ಮತ್ತೊಬ್ಬನೊಂದಿಗೆ ಚಕ್ಕಂದ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿಯನ್ನು ಕೊಂದ ಗಂಡ
Extramarital affair news: ಇಬ್ಬರೂ ಪ್ರೀತಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ವಿಪರ್ಯಾಸ ನೋಡಿ ಆರು ವರ್ಷಗಳ ನಂತರ ಹೆಂಡತಿಗೆ ಇನ್ನೊಬ್ಬನ ಜೊತೆ ದೈಹಿಕ ಸಂಬಂಧ ಶುರುವಾಗಿತ್ತು. ಇದನ್ನು ತಿಳಿದ ಗಂಡ ರೆಡ್ ಹ್ಯಾಂಡಾಗಿ ಹಿಡಿದಿದ್ದ. ಅಷ್ಟೇ ಅಲ್ಲ ಹೆಂಡತಿಯನ್ನು ಸಾಯಿಸಿಯೇ ಬಿಟ್ಟ. ಅಕ್ರಮ ಸಂಬಂಧ ಹುಡುಗಿಯನ್ನು ಸಾವಿನ ಮನೆಗೆ ಕರೆದೊಯ್ದ ಕತೆ ಇಲ್ಲಿದೆ.
ನವದೆಹಲಿ: ಹೆಂಡತಿ ಇನ್ನೊಬ್ಬನೊಡನೆ ಅನೈತಿಕ ಸಂಬಂಧ (Extramarital Affair) ಇಟ್ಟುಕೊಂಡಿರುವುದು ಗೊತ್ತಾದ ಬೆನ್ನಲ್ಲೇ ಹೆಂಡತಿಯನ್ನು ಗಂಡ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅನೈತಿಕ ಸಂಬಂಧಗಳ ಪ್ರಕರಣಗಳು ಬಹುಪಾಲು ದಾರುಣ ಅಂತ್ಯವನ್ನೇ ಕಾಣುವುದು ಸಾಮಾನ್ಯ ಎಂಬುವಂತಾಗಿದೆ. ದೆಹಲಿಯ (New Delhi) ರೋಹಿಣಿ ಏರಿಯಾದಲ್ಲಿ ಈ ಘಟನೆ ನಡೆದಿದೆ. ಗಂಡ ಮತ್ತು ಹೆಂಡತಿ ನಡುವೆ ಹಲವು ದಿನಗಳಿಂದ ಅನೈತಿಕ ಸಂಬಂಧ ವಿಚಾರವಾಗಿ ಕಿತ್ತಾಟ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಮೊನ್ನೆ ಕೆಲಸದಿಂದ ಮನೆಗೆ ತುರ್ತಾಗಿ ಆರೋಪಿ ಗಂಡ ಅನಿಲ್ ಬಂದಿದ್ದಾನೆ. ಆಗ ಕೊಲೆಯಾದ ಹೆಂಡತಿ ರಶ್ಮಿ ಇನ್ನೊಬ್ಬನ ಜತೆ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಕೋಪದಿಂದ ಅನಿಲ್ ರಶ್ಮಿಯ ಕತ್ತು ಹಿಸುಕಿ ಸಾಯಿಸಿದ್ದಾನೆ.
ಅನಿಲ್ ಮತ್ತು ರಶ್ಮಿ ಪ್ರೀತಿಸಿ ಮದುವೆಯಾದವರು. ಆರು ವರ್ಷಗಳ ಹಿಂದೆ ಓಡಿಶಾದ ಬುಲಂದ್‌ಶೆಹರ್‌ನಲ್ಲಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದ ಹಿಂದೆ ದೆಹಲಿಗೆ ಶಿಫ್ಟ್ ಆಗಿದ್ದರು. ಅಲ್ಲಿಂದ ಇಬ್ಬರ ಸಂಸಾರದಲ್ಲಿ ಬಿರುಕು ಮೂಡಲು ಆರಂಭವಾಯಿತು ಎಂದು ಆರೋಪಿ ಅನಿಲ್ ತಮ್ಮ ಸುನೀಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸುನೀಲ್ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ದೆಹಲಿಗೆ ಬಂದ ಕೆಲ ದಿನಗಳ ನಂತರ ಇಬ್ಬರಿಗೂ ಜಗಳ ಆರಂಭವಾಗಿದೆ. ಇಬ್ಬರ ಕಿತ್ತಾಟ ಕಡಿಮೆ ಮಾಡಲು ಸುನೀಲ್ ಪ್ರಯತ್ನಿಸಿದ್ದನಾದರೂ ಅದು ಸಾಧ್ಯವಾಗಿರಲಿಲ್ಲ.
ದೆಹಲಿಗೆ ಬಂದ ನಂತರ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಬ್ಲು ಎಂಬಾತನನ್ನು ರಶ್ಮಿ ಪರಿಚಯ ಮಾಡಿಕೊಂಡಿದ್ದಳು. ಅಗತ್ಯಕ್ಕಿಂತ ಹೆಚ್ಚು ಸ್ನೇಹ ಇಟ್ಟುಕೊಂಡಿದ್ದ ಕಾರಣಕ್ಕೆ ಅನಿಲ್ ಹಲವು ಬಾರಿ ಆತನ ಸಂಪರ್ಕ ಬಿಡು ಎಂದು ರಶ್ಮಿಗೆ ಹೇಳಿದ್ದ. ಆದರೂ ಇಬ್ಬರ ನಡುವೆ ಸಂಬಂಧ ಗಾಢವಾಗತೊಡಗಿತ್ತು. ಇದೇ ಕಾರಣಕ್ಕೆ ಹಲವು ಬಾರಿ ಅನಿಲ್ ಮತ್ತು ರಶ್ಮಿ ನಡುವೆ ಜಗಳಗಳಾಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಅನಿಲ್ ಆರೋಪಿಸಿದ್ದ. ಅದು ಕೇವಲ ಆರೋಪವಾಗಿರಲಿಲ್ಲ, ಸತ್ಯವೂ ಆಗಿತ್ತು ಎನ್ನುತ್ತಾರೆ ಹತ್ತಿರದಿಂದ ನೋಡಿರುವ ಸುನೀಲ್.
ಇದನ್ನೂ ಓದಿ: Relationship Tips: ಲೈಂಗಿಕ ಬಯಕೆಯಾದಾಗ ಬರುವ ಪತಿ, ಇನ್ನೊಬ್ಬನ ಪ್ರೀತಿಗೆ ಬಿದ್ದ ಪತ್ನಿ
ಮೊನ್ನೆ ಕೆಲಸಕ್ಕೆಂದು ಆಚೆ ಹೋಗಿದ್ದ ಅನಿಲ್ ಅರ್ಧಕ್ಕೇ ವಾಪಸ್ ಮನೆಗೆ ಬಂದಿದ್ದಾನೆ. ಆಗ ಮನೆಯಲ್ಲಿ ರಶ್ಮಿ ಮತ್ತು ಬಬ್ಲು ಚಕ್ಕಂದವಾಡುತ್ತಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಣ್ಣೆದುರೇ ಇನ್ನೊಬ್ಬನೊಂದಿಗೆ ಚಕ್ಕಂದವಾಡುತ್ತಿದ್ದ ಹೆಂಡತಿಯನ್ನು ಕಂಡು ಸುನೀಲ್ ಪಿತ್ತ ನೆತ್ತಿಗೇರಿದೆ. ಬಬ್ಲು ಅಲ್ಲಿಂದ ಓಡಿಹೋಗಿದ್ದಾನೆ. ಸಿಟ್ಟಿನ ಬರದಲ್ಲಿ ಹೆಂಡತಿಯ ಕತ್ತು ಹಿಸುಕಿ ಹೆಂಡತಿಯನ್ನು ಸಾಯಿಸಿದ್ದಾನೆ. ಅದಾಗ ಎರಡು ಗಂಟೆಗಳ ಕಾಲ ಶವದ ಪಕ್ಕದಲ್ಲೇ ಕುಳಿತಿದ್ದನಂತೆ. ನಂತರ ತಮ್ಮ ಸುನೀಲ್‌ಗೆ ಕರೆಮಾಡಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಅದಾದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Extra Marital Affairs : ಕೊಲೀಗ್ ಜೊತೆ ಸಂಬಂಧ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ
ರೋಹಿಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅನಿಲ್ ಪತ್ತೆಗಾಗಿ ತಂಡ ರಚಿಸಲಾಗಿದೆ. ದೆಹಲಿಯಿಂದ ಓಡಿಶಾಗೆ ಓಡಿಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಜತೆಗೆ ಬಬ್ಲುವನ್ನು ಕೂಡ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.