Asianet Suvarna News Asianet Suvarna News

Byju's Layoff; 2,500 ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್!

ವಿಶ್ವದ ಅತ್ಯಂತ ಪ್ರಸಿದ್ಧ ಎಜುಟೆಕ್ ಕಂಪೆನಿ ಬೈಜೂಸ್  ಬರೋಬ್ಬರಿ 2500 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಆದರೆ ಕೇವಲ 500 ಮಂದಿಯನ್ನು ಮಾತ್ರ ತೆಗೆದು ಹಾಕಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

byjus layoff Over 2,500 employees gow
Author
Bengaluru, First Published Jun 30, 2022, 4:58 PM IST

ನವದೆಹಲಿ (ಜೂನ್ 30): ವಿಶ್ವದ ಅತ್ಯಂತ ಪ್ರಸಿದ್ಧ ಎಜುಟೆಕ್ ಕಂಪೆನಿ ಬೈಜೂಸ್ (edtech company Byju's) ಬರೋಬ್ಬರಿ 2500 ಉದ್ಯೋಗಿಗಳನ್ನು (Employees) ತೆಗೆದು ಹಾಕಿದೆ ಎಂದು ಸುದ್ದಿಯಾಗಿದೆ. ಮಾಧ್ಯಮಗಳಲ್ಲಿ ಸುದ್ದಿಯಾದ ತಕ್ಷಣ ಪ್ರತಿಕ್ರಿಯೆ ನೀಡಿರುವ ಬೈಜೂಸ್ ಕೇವಲ 500 ಮಂದಿಯನ್ನು ಮಾತ್ರ ತೆಗೆದು ಹಾಕಲಾಗಿದೆ.  ಸಮೂಹ ಕಂಪನಿಗಳಾದ್ಯಂತ 500ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಇರಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಆದರೆ ಕಂಪೆನಿಯ ಉದ್ಯೋಗಿಗಳ ಪ್ರಕಾರ 2500 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. 

ಪ್ರಪಂಚದ ಅತ್ಯಂತ ಮೌಲ್ಯಯುತವಾದ edtech ಕಂಪನಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಮನಿಕಂಟ್ರೋಲ್ ಜಾಲತಾಣ ಈ ಹಿಂದೆ ವರದಿ ಮಾಡಿತ್ತು. ಸದ್ಯಕ್ಕೆ ಈ ಕಂಪೆನಿಯ ಮೌಲ್ಯ 2200 ಕೋಟಿ ಅಮೆರಿಕನ್ ಡಾಲರ್. ಬೈಜು ರವೀಂದ್ರನ್ (Byju Raveendran) ನೇತೃತ್ವದ  ಈ ಯುನಿಕಾರ್ನ್ ಆಕ್ರಮಣಕಾರಿಯಾಗಿ ವೆಚ್ಚ ಕಡಿತದ ಹಾದಿಯಲ್ಲಿದೆ. ಸತತ ಎರಡು ವರ್ಷ  ಕೊರೊನಾ ಕಾಲದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಪಡೆದಿದ್ದ ಎಜುಟೆಕ್​ ಕಂಪೆನಿ (edtech companies) ಶಾಲೆ (school) ಆರಂಭವಾದ ಬಳಿಕ ಬೇಡಿಕೆಯನ್ನು ಕಳೆದುಕೊಂಡಿದೆ. ಹೀಗಾಗಿ ಒಂದೊಂದೇ ಸಮಸ್ಯೆ ಎದುರಾಗುತ್ತಿದೆ.

ಹುಡುಗನ ಪ್ರತಿಭೆಗೆ ಗೂಗಲ್‌, FB, AMAZON ಫಿದಾ: ಕೋಟಿಗಿಂತಲೂ ಹೆಚ್ಚು ಸಂಬಳದ ಆಫರ್‌

ಬೈಜೂಸ್​ನಿಂದ ಪೂರ್ಣಾವಧಿ, ಗುತ್ತಿಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅದರಲ್ಲಿ ಟಾಪರ್, ವೈಟ್​ಹ್ಯಾಟ್ ಜೂನಿಯರ್​ನಲ್ಲಿಯ (whitehat junior) ಸಿಬ್ಬಂದಿಯೂ ಸೇರಿದ್ದಾರೆ ಎನ್ನಲಾಗಿದೆ. 

ಬೈಜೂಸ್ ನ ಕೋರ್ ಟೀಮ್​ ಮಾರಾಟ ಮತ್ತು ಮಾರ್ಕೆಟಿಂಗ್, ಆಪರೇಷನ್ಸ್, ಕಂಟೆಂಟ್ ಮತ್ತು ಡಿಸೈನ್​ ಟೀಮ್​ನಿಂದ ಉದ್ಯೋಗಿಗಳನ್ನು  ತೆಗೆದುಹಾಕಲಾಗಿದೆ.  ಕಳೆದ ಎರಡು ವರ್ಷಗಳಲ್ಲಿ ತನ್ನದಾಗಿಸಿಕೊಂಡ ಟಾಪರ್ ಮತ್ತು ವೈಟ್​ಹ್ಯಾಟ್ ಜೂನಿಯರ್​ನಿಂದ ಜೂನ್ 27 ಮತ್ತು 28ರಂದು  ಸುಮಾರು 1500 ಸಿಬ್ಬಂದಿಯನ್ನು ತೆಗೆಯಲಾಗಿದ್ದು, ಸುಮಾರು1000 ಮಂದಿಗೆ ಇ-ಮೇಲ್ ಕಳುಹಿಸಿ  ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

NEET 2022 ಪರೀಕ್ಷೆಯ ಸಿಟಿ ಸ್ಲಿಪ್‌ ಬಿಡುಗಡೆ, ಚೆಕ್ ಮಾಡುವುದು ಹೇಗೆ?

ಕಂಟೆಂಟ್ ಮತ್ತು ಡಿಸೈನ್ ತಂಡದ ಉದ್ಯೋಗಿಗಳಿಗೆ ಇದರಿಂದ ಹೊಡೆತ ಬಿದ್ದಿದೆ. ಟಾಪರ್ ಒಂದರಿಂದಲೇ 1200 ಮಂದಿ ಉದ್ಯೋಗಗಳನ್ನು ವಜಾ ಮಾಡಲಾಗಿದ್ದು, 300ರಿಂದ 350 ಕಾಯಂ ಉದ್ಯೋಗಿಗಳನ್ನು ಟಾಪರ್​ನಿಂದ ವಜಾ ಮಾಡಲಾಗಿದೆ. ಜೊತೆಗೆ 300 ಸಿಬ್ಬಂದಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.  ರಾಜೀನಾಮೆ ನೀಡದಿದ್ದರೆ ಒಂದು- ಒಂದೂವರೆ ತಿಂಗಳಿಗೆ  ವೇತನ ಕಡಿತಗೊಳಿಸಲಾಗುವುದು ಎಂದು ತಿಳಿಸಿರುವುದಾಗಿ ಕೇಳಿ ಬಂದಿದೆ. ಇನ್ನು 600 ಗುತ್ತಿಗೆ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಇವರ ಅವಧಿ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಪೂರ್ಣಗೊಳ್ಳಬೇಕಿತ್ತು ಎಂದು ವರದಿ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ ಬೈಜೂಸ್ 22 ಬಿಲಿಯನ್ ಯುಎಸ್​ಡಿ ಮೌಲ್ಯದಲ್ಲಿ 800 ಮಿಲಿಯನ್ ಡಾಲರ್ ಸಂಗ್ರಹ ಮಾಡಿತ್ತು. ಇದರ ಜೊತೆಗೆ ವಿದೇಶದಿಂದ 100 ಕೋಟಿ ಅಮೆರಿಕನ್ ಡಾಲರ್ ಹಣ ಸಾಲವಾಗಿ ಪಡೆಯುವ ಬಗ್ಗೆ ಮಾತುಕತೆ ನಡೆಸಿತ್ತು. 

ಫುಟ್‌ಪಾತ್‌ನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಿವಿಲ್ ಎಂಜಿನಿಯರ್

Byju's ತನ್ನದೇ ಅಂಗಸಂಸ್ಥೆಯಾದ Toppr ನ ಕಾರ್ಯಾಚರಣೆಗಳನ್ನು ತನ್ನೊಂದಿಗೆ ಸಂಯೋಜಿಸಲು ನೋಡುತ್ತಿದೆ. ಹೀಗಾಗಿ ಶಿಕ್ಷಕರನ್ನು  ಹೊರತುಪಡಿಸಿ ಉಳಿದ ಹುದ್ದೆಗಳು  ಅಗತ್ಯವಿಲ್ಲ, ಹೀಗಾಗಿ Toppr ನಲ್ಲಿ ಸುಮಾರು 100 ಉದ್ಯೋಗಿಗಳು ಮಾತ್ರ ಉಳಿದಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಪ್ರತಿಷ್ಠಿತ ಎಜುಟೆಕ್ ಕಂಪೆನಿಯ ಈ ನಿರ್ಧಾರದಿಂದ ಉದ್ಯೋಗಿಗಳು ಕಂಗಾಲಾಗಿದ್ದಾರೆ.

 

 

Follow Us:
Download App:
  • android
  • ios