ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್, ಶಾಲಾ ಬಸ್ ಖರೀದಿಗೆ ಸರಕಾರ ಒಪ್ಪಿಗೆ

ಸರಕಾರಿ ಶಾಲೆಗಳಿಗೆ ಶಾಲಾ ಮಕ್ಕಳನ್ನು  ದೂರದ ಊರುಗಳಿಂದ ಕರೆದುಕೊಂಡು ಬರದಲು ಶಾಲಾ ವಾಹನ ಖರೀದಿಸಲು  ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

karnataka government decided to provide vehicle facility for children studying in government schools across state gow

ಬೆಂಗಳೂರು (ಜು.2): ಸರಕಾರಿ ಶಾಲೆಗಳಿಗೆ ಶಾಲಾ ಮಕ್ಕಳನ್ನು ( School Children ) ದೂರದ ಊರುಗಳಿಂದ ಕರೆದುಕೊಂಡು ಬರದಲು ಶಾಲಾ ವಾಹನ ( School Vehicle ) ಖರೀದಿಸಲು  ರಾಜ್ಯ ಸರ್ಕಾರ ( Karnataka Government ) ಒಪ್ಪಿಗೆ ಸೂಚಿಸಿದೆ.  ಈ ಬಗ್ಗೆ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಡಿ ಚಂದ್ರಶೇಖರಯ್ಯ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದಾರೆ. 

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಯೋಜನೆಯ ಮಾರ್ಗಸೂಚಿಗಳು 2014ರಲ್ಲಿನ ಅನುಬಂಧ-|||ರಡಿ ಈ ಕೆಳಗಿನ ಅಂಶಗಳನ್ನು ಸೇರಿಸಲಾಗಿದೆ.

  • ಸರಕಾರಿ  ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು  ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಕಲ್ಪಿಸಲಾಗಿದೆ.
  •  ಶಾಲಾ ವಾಹನಕ್ಕೆ, ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ( SDMC) ಇತರೆ ಅನುದಾನದಡಿ ವೆಚ್ಚ ಭರಿಸುವಂತೆ ಷರತ್ತು ವಿಧಿಸಲಾಗಿದೆ.

ಕಳೆದ ವರ್ಷ ರಾಜ್ಯದಲ್ಲಿ ಶಾಲಾ ಪ್ರವೇಶ ಕುಸಿತ

ಸರ್ಕಾರಿ ಶಾಲೆ ನಿರ್ವಹಣೆಗೆ, 19.8 ಕೋಟಿ ಬಿಡುಗಡೆ
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ನಿರ್ವಹಣೆಗೆ ಸರ್ಕಾರ ಅನುಮೋದಿಸಿರುವ ಅನುದಾನದ ಪೈಕಿ ಮೊದಲ ಹಂತವಾಗಿ 19.81 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 47,959 ಸರ್ಕಾರಿ ಶಾಲೆಗಳ ನಿರ್ವಹಣೆಗೆ 2022ನೇ ಸಾಲಿನಲ್ಲಿ ಸರ್ಕಾರ 143.75 ಕೋಟಿ ರು. ಅನುದಾನವನ್ನು ಅನುಮೋದಿಸಿದೆ.

ಈ ಪೈಕಿ ಈಗ 19.81 ಕೋಟಿ ರು. ಬಿಡುಗಡೆ ಮಾಡಿದೆ. ಈ ಪೈಕಿ 1ರಿಂದ 30 ವಿದ್ಯಾರ್ಥಿಗಳಿರುವ 16,673 ಶಾಲೆಗಳಿಗೆ ಶಾಲೆಗಳಿಗೆ ಘಟಕವೆಚ್ಚ, ಶಾಲಾನುದಾನದ ಸೇರಿದಂತೆ 4.16 ಕೋಟಿ ರು., 31ರಿಂದ 100 ಮಕ್ಕಳಿರುವ 16,172 ಶಾಲೆಗಳಿಗೆ 8.08 ಕೋಟಿ ರು., 101ರಿಂದ 250 ಮಕ್ಕಳಿರುವ 10,786 ಶಾಲೆಗಳಿಗೆ 5.39 ಕೋಟಿ ರು., 251ರಿಂದ 1000 ಮಕ್ಕಳಿರುವ 4222 ಶಾಲೆಗಳಿಗೆ 2.11 ಕೋಟಿ ರು., 1000 ಸಾವಿರಕ್ಕಿಂತ ಹೆಚ್ಚು ಮಕ್ಕಳಿರುವ 106 ಶಾಲೆಗಳಿಗೆ 5.30 ಲಕ್ಷ ರು. ಅನುದಾನವನ್ನು ಸಮಗ್ರ ಶಿಕ್ಷಣ ಕರ್ನಾಟಕದಿಂದ ಬಿಡುಗಡೆ ಮಾಡಲಾಗಿದೆ. 

Byju's Layoff; 2,500 ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್! 

ವ್ಯಾಸಂಗಕ್ಕೂ ಬೆಂಗಳೂರೇ ನಂಬರ್‌ 1: ಸಮೀಕ್ಷೆ
ಮುಂಬೈ (Mumbai), ಬೆಂಗಳೂರು (Bengaluru), ಚೆನ್ನೈ (Chennai) ಮತ್ತು ದೆಹಲಿ (Delhi) ಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಟಾಪ್ 140 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅಸ್ಕರ್ ಕ್ಯೂಎಸ್ ಶ್ರೇಯಾಂಕಗಳ ಪ್ರಕಾರ, ವಾಣಿಜ್ಯ ನಗರಿ ಮುಂಬೈ, ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ನಗರವಾಗಿ ಸ್ಥಾನ ಪಡೆದಿದೆ. 140 ನಗರಗಳ ಪೈಕಿ ಮುಂಬೈ 103ನೇ ಸ್ಥಾನ, ಬೆಂಗಳೂರು 114ನೇ ಸ್ಥಾನ, ಚೆನ್ನೈ 125ನೇ ಸ್ಥಾನಗಳಿಸಿವೆ. ಜಾಗತಿಕ ಶ್ರೇಯಾಂಕವನ್ನು ಹೊಂದಿರುವ ಮುಂಬೈ, 'ಕೈಗೆಟುಕುವಿಕೆ' ಪ್ಯಾರಾಮೀಟರ್‌ನಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದೆ. ಆದರೆ 'ವಿದ್ಯಾರ್ಥಿ ಮಿಶ್ರಣ' ಮತ್ತು 'ಅಪೇಕ್ಷಣೀಯತೆ'ಯಲ್ಲಿ ಹೆಣಗಾಡುತ್ತಿದೆ. 

ಭಾರತವು ಈ ವರ್ಷ ಎರಡು ಹೊಸ ಪ್ರವೇಶಗಳೊಂದಿಗೆ ತನ್ನ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸಿದೆ  ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿನ ಒಟ್ಟಾರೆ ವಿದ್ಯಾರ್ಥಿ ಸಮೂಹದ ಒಂದು ಸಣ್ಣ ಭಾಗವನ್ನು ಮಾತ್ರ ಪ್ರತಿನಿಧಿಸುತ್ತಾರೆ. ಉನ್ನತ ಶಿಕ್ಷಣದ ಮೇಲಿನ ಅಖಿಲ ಭಾರತ ಸಮೀಕ್ಷೆ (AISHE) 2018-19 ರ ಪ್ರಕಾರ, ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ 47,427. 2023 ರ ಅಂತ್ಯದ ವೇಳೆಗೆ ಭಾರತವು 2,00,000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದು ಪ್ರಸ್ತುತ ಒಟ್ಟು ನಾಲ್ಕು ಪಟ್ಟು ಹೆಚ್ಚು. 

 

Latest Videos
Follow Us:
Download App:
  • android
  • ios