ನಿಮ್ಮ ಸೈಕಲ್ ಜೊತೆಗೆ ಮೆಟ್ರೋ ಪ್ರಯಾಣ ಮಾಡಲು BMRCL ಅವಕಾಶ
ಇದೀಗ ನಮ್ಮ ಮೆಟ್ರೋ ನಿಗಮ ಗ್ರೀನ್ ಸಿಟಿ ಉತ್ತೇಜಿಸಲು ಮೆಟ್ರೋ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಜೊತೆಗೆ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ.
ಬೆಂಗಳೂರು (ಜೂ7); ಉದ್ಯಾನನಗರಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಪ್ರತಿ ಮನೆಯಲ್ಲಿ ಎರಡು ಮೂರು ವಾಹನಗಳಿದ್ದು ವಾಹನ ದಟ್ಟಣೆ ಹೆಚ್ಚಾಗ್ತಿದೆ. ವಾಹನ ದಟ್ಟಣೆ ತಪ್ಪಿಸಲು ಸೈಕಲ್ ಬಳಸಿ ಎಂಬ ಜಾಗೃತಿ ಮೂಡಿಸಲಾಗ್ತಿದೆ. ಇದೀಗ ನಮ್ಮ ಮೆಟ್ರೋ ನಿಗಮ ಗ್ರೀನ್ ಸಿಟಿ ಉತ್ತೇಜಿಸಲು ಮೆಟ್ರೋ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಜೊತೆಗೆ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ.
BMRCL ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ಮೆಟ್ರೋ ರೈಲಿನ ಕೊನೆಯ ಬೋಗಿಯಲ್ಲಿ ಮಡಚುವ ಸೈಕಲ್ (foldable bicycles) ಕೊಂಡೊಯ್ಯಬಹುದು ಎಂದು ಹೇಳಿದೆ. ಈ ಹಿಂದೆ ನಿಮ್ಮನ್ನು ಚೆಕಿಂಗ್ ಮಾಡಿ ಒಳಗೆ ಬಿಡುತ್ತಿದ್ದಂತೆ, ಮೆಟ್ರೋ ನಿಲ್ದಾಣದ ಒಳಗೆ ಬೈಸಿಕಲ್ ಪ್ಯಾಕ್ ಮಾಡಿ ತರುತ್ತಿದ್ದಂತೆ ಲಗೇಜ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತೆ. ವಿಶೇಷ ಅಂದ್ರೆ ಮೆಟ್ರೋದಲ್ಲಿ ಬೈಸಿಕಲ್ ಕೊಂಡೊಯ್ಯಲು ಯಾವುದೇ ಲಗೇಜ್ ಶುಲ್ಕವಿರದೆ, ವಿನಾಯ್ತಿ ನೀಡಲಾಗಿದೆ.
KOPPAL; ಭಾರೀ ವಿವಾದದಲ್ಲಿ ಐತಿಹಾಸಿಕ ದೇಗುಲ, ಶಾಸ್ತ್ರೋಕ್ತವಾಗಿ ವಿಗ್ರಹ ಪುನರ್ ಸ್ಥಾಪನೆ
ಬೈಸಿಕಲ್ ಗಾತ್ರ ಎಷ್ಟಿರಬೇಕು?: ಮಡಚಬಹುದಾದ ಬೈಸಿಕಲ್ 15 ಕೆಜಿ ತೂಕ ಮೀರಿರಬಾರದು. ಅಲ್ಲದೆ ಗಾತ್ರವು 60cm×45cm×25cm ಹೊಂದಿರಬೇಕು. ಹೀಗಾಗಿ ಮಡಚುವ ಸೈಕಲನ್ನು ಮೆಟ್ರೋ ಕೊನೆಯ ಬೋಗಿಗಳ ಒಳಗೆ ಹಾನಿಯಾಗದಂತೆ ಸರಿಯಾಗಿ ಪ್ಯಾಕ್ ಮಾಡಿ ಇಡಬೇಕು. ಅಲ್ಲದೆ ಈ ಬೈಸಿಕಲ್ ಪಕ್ಕದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗದಂತೆ ನೋಡಿಕೊಂಡು ಕೊಂಡೊಯ್ಯಬೇಕು.
ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!
ಮೆಟ್ರೋ ಪ್ರಯಾಣಿಕರು ತಾವು ಉಪಯೋಗಿಸುವ ಫೋಲ್ಡಿಂಗ್ ಬೈಸಿಕಲ್ ಅನ್ನು ಎಲ್ಲೆಂದರಲ್ಲಿ ಪ್ರಯಾಣದ ಜೊತೆಗೆ ಒಯ್ಯಬಹುದು. ಅಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮೆಟ್ರೋ ಸ್ಟೇಷನಿಂದ ತೆರಳಲು ಸೈಕಲ್ ಬಳಕೆ ಮಾಡಬಹುದು. ಈ ಮೂಲಕ ಪೊಲ್ಯುಷನ್ ಕಡಿಮೆ ಮಾಡಿ ಗ್ರೀನ್ ಸಿಟಿ ಮಾಡಲು ನಮ್ಮ ಮೆಟ್ರೊ ಮೊದಲ ಪ್ರಯತ್ನ ಮಾಡ್ತಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಂದ ಬೀಕಾಬಿಟ್ಟಿ ವಸೂಲಿ!: ಬಿಎಂಟಿಸಿ (BMTC) ಕೆಎಸ್ಸಾರ್ಟಿಸಿ (KSRTC) ಸಾರಿಗೆ ಸಂಸ್ಥೆಗಳಿಗೆ ಒಂದರ ಮೇಲೊಂದರಂತೆ ಹೊಡೆತ ಬಿದ್ದು, ನಷ್ಟದಲ್ಲೆ ಮುಳುಗಿದೆ. ಅದ್ರೆ ಲಾಭದ ಟ್ರ್ಯಾಕ್ ನಲ್ಲಿದ್ದ ನಮ್ಮ ಮೆಟ್ರೋ (Namma Metro) ಕೋವಿಡ್ 19 ಬಂದಾಗಿನಿಂದ ಮುಳುಗುವ ದೋಣಿಯಂತಾಗಿದೆ. ಆ ನಷ್ಟದಿಂದ ಹೊರಬರಲು ನಮ್ಮ ಮೆಟ್ರೋ ಹರಸಾಹಸ ಪಡ್ತಿದೆ. ಇದೀಗ ಕೊಂಚ ಚೇತರಿಸಿಕೊಳ್ತಿದ್ರೂ ಕೂಡ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಮಾತ್ರ ದುರಾಸೆ. ಇದಕ್ಕಾಗಿ ದಿನಕ್ಕೊಂದರಂತೆ ಪಾಸ್ ಪರಿಚಯ ಮಾಡ್ತಿದ್ದು ಪ್ರಯಾಣಿಕರಿಂದ ಸುಲಿಗೆ ಮಾಡ್ತಿದೆ.
ಒನ್ ಡೆ ಹಾಗೂ ತ್ರಿ ಡೇ ಪಾಸ್ ಬೆನ್ನಲ್ಲೇ ಇದೀಗ 5 ಡೇ ಪಾಸ್ ನಲ್ಲಿಯೂ ವಸೂಲಿ ಗೆ ಇಳಿದಿದ್ದಾರೆ BMRCL ಅಧಿಕಾರಿಗಳು. ಮೆಟ್ರೋ ನಿಗಮ ಏಪ್ರಿಲ್ 2 ರಿಂದ ಒನ್ ಡೇ ಹಾಗೂ 3 ದಿನದ ಪಾಸ್ ಗಳನ್ನ ಪರಿಚಯಿಸಿದೆ. ಒನ್ ಡೇ ಪಾಸ್ ಗೆ 200ರೂ, ಮೂರು ದಿನದ ಪಾಸ್ ಗೆ 400 ರೂ ನಿಗದಿ ಮಾಡಿದೆ. ಈಗಾಗಲೇ ಈ ದುಬಾರಿ ಪಾಸ್ ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಆದ್ರೂ ನಿಗಮ ಮತ್ತೀಗ 5 ದಿನದ ಪಾಸನ್ನು ಪರಿಚಯಿಸಿದೆ. ಇದರ ಬೆಲೆ ಬರೋಬ್ಬರಿ 550 ರೂ ಫಿಕ್ಸ್ ಮಾಡಲಾಗಿದೆ.
ಬಿಎಂಟಿಸಿ ಒಂದು ವಾರದ ಪಾಸ್ 300 ಇರುವಾಗ ಮೆಟ್ರೋ 5 ದಿನದ ಪಾಸ್ 550 ರೂ ಯಾಕೆ ಅಂತ ಪ್ರಯಾಣಿಕರು ಪ್ರಶ್ನೆ ಮಾಡ್ತಿದ್ದಾರೆ. ಬಿಎಂಟಿಸಿ ಬಸ್ ಗಳಲ್ಲಿ ದಿನವಿಡೀ ನಗರದ ಮೂಲೆ ಮೂಲೆಯಲ್ಲಿ ಸಂಚರಿಸಲು ದಿನದ ಪಾಸ್ ಬೆಲೆ ₹70 ವಾರದ ಪಾಸ್ ಬೆಲೆ ₹300 ಇದೆ. ಆದರೆ ಮೆಟ್ರೋ ದುಬಾರಿ ಪಾಸ್ ಪರಿಚಯಿಸಿ ಸುಲಿಗೆ ಮಾಡ್ತಿದೆ.