Bengaluru; ಕಪಾಳಕ್ಕೆ ಹೊಡೆದ ಶಿಕ್ಷಕ, ವಿದ್ಯಾರ್ಥಿ ICUಗೆ ಅಡ್ಮಿಟ್!

ಗಣಿತ ನೋಟ್ ಬುಕ್ ತಂದಿಲ್ಲ ಎಂಬ ಕಾರಣಕ್ಕೆ ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಟೀಚರ್ ಹಲ್ಲೆ ಮಾಡಿದ ಪರಿಣಾಮವಾಗಿ ವಿದ್ಯಾರ್ಥಿ  ICU ನಲ್ಲಿ ಅಡ್ಮಿಟ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

student admitted hospital after beating by maths teacher in bengaluru gow

ಬೆಂಗಳೂರು (ಜು.4):  ಶಾಲಾ ವಿದ್ಯಾರ್ಥಿ (Student) ಮೇಲೆ ಶಿಕ್ಷಕನೋರ್ವ (Teacher) ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಗಣಿತ  ನೋಟ್ ಬುಕ್ ತಂದಿಲ್ಲ ಎಂಬ ಕಾರಣಕ್ಕೆ ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಟೀಚರ್ ಹಲ್ಲೆ ಮಾಡಿದ ಪರಿಣಾಮವಾಗಿ ವಿದ್ಯಾರ್ಥಿ  ICU ನಲ್ಲಿ ಅಡ್ಮಿಟ್ ಆಗಿದ್ದಾನೆ. ವಿಜಯನಗರದ ಮಾಗಡಿ ರಸ್ತೆಯ ಅನುಭವನಗರದಲ್ಲಿ ಇರುವ ಬ್ಲೂ ಬೆಲ್ ಶಾಲೆಯಲ್ಲಿ (Blue Bell Public School) ಈ ಘಟನೆ ನಡೆದಿದ್ದು, ಗಣಿತ ಶಿಕ್ಷಕ (maths teacher) ಮಾದೇಶ್ ಎಂಬಾತ ಹೊಡೆದ ಪರಿಣಾಮ ವಿದ್ಯಾರ್ಥಿ ತನ್ಮಯ್ ನ ಕಿವಿ ಮತ್ತು ಕಣ್ಣಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ವಿದ್ಯಾರ್ಥಿಯನ್ನು ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಗ್ಗೆ ಬ್ಲೂ ಬೆಲ್ ನ ಶಾಲೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.  ಘಟನೆ ಬಗ್ಗೆ ಕೇಳಿದ್ದಕ್ಕೆ ಶಾಲೆಯ  ಪ್ರಾಂಶುಪಾಲ ರಾಜೇಶ್   ಉಡಾಫೆ ಉತ್ತರ ನೀಡಿದ್ದಾರೆ. ಹಲ್ಲೆ ಮಾಡಿದ ಶಿಕ್ಷಕರ ಬಗ್ಗೆ ವಿಚಾರಿಸಿದಾಗ ಅವರಿಗೆ  ಕೊರೋನಾ ಬಂದಿದೆ. ಶಾಲೆಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ.  ನನಗೆ ಪೋಲಿಸರು ಎಲ್ಲರೂ ಪರಿಚಯ ಇದ್ದಾರೆ. ನೀನು ಏನು ಮಾಡೋಕೆ ಆಗಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

CBSE Class 10th Result 2022 LIVE: ಇವತ್ತು ಅನೌನ್ಸ್ ಆಗೋಲ್ಲ ಫಲಿತಾಂಶ

 ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರಾಂಶುಪಾಲ ರಾಜೇಶ್, ಘಟನೆ ಕಳೆದ ಶುಕ್ರವಾರ ನಡೆದಿದೆ. ಕಮ್ಯುನಿಕೇಶನ್ ಗ್ಯಾಪ್ ನಿಂದ ಪೋಷಕರು ಈ ಆರೋಪ ಮಾಡಿದ್ದಾರೆ. ನಾವು ಘಟನೆ ಬಗ್ಗೆ ಸ್ಪಂದಿಸಿದ್ದೇವೆ. ಗಣಿತ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಯ ಸಂಪೂರ್ಣ ವೈದ್ಯಕೀಯ ವೆಚ್ಚ ಶಾಲೆಯಿಂದಲೇ ಭರಿಸುತ್ತೇವೆ. ಈ ಘಟನೆ ಬಗ್ಗೆ ಸಂಪೂರ್ಣ ಜವಾಬ್ದಾರಿ ವಹಿಸುತ್ತೇವೆ. ಶಾಲಾ ವೆಚ್ಚವನ್ನು ಕೂಡ ಭರಿಸಲಿದ್ದೇವೆ. ತನ್ಮಯ್ ಬೇರೆ ಶಾಲೆಗೆ ದಾಖಲಾದರೂ ಕೂಡ ಶಿಕ್ಷಣದ ವೆಚ್ಚ ಭರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕೊಪ್ಪಳದಲ್ಲಿ ವಿದ್ಯಾರ್ಥಿಗೆ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ  ಶಿಕ್ಷಕ!:  ಹೋಮ್ ವರ್ಕ್ (Home Work) ಮಾಡಿಲ್ಲ ಎಂಬ ಕಾರಣಕ್ಕೆ  ವಿದ್ಯಾರ್ಥಿಗೆ ಕಿವಿಯಲ್ಲಿ ರಕ್ತ ಬರುವಂತೆ ಶಿಕ್ಷಕ (Teacher) ಹೊಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೋಚಿಂಗ್ ಸೆಂಟರ್ (Coaching Centre) ಶಿಕ್ಷಕನಿಂದ‌ ಈ ಅಮಾನವೀಯ ಕೃತ್ಯ ನಡೆದಿದೆ. ಕೊಪ್ಪಳ (Koppal) ನಗರದ ಧನ್ವಂತರಿ ಕಾಲೋನಿಯಲ್ಲಿ ಲೋಹಿತ್ ಟುಟೋರಿಯಲ್ಸ್  ಹೆಸರಿನ ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿರುವ  ಶಿಕ್ಷಕ ಲೋಹಿತ್ 10 ವರ್ಷದ ಬಾಲಕ ಪ್ರಥಮ್‌ಗೆ  ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.  ಮೈ ಮೇಲೆ ಬರೆ ಬರೋ ಹಾಗೆ  ಶಿಕ್ಷಕ ಲೋಹಿತ್ ಥಳಿಸಿದ್ದಾರೆ. 

ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ NEP ಪಠ್ಯಕ್ರಮ: BC Nagesh

ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ, ಕಿವಿಯಲ್ಲಿ ರಕ್ತ ಬರುವ ಹಾಗೆ 10 ವರ್ಷದ ಪ್ರಥಮ್‌ನನ್ನು ಶಿಕ್ಷಕ ಥಳಿಸಿದ್ದಾರೆ.  ಶಿಕ್ಷಕನ ಅಮಾನವೀಯ ವರ್ತನೆಗೆ ವಿದ್ಯಾರ್ಥಿ ಸಂಕಷ್ಟ ಅನುಭವಿಸುತ್ತಿದ್ದಾನೆ.  ಕ್ಲಾಸ್‌ಗೆ ಬರೋ ವಿದ್ಯಾರ್ಥಿಗಳ ಮೇಲೆ ಶಿಕ್ಷಕ ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಲಾಗಿದೆ.  ಬಾಲಕ ಪ್ರಥಮ್ ಮೈಮೇಲೆ ಎಲ್ಲ ಗಾಯಗಳಾಗಿದ್ದು, ಸದ್ಯ ಪ್ರಥಮ್‌ಗೆ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ.  ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios