ಬಿಜೆಪಿ ಸರ್ಕಾರದಿಂದ ಕ್ರೈಸ್ತ ಸಂಸ್ಥೆಗಳ ಟಾರ್ಗೆಟ್: ಬೆಂಗಳೂರು ಬಿಷಪ್ ಆರೋಪ

ಬಿಜೆಪಿ ಸರ್ಕಾರ ಕ್ರೈಸ್ತ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪ ಮಾಡಿದ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೋ ಹೇಳಿಕೆ ಬಳಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕ್ರೈಸ್ತ ಮತೀಯರು ನಡೆಸುತ್ತಿರುವ ಶಾಲೆಗಳಲ್ಲಿ ಮತೀಯ ತರಗತಿಗಳಿಗೆ ಅವಕಾಶಗಳಿಲ್ಲ ಎಂದಿದ್ದಾರೆ.

Karnataka BJP government targeting Christian institutions allegation by Archbishop of Bangalore gow

ಮಂಗಳೂರು (ಎ.28): ಕ್ರೈಸ್ತ ಮತೀಯರು ನಡೆಸುತ್ತಿರುವ ಶಾಲೆಗಳಲ್ಲಿ ಮತೀಯ ತರಗತಿಗಳಿಗೆ ಅವಕಾಶಗಳಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ (Karnataka education minister BC Nagesh) ಹೇಳಿದ್ದಾರೆ. ಬಿಜೆಪಿ ಸರ್ಕಾರ ಕ್ರೈಸ್ತ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪ ಮಾಡಿದ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೋ (Peter Machado) ಅವರ ಹೇಳಿಕೆ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವರು, ಅಲ್ಪಸಂಖ್ಯಾತ ಸಂಸ್ಥೆಗಳಾಗಲೀ ಅಥವಾ ಬೇರೆ ಯಾವುದೇ ಶಿಕ್ಷಣ ಸಂಸ್ಥೆಗಳಾಗಿರಲಿ ಅಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯಡಿ (Karnataka Education Policy) ಜಾರಿಗೊಳಿಸಲಾಗಿರುವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. 

ಕ್ರೈಸ್ತ ಸಂಸ್ಥೆಗಳು ಒತ್ತಾಯಪೂರ್ವಕ ಮತಾಂತರ ಮಾಡುತ್ತಿವೆ ಎಂಬ ಕೇಸರಿ ಸಂಘಟನೆಗಳ ಆರೋಪವನ್ನು ಆರ್ಚ್ ಬಿಷಪ್ ನಿರಾಕರಿಸಿದ್ದಾರೆ. ಕ್ಲಾರೆನ್ಸ್ ಪ್ರೌಢಶಾಲೆಯ ವಿರುದ್ಧ ಮತಾಂತರದ ಆರೋಪ ಮಾಡುತ್ತಿರುವ ಹಿಂದೂ ಜಾಗೃತಿ ಸಮಿತಿಯ ಆರೋಪಗಳನ್ನು ಸುಳ್ಳು ಹಾಗೂ ದಾರಿ ತಪ್ಪಿಸುವ ಆರೋಪಗಳು ಎಂದು ಆರ್ಚ್ ಬಿಷಪ್ ಹೇಳಿದ್ದಾರೆ. ಆದಾಗ್ಯೂ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (National Commission for Protection of Child Rights) ನಿರ್ದೇಶನದ ಮೇರೆಗೆ ಕರ್ನಾಟಕ ಸರ್ಕಾರವು ಆರೋಪದ ಕುರಿತು ತನಿಖೆಗೆ ಆದೇಶಿಸಿದೆ.

BIG IMPACT: ಮಳೆಯಿಂದ ಕೊಚ್ಚಿಹೋಗಿದ್ದ ಶಾಲೆಗೆ ಮುಕ್ತಿ, ಸಂಭ್ರಮಿಸಿದ ಚಿಕ್ಕಮಗಳೂರು ಜನ

ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇಡಿ: ಕ್ರೈಸ್ತ ಶಿಕ್ಷಣ ಸಂಸ್ಥೆಗಳ (Christian Educational Institutions) ಮೇಲೆ ನಿಗಾ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌  ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಬಿಇಒಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸರ್ಕಾರದ ನೀತಿ-ನಿಯಮಗಳಿಗೆ ವಿರುದ್ಧವಾಗಿ ಪಠ್ಯಕ್ರಮಗಳಿದ್ದರೆ ಖಂಡಿತವಾಗಿಯೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದ ಕ್ಲಾರೆನ್ಸ್‌ ಶಾಲೆಯಲ್ಲಿ ಬೈಬಲ್‌ (Bibal) ಕಡ್ಡಾಯ ವಿಚಾರವು ರಾಜ್ಯ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ. ಕಾರಣ ಕೇಳಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಾಗಲೀ ಧಾರ್ಮಿಕ ಗ್ರಂಥಗಳ ಅಳವಡಿಕೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court

ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಧರ್ಮಗಳನ್ನು ಬೋಧನೆ ಮಾಡಬಾರದು ಎಂದು ಕಾಯ್ದೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೂ ಕ್ಲಾರೆನ್ಸ್‌ ಶಾಲೆಯಲ್ಲಿ ಕಡ್ಡಾಯವಾಗಿ ಬೈಬಲ್‌ ಓದಲೇಬೇಕು ಎಂದು ಸೂಚನೆ ನೀಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ಶಾಲಾ ಆಡಳಿತ ಮಂಡಳಿಯು ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವಾಗ ಬೈಬಲ್‌ ಓದಲು ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆ ಕೊಟ್ಟ ಬಳಿಕ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ. ಕ್ಲಾರೆನ್ಸ್‌ ಶಾಲೆಯು ಕೇಂದ್ರೀಯ ಪಠ್ಯಕ್ರಮ ವ್ಯಾಪ್ತಿಗೆ ಬರುತ್ತದೆ. ಯಾವುದೇ ಪಠ್ಯಕ್ರಮ ವ್ಯಾಪ್ತಿಯ ಅಲ್ಪಸಂಖ್ಯಾತರ ಶಾಲೆಯಲ್ಲಿ ಧರ್ಮದ ಬೋಧನೆ ನಿಷೇಧಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಯು ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದ ಅವರು, ಬೇರೆ ಸಂದರ್ಭದಲ್ಲಿ ಮಾತನಾಡುವ ಪ್ರತಿಪಕ್ಷಗಳು ಈಗ ಏಕೆ ಮಾತನಾಡುವುದಿಲ್ಲ? ಟಿಪ್ಪು, ಹಿಜಾಬ್‌ ವಿಚಾರಕ್ಕೆ ಮಾತನಾಡುವವರು ಬೈಬಲ್‌ ವಿಷಯದಲ್ಲಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.   

Latest Videos
Follow Us:
Download App:
  • android
  • ios