ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳ  ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಜುಲೈ 8 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು (ಜೂನ್ 28): ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ (Cochin Shipyard Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಸೆಮಿ ಸ್ಕಿಲ್ಡ್ ರಿಗ್ಗರ್, ಫೈರ್‌ಮ್ಯಾನ್ ಸೇರಿದಂತೆ ಒಟ್ಟು 106 ಹುದ್ದೆಗಳು ಖಾಲಿ ಇದ್ದು, ಐಟಿಐ, ಡಿಪ್ಲೊಮಾ ಮತ್ತು 10ನೇ ತರಗತಿ ಪಾಸಾದವರು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 8 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾನ cochinshipyard.com ಗೆ ಭೇಟಿ ನೀಡಬಹುದು.

ಒಟ್ಟು 106 ಹುದ್ದೆಗಳ ಮಾಹಿತಿ
ಸೆಮಿ ಸ್ಕಿಲ್ಡ್ ರಿಗ್ಗರ್ - 53 ಹುದ್ದೆಗಳು
ಸ್ಕ್ಯಾಫೋಲ್ಡರ್ - 5 ಹುದ್ದೆಗಳು
ಸುರಕ್ಷತಾ ಸಹಾಯಕ- 18 ಹುದ್ದೆಗಳು
ಅಗ್ನಿಶಾಮಕ - 29 ಹುದ್ದೆಗಳು
ಅಡುಗೆ - 1 ಹುದ್ದೆ

SHIVAMOGGA LIBRARY RECRUITMENT 2022; ಶಿವಮೊಗ್ಗ ಗ್ರಂಥಾಲಯದಲ್ಲಿ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ: ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 
ಸೆಮಿ ಸ್ಕಿಲ್ಡ್ ರಿಗ್ಗರ್ ಹುದ್ದೆಗೆ ನಾಲ್ಕನೇ ತರಗತಿ ಪಾಸಾಗಿರಬೇಕು. 
ಸ್ಕ್ಯಾಫೋಲ್ಡರ್ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು. 
ಸುರಕ್ಷತಾ ಸಹಾಯಕ- ಹುದ್ದೆಗೆ 10ನೇ ತರಗತಿ, ಡಿಪ್ಲೊಮಾ ಪಾಸಾಗಿರಬೇಕು.
ಅಗ್ನಿಶಾಮಕ - ಹುದ್ದೆಗೆ 10ನೇ ತರಗತಿ 
ಅಡುಗೆ ಹುದ್ದೆಗೆ 7ನೇ ತರಗತಿ ಪಾಸಾಗಿರಬೇಕು. 

ವಯೋಮಿತಿ: ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ. ಅಡುಗೆ ಹುದ್ದೆಗೆ ಗರಿಷ್ಠ 53 ವರ್ಷಗಳು, ಮಿಕ್ಕ ಎಲ್ಲಾ ಹುದ್ದೆಗೆ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಯಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ-ಎಸ್‌ಟಿ ಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. 

ಅರ್ಜಿ ಶುಲ್ಕ: ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳು ಬಿಟ್ಟು ಮಿಕ್ಕೆಲ್ಲವರಿಗೆ 200 ರೂ ಅರ್ಜಿ ಶುಲ್ಕ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ: ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಮತ್ತು ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 22100 ರೂ ನಿಂದ 23400 ರೂ. ವರೆಗೆ ವೇತನ ದೊರೆಯಲಿದೆ.

Dakshina Kannada Anganwadi Recruitment 2022: ಒಟ್ಟು 96 ಹುದ್ದೆಗಳಿಗೆ ಅರ್ಜಿ ಆಹ್ವಾನ

Khelo India ಯೋಜನೆಯಡಿ ರಾಜ್ಯದ ಹಲವೆಡೆ ನೇಮಕಾತಿ: ಖೇಲೋ ಇಂಡಿಯಾ ಯೋಜನೆಯಡಿ (khelo india programme ) ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಥೆರಪಿಸ್ಟ್‌ ಗ್ರೇಡ್‌ 2 ಮತ್ತು ಸ್ಪೋರ್ಚ್‌್ಸ ಮಸ್ಯೂರ್‌ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕೃಷ್ಟತಾ ಕೇಂದ್ರ ಮತ್ತು ಜಯಪ್ರಕಾಶ್‌ ನಾರಾಯಣ್‌ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಫಿಸಿಯೋಥೆರಪಿಸ್ಟ್‌ ಗ್ರೇಡ್‌ 11 ಮತ್ತು ಸ್ಪೋರ್ಚ್‌್ಸ ಮೆಸ್ಯೂರ್‌ ಹುದ್ದೆಗಳನ್ನು ಮಂಜೂರು ಮಾಡಿದ್ದುಘಿ, ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಂಬಂಧಿಸಿದ ದಾಖಲೆಯನ್ನು ದೃಢೀಕರಿಸಿ ಅರ್ಜಿಯನ್ನು ಜೂ. 28 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0821- 2564179 ಸಂಪರ್ಕಿಸಬಹುದು.