KSOU Admission 2022; ಕರಾಮುವಿ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2022- 23ರ ಜುಲೈ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ. ಇನ್ನು ಅಂಧಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Karnataka State Open University Admission 2022 -23 for UG and PG courses gow

ಮೈಸೂರು (ಜೂನ್ 28):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2022- 23ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಅಹ್ವಾನಿಸಿದೆ.

ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಸಿಎ, ಬಿ.ಲಿಬ್‌.ಐ.ಎಸ್ಸಿ, ಎಂ.ಎ., ಎಂ.ಕಾಂ, ಎಂ.ಎಸ್ಸಿ, ಎಂಬಿಎ, ಎಂ.ಲಿಬ್‌.ಐ.ಎಸ್ಸಿ, ಪಿಜಿ ಸರ್ಟಿಫಿಕೇಚ್‌, ಡಿಪ್ಲೊಮಾ ಮತ್ತು ಯುಜಿ ಸರ್ಟಿಫಿಕೇಟ್‌ ಶಿಕ್ಷಣ ಕ್ರಮಗಳಿಗೆ ಮೈಸೂರು ಹಾಗೂ ರಾಜ್ಯಾದ್ಯಂತ ಇರುವ 23 ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಕಾರ್ಥಿ ಸಹಾಯ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಪ್ರವೇಶಾತಿಯನ್ನು ಮಾಡಲಾಗುತ್ತಿದೆ.

COCHIN SHIPYARD RECRUITMENT 2022: ವಿವಿಧ 106 ಹುದ್ದೆಗಳಿಗೆ ನೇಮಕಾತಿ

ವಿಶ್ವವಿದ್ಯಾನಿಲಯದ https://ksoumysuru.ac.in/ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಾಸ್ಪೆಕ್ಟಸ್‌ನಲ್ಲಿ ಎಲ್ಲಾ ವಿವರಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಅದರನ್ವಯ ಅರ್ಹ ಶಿಕ್ಷಣ ಕ್ರಮಗಳಿಗೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್‌ ಅಡ್ಮಿಷನ್‌ ಪೋರ್ಟಲ್‌ ಮೂಲಕ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್‌, ಮಾಜಿ ಸೈನಿಕರ ವಿದ್ಯಾರ್ಥಿಗಳು, ಆಟೋ/ ಕ್ಯಾಬ್‌ ಡ್ರೈವ​ರ್‍ಸ್ ಮತ್ತು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ. ಕೋವಿಡ್‌ನಿಂದಾಗಿ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವಿ ಕುಲಸಚಿವ ಪ್ರೊ.ಆರ್‌. ರಾಜಣ್ಣ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 8800335638, ದೂ. 0821- 2500981, 98440 10407, 99642 74173, 96114 18726, 99012 09621 ಸಂಪರ್ಕಿಸಬಹುದು.

Shivamogga Library Recruitment 2022; ಶಿವಮೊಗ್ಗ ಗ್ರಂಥಾಲಯದಲ್ಲಿ ಅರ್ಜಿ ಆಹ್ವಾನ 

ಶಿಕ್ಷಕರ ತರಬೇತಿ ಕೇಂದ್ರದ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು: ರಾಜ್ಯ ಸರ್ಕಾರದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ತಿಲಕ್‌ ನಗರದಲ್ಲಿ ನಡೆಯುತ್ತಿರುವ ಸರ್ಕಾರಿ ಅಂಧಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ದೊಂದಿಗೆ 2001 ರಿಂದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಗಳು ಪ್ರಾರಂಭವಾಗಿದ್ದು, ರಾಜ್ಯ ಸರ್ಕಾರವು ಅಂಗವಿಕಲರ ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ನಡೆಸುತ್ತಿರುವ ಏಕೈಕ ತರಬೇತಿ ಸಂಸ್ಥೆಯಾಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಜು. 21 ಕೊನೆಯ ದಿನ. ಜು. 30 ಮತ್ತು 31 ರಂದು ಆನ್‌ಲೈನ್‌ ಪರೀಕ್ಷೆ ನಡೆಯಲಿದ್ದು, ಆ. 5 ರಂದು ಫಲಿತಾಂಶ ಪ್ರಕಟಗೊಂಡು, ಆ. 10 ರಿಂದ 20 ರವರೆಗೆ ದಾಖಲಾತಿ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ https://mysore.nic.in/  ಭೇಟಿ ನೀಡಬಹುದು.

ಅರ್ಜಿಗಳು  lrttps://rehabcouncil.co.inl ಅಂತರ್ಜಾಲದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಮೈಸೂರಿನ ತಿಲಕ್‌ ನಗರದ ಪುಲಕೇಶಿ ರಸ್ತೆಯಲ್ಲಿರುವ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರದ ಉಪನಿರ್ದೇಶಕರು (ತರಬೇತಿ), ಇ-ಮೇಲ್‌ : hkhelenkellergl@email.com ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 0821-2491600, 2959600 ಸಂಪರ್ಕಿಸಬಹುದು.

ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ:
ಚಿಕ್ಕಬಳ್ಳಾಪುರ: 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕೊಲುಮೇನಹಳ್ಳಿ, ಚಿಕ್ಕಬಳ್ಳಾಪುರ ಇಲ್ಲಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಗಣಿತ ಶಿಕ್ಷಕರ ಹುದ್ದೆ ಖಾಲಿಯಿದ್ದು, ಸದರಿ ಹುದ್ದೆಗೆ ಗೌರವಧನದ ಆಧಾರದ ಮೇಲೆ ಹಿಂದಿ ಭಾಷಾ ಶಿಕ್ಷಕರ ಹುದ್ದೆಗೆ ಹಿಂದಿ ಬಿ.ಎಡ್‌ ಮತ್ತು ಗಣಿತ ಶಿಕ್ಷಕರ ಹುದ್ದೆಗೆ ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಮ್ಮ ವಿವರಗಳನ್ನು 01.07.2022ರ ಸಂಜೆ 5.30 ರೊಳಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕೊಲುಮೇನಹಳ್ಳಿ, ಚಿಕ್ಕಬಳ್ಳಾಪುರ ಇಲ್ಲಿಗೆ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಲುಮೇನಹಳ್ಳಿ  ಪ್ರಾಂಶುಪಾಲರ ಮೊಬೈಲ್‌ ನಂ: 9686907161 ಗೆ ಸಂಪರ್ಕಿಸಬಹುದು.

Latest Videos
Follow Us:
Download App:
  • android
  • ios