ ಸೋಮವಾರ ಪತ್ರ ಬರೆಯುತ್ತೇನೆ ಎಂದರು.

Latest Videos
Follow Us:
Download App:
  • android
  • ios