ಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ ಭುಗಿಲೆದ್ದಿದೆ. ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಬೀದರ್‌ನಲ್ಲಿ ಜನಿವಾರ ಧರಿಸಿ ಬಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಈ ಘಟನೆಗೆ ಸಚಿವ ಮಧು ಬಂಗಾರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಇಎ ಕ್ಷಮೆ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ವಿದ್ಯಾರ್ಥಿಗೆ ಮರುಪರೀಕ್ಷೆ ಬಗ್ಗೆ ಚರ್ಚಿಸಲಾಗುವುದು.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಪ್ರಕರಣ ಒಂದಾದರೆ ಬೀದರ್ ನಲ್ಲಿ ಜನಿವಾರ ಹಾಕಿ ಬಂದ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶವನ್ನೇ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ರಾಜ್ಯದಲ್ಲಿ ಈಗ ಜನಿವಾರ ವಿವಾದ ಜೋರಾಗಿದೆ. ಸರ್ಕಾರದ ನಿಲುವುಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟವಾಡುತ್ತಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈ ತರ ಸೂಚನೆ ಏನೂ ಕೊಟ್ಟಿಲ್ಲ: ಮಧು ಬಂಗಾರಪ್ಪ
ಈ ನಡುವೆ ಜನಿವಾರ ಹಾಕಿದ್ದಕ್ಕೆ ಸಿಇಟಿ ಬರೆಯಲು ಅವಕಾಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಈ ತರ ಸೂಚನೆ ಏನೂ ಕೊಟ್ಟಿಲ್ಲ. ಘಟನೆಗೆ ಕಾರಣ ಆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ. ಪ್ರಕರಣ ಏಕೆ ಆಯ್ತು, ಯಾರು ಕಾರಣ ಅಂತ ತಿಳಿದು ಕ್ರಮ ತಗೆದುಕೊಳ್ತೇವೆ. ವಿದ್ಯಾರ್ಥಿಗೆ ಮರು ಪರೀಕ್ಷೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ವೈಯಕ್ತಿಕವಾಗಿ ಸಚಿವ ಎಂಸಿ ಸುಧಾಕರ್ ಜತೆಗೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಈ ಥರದ ನಿರ್ದೇಶನವನ್ನು ಯಾವುದೇ ಇಲಾಖೆಯಿಂದ ಕೊಡಲು ಅವಕಾಶ ಇಲ್ಲ. ಜನಿವಾರ ತೆಗೆಯೋ ಅವಕಾಶವೂ ಯಾವುದೇ ಕಾನೂನಿನಲ್ಲಿಲ್ಲ. ಆ ರೀತಿ ಏನಾದ್ರೂ ನಡೆದಿದ್ರೆ ಸಂಬಂಧಿಸಿದ ಇಲಾಖೆ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ.
ಈ ರೀತಿಯ ವಿಷಯಗಳು ಬಹಳ ಸೂಕ್ಷ್ಮ ಇರುತ್ತವೆ. ಜಾತಿ ಧರ್ಮಗಳಿಗೆ ನಾವು ಗೌರವ ಕೊಡಲೇ ಬೇಕಾಗುತ್ತದೆ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಮುಂದೇನು ಮಾಡಬೇಕೆಂದು ಚರ್ಚಿಸಿ ತೀರ್ಮಾನಿಸುತ್ತೇವೆ. ಒಬ್ಬರಿಗೆ ಪರೀಕ್ಷೆ ಬರೆಯೋದು ಮಿಸ್ ಆದ್ರೂ ಸರ್ಕಾರ ಆದೇಶ ಮಾಡಿ ಸರಿ ಮಾಡಬೇಕಾಗುತ್ತದೆ.
ಜನಿವಾರ ತೆಗೆಸಿದ ಪ್ರಕರಣ: 'ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ..; ಸಿಎಂ ವಿರುದ್ಧ ವಿಜಯೇಂದ್ರ ಕಿಡಿ
ಕ್ಷಮೆ ಕೇಳಿದ KEA ಕಾರ್ಯನಿರ್ವಾಹಕ ಪ್ರಸನ್ನ
ನ್ನು ಘಟನೆಗೆ ಸಂಬಂಧಿಸಿದಂತೆ KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಹೇಳಿಕೆ ನೀಡಿ,ಶಿವಮೊಗ್ಗದಲ್ಲಿ ಆಗಿರುವಂತ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ. ಭೌತ ಶಾಸ್ತ್ರ ಪರೀಕ್ಷೆ ಸಂಧರ್ಭದಲ್ಲಿ ಒಂದು ಪರೀಕ್ಷಾ ಕೆಂದ್ರದಲ್ಲಿ ಡ್ರೆಸ್ ಕೋಡ್ ಪರಿಶೀಲನೆ ವೇಳೆಸಿಬ್ಬಂಧಿಯಿಂದ ವಿಧ್ಯಾರ್ಥಿಗೆ ಜನಿವಾರ ತೆಗಿಬೇಕು ಅಂತ ಹೇಳಿದ್ದಾರೆ.ಈ ವೇಳೆ ವಿಧ್ಯಾರ್ಥಿ ಜನಿವಾರ ತೆಗೆಯಲ್ಲ ಅಂತ ಹೇಳಿದ್ದಾರೆ.ಅಲ್ಲಿನ ಪ್ರಾಂಶುಪಾಲರು ಬಂದು ಪರೀಶಿಲನೆ ನಡೆಸಿ ಜನಿವಾರ ತೆಗೆಯೋದು ಬೇಡ ಎಂದು ಕೈಯಲ್ಲಿರುವ ಕಾಶಿ ದಾರ ಕಟ್ ಮಾಡಿಸಿದ್ದಾರೆಎಂದು ವಿಧ್ಯಾರ್ಥಿ ಮಾವ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಮಗೂ ಅದೇ ಮಾಹಿತಿ ಸಿಕ್ಕಿದೆ.ಜನಿವಾರ ತೆಗೆಯಿರಿ ಎಂದಿದ್ದ ತಪ್ಪು ಪ್ರಾಧಿಕಾರ ಅದನ್ನು ಖಂಡಿಸುತ್ತೇವೆ.ಕೆಇಎ ಇಂದ ವಸ್ತ್ರಪ್ರಾಧಿಕಾರ ಏನು ಕೊಟ್ಟಿದ್ದೀವಿ ಅಲಗಲಿ ಜನಿವಾರ ತೆಗಿಬೇಕು ಅಂತ ಎಲ್ಲಿಯೂ ಹೇಳಿಲ್ಲ. ವಿಧ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ.ಆದರೆ ಬ್ರಾಹ್ಮಣ ಸಮಾಜ ವಿಧ್ಯಾರ್ಥಿ ಗೆ ಜನಿವಾರ ತೆಗಿ ಅಂತ ಮಾರ್ಗಸೂಚಿ ಹೇಳಬಾರದಿತ್ತು ಅಂದಿದ್ದಾರೆ.
ಜನಿವಾರ ತೆಗೆಯದ್ದಕ್ಕೆ ಸಿಇಟಿಯೇ ಇಲ್ಲ, ಬಿಇ ಕನಸು ನುಚ್ಚುನೂರು!
ಆದರೆ ನಾವು ಎಲ್ಲಿಯೂ ಈ ರೀತಿ ಮಾರ್ಗಸೂಚಿ ಹೊರಡಿಸಿಲ್ಲ. ಎಲ್ಲ ಡೈರೆಕ್ಷನ್ಸ್ ಜಿಲ್ಲಾಧಿಕಾರಿಗೆ ಸೂಚನೆ ಕೊಡ್ತೇವೆ. ಈ ರೀತಿ ಆಗಿರೋದು ತಪ್ಪ ನಾವೂ ಖಂಡಿಸುತ್ತೇವೆ ವಿಷಾದ ವ್ಯಕ್ತ ಪಡಿಸುತ್ತೇವೆ ಹಾಗೂ ಕ್ಷಮೆ ಕೂಡ ಕೇಳುತ್ತೇನೆ. ಎಲ್ಲಾ ಧರ್ಮದ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಸಮಾಜವನ್ನ ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆ ನಡೆಸಿಲ್ಲ. ಪಾರದರ್ಶಕವಾಗಿ ಪರೀಕ್ಷೆ ನಡೆಸಿದ್ದೇವೆ. ವಿಧ್ಯಾರ್ಥಿಗಳ ವಿಷಯದಲ್ಲಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ. ಜನಿವಾರ ತೆಗೆದು ಒಳಗೆ ಹೋಗಬೇಕು ಅಂತ ಹೇಳಿರೋದು ತಪ್ಪು. ಜಿಲ್ಲಾಧಿಕಾರಿಗಳು ತನಿಖಾವರದಿ ಸಿದ್ದಪಡಿಸುತ್ತಿದ್ದಾರೆ ಅವರ ವ್ಯಾಪ್ತಿಯಲ್ಲೆ ಕ್ರಮ ತೆಗೆದುಕೊಳ್ಳುತ್ತಾರೆ. ನಮ್ಮ ವ್ಯಾಪ್ತಿಗೆ ಬಂದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಬೇತಿ ಕೊಟ್ಟಿರುತ್ತೇವೆ. ಇದು ಸಿಬ್ಬಂಧಿಯಿಂದ ಆಗಿರೋದು ಕೆಲಸ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
ಬೀದರ್ ನಲ್ಲಿ ಶುಚಿರತ್ ಕುಲಕರ್ಣಿ ಗಣಿತ ಪರೀಕ್ಷೆ ಬರೆದಿಲ್ಲ ಅಂತ ಹೇಳಲಾಗುತ್ತಿದೆ. ಜನಿವಾರ ತೆಗಿಬೇಕು ಅಂತ ಹೇಳಿದ್ದಕ್ಕೆ ವಾದ ಪ್ರತಿವಾದ ಆಗಿ ಗಣಿತ ಬರೆದಿಲ್ಲ. ಆತ ವಾಪಸ್ ಹೋಗಿದ್ದಾನೆ ಮಧ್ಯಾಹ್ನ ಬಂದು ಬಯಾಲಜಿ ಎಕ್ಸಾಂ ಬರೆದಿದ್ದಾನೆ. ಮ್ಯಾತ್ಸ್ ಬರೆಯದೇ ಇದ್ದ ಕಾರಣ ಇಂಜಿನಿಯರ್ ಕೋರ್ಸ್ ಸಿಗಲ್ಲ. ಉಳಿದ ಕೋರ್ಸ್ ಸಿಗುತ್ತದೆ ಆದರೆ ಜಿಲ್ಲಾಧಿಕಾರಿಗಳ ವರದಿ ನಂತರ ಯಾರ ತಪ್ಪು ಎಂದು ಗಮನ ಹರಿಸಿ ಕ್ರಮ ಕೈಗೊಳ್ಳುವ ಹಾಗೂ ವಿಧ್ಯಾರ್ಥಿಗಡ ನ್ಯಾಯ ಕೊಡಿಸುವ ಕೆಲಸ ಆಗುತ್ತದೆ ಎಂದಿದ್ದಾರೆ.
