ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರದಲ್ಲಿರುವ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಆರೋಪದ 14 ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಚ್‌ ನಿರಾಕರಿಸಿದೆ.

ಬೆಂಗಳೂರು (ಜು.6): ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರದಲ್ಲಿರುವ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಆರೋಪದ 14 ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಚ್‌ ನಿರಾಕರಿಸಿದೆ. ಪ್ರಕರಣ ರದ್ದು ಕೋರಿ ಶಿಕ್ಷಕ ಕೆ.ಟಿ.ಪ್ರಭುನಾಯ್ಕ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಗುರು ಸ್ಥಾನದಲ್ಲಿರುವ ಶಿಕ್ಷಕ ಮೂರ್ನಾಲ್ಕು ತಿಂಗಳ ಕಾಲ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನುವ ಆರೋಪ ಅತ್ಯಂತ ಗಂಭೀರ ವಿಚಾರವಾಗಿದೆ.

ಹಾಗಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354ಎ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದೇ ಘಟನೆಯ ಮೇಲೆ ಹಲವು ಪ್ರಕರಣಗಳು ದಾಖಲಿಸಲು ಸಾಧ್ಯವಿಲ್ಲ. ದೂರುಗಳ ಪ್ರಕಾರ 2021ರ ಸೆಪ್ಟೆಂಬರ್‌ 1 ಮತ್ತು 2022ರ ಜನವರಿ 3ರ ನಡುವೆ ಕಿರುಕುಳ ಘಟನೆಗಳಾಗಿವೆ. ಹಾಗಾಗಿ ಎಫ್‌ಐಆರ್‌ ದಾಖಲಿಸಿರುವುದು ಸರಿಯಾಗಿದ್ದು, ಅರ್ಜಿದಾರರ ತನಿಖೆ ಎದುರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

Bengaluru; ಕಪಾಳಕ್ಕೆ ಹೊಡೆದ ಶಿಕ್ಷಕ, ವಿದ್ಯಾರ್ಥಿ ICUಗೆ ಅಡ್ಮಿಟ್!

ಶಾಲೆಯಲ್ಲಿ ನಮ್ಮ ಕಕ್ಷಿದಾರರ ವಿರುದ್ಧ ದ್ವೇಷ ಸಾಧಿಸುವ ವ್ಯಕ್ತಿಗಳು ಪೋಷಕರಿಗೆ ಆಮಿಷವೊಡ್ಡುವ ಮೂಲಕ ದೂರುಗಳನ್ನು ನೀಡಲಾಗುತ್ತಿದೆ ಎಂಬ ಅರ್ಜಿದಾರರ ಪರ ವಕೀಲರ ವಾದ ಅಸಂಬದ್ಧವಾಗಿದೆ. ಕಾರಣವಿಲ್ಲದೆ ತನ್ನ ಮಗುವಿಗೆ ಲೈಂಗಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಯಾವ ತಂದೆಯೂ ದೂರು ದಾಖಲಿಸಲು ಬಯಸುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಜಾರ್ಖಂಡದ ಖುಂಟಿ ಜಿಲ್ಲೆಯಲ್ಲಿ ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐಎಎಸ್‌ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ. ಖುಂಟಿಯ ಉಪ-ವಿಭಾಗೀಯ ಮ್ಯಾಜಿಸ್ಪ್ರೇಟ್‌ ಆಗಿರುವ ಸೈಯ್ಯದ್‌ ರಿಯಾಜ್‌ ಅಹ್ಮದ್‌ ಬಂಧಿತ ಅಧಿಕಾರಿ.

ಮತ್ತೊಬ್ಬನೊಂದಿಗೆ ಚಕ್ಕಂದ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿಯನ್ನು ಕೊಂದ ಗಂಡ

ಲೈಂಗಿಕ ಕಿರುಕುಳಕ್ಕೆ ತುತ್ತಾದ ವಿದ್ಯಾರ್ಥಿನಿ ಸೇರಿ ಐಐಟಿಯ 8 ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಹೊರರಾಜ್ಯದಿಂದ ಖುಂಟಿ ಜಿಲ್ಲೆಗೆ ಬಂದಿದ್ದರು. ಉಪ ಅಭಿವೃದ್ಧಿ ಆಯುಕ್ತರ ನಿವಾಸದಲ್ಲಿ ಆಯೋಜಿಸಿದ ಔತಣಕೂಟದಲ್ಲಿ ಇವರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಅತಿಥಿಗಳು ಹಾಗೂ ವಿದ್ಯಾರ್ಥಿನಿಯರಿಗೂ ಮದ್ಯವನ್ನು ನೀಡಲಾಗಿತ್ತು. ಈ ವೇಳೆ ರಿಯಾಜ್‌ ಅಹ್ಮದ್‌ ಏಕಾಂಗಿಯಾಗಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ದಾಖಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.