2024-25 ನೇ ಸಾಲಿನ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಏಪ್ರಿಲ್ 15, 16 ಮತ್ತು 17ರಂದು ರಾಜ್ಯದಲ್ಲಿ ನಡೆದ CET ಪರೀಕ್ಷೆಯ ಫಲಿತಾಂಶವ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
ಬೆಂಗಳೂರು(ಮೇ.240 ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆ ಬರೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ. ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ಕೆಇಎ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಎಂಜಿನಿಯರಿಂಗ್
1. ಭವೇಶ್ ಜಯಂತಿ - ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
2. ಸಾತ್ವಿಕ್ ಬಿರಾದರ್- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಉತ್ತರಹಳ್ಳಿ
3. ದಿನೇಶ್ ಅರುಣಾಚಲಂ - ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಕೃಷಿ
1. ಅಕ್ಷಯ್ ಹೆಗ್ಡೆ - ಆಳ್ವಾಸ್ ಕಾಲೇಜ್ ಮುಡುಬಿದ್ರೆ
2. ಶಶಿ ಪಂಡಿತ್ - ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
3. ಸುಚಿತ್ ಪಿ. ಪ್ರಸಾದ್ - ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಪಶುಸಂಗೋಪನೆ
1. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ - NPS. ಎಚ್ಎಸ್ ಆರ್ ಲೇಔಟ್
3. ಸಫಲ್.ಎಸ್. ಶೆಟ್ಟಿ - ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಫಾರ್ಮ-ಡಿ
1. ಆತ್ರೇಯ - ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
2. ಭವೇಶ್ ಜಯಂತಿ - ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
3. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ
ನರ್ಸಿಂಗ್
1. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ - ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
3. ಸಫಲ್.ಎಸ್. ಶೆಟ್ಟಿ - ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಬಿ- ಫಾರ್ಮ್
1. ಆತ್ರೇಯ - ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
2. ಭವೇಶ್ ಜಯಂತಿ - ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
3. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ
ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ 2025)ರ ಫಲಿತಾಂಶ ಇಂದು ಪ್ರಕಟವಾಗಿದೆ. ಏಪ್ರಿಲ್ 15, 16 ಮತ್ತು 17ರಂದು ರಾಜ್ಯದಲ್ಲಿ ನಡೆದ CET ಪರೀಕ್ಷೆಯ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ CET ಫಲಿತಾಂಶ ಲಭ್ಯವಿರಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.
ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಹಾಗೂ ಫಲಿತಾಂಶ ಕುರಿತು ಮಾತನಾಡಿದ್ದಾರೆ. ಮೂರು ಲಕ್ಷ 30 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಹಾಕಿದ್ದರು. ಈ ಪೈಕಿ ಮೂರು ಲಕ್ಷದ 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಅಕ್ರಮ ತಡೆಯಲು ಈ ಭಾರಿ ಫೇಸ್ ರೆಗ್ನನೇಷನ್ ಬಳಕೆ ಮಾಡಲಾಗಿತ್ತು. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗಿದೆ. ಇನ್ನು ಭೌತಶಾಸ್ತ್ರ ವಿಷಯದಲ್ಲಿ ಒಂದು ಗ್ರೆಸ್ ಮಾರ್ಕ್ ಅಂಕ ಕೊಡಲಾಗಿದೆ ಎಂದಿದ್ದಾರೆ. ರಸಾಯನಶಾಸ್ತ್ರದಲ್ಲಿ ಎರಡು ಹಾಗೂ ಜೀವಶಾಸ್ತ್ರ ದಲ್ಲಿ ಒಂದು ಸರಿ ಉತ್ತರ ಕೊಡಲಾಗಿದೆ. ಇದೇ ಮೊದಲ ಭಾರಿಗೆ ಓಎಂಆರ್ ಶೀಟ್ ನ್ನ ವೆಬ್ ಸೈಟ್ ಗೆ ಅಪ್ಲೋಡ್ ಮಾಡಲಾಗಿತ್ತು ಎಂದಿದ್ದಾರೆ.
