Big Impact: ಮಳೆಯಿಂದ ಕೊಚ್ಚಿಹೋಗಿದ್ದ ಶಾಲೆಗೆ ಮುಕ್ತಿ, ಸಂಭ್ರಮಿಸಿದ ಚಿಕ್ಕಮಗಳೂರು ಜನ

  • ಮಹಾ ಮಳೆಯಿಂದ ಕೊಚ್ಚಿ ಹೋಗಿ ತಾತ್ಕಲಿಕ ಶೆಡ್ ನಲ್ಲಿ ನಡೆಯುತ್ತಿದ್ದ  ಶಾಲೆಗೆ ಮುಕ್ತಿ
  • ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ ತ್ರಿ ವರದಿ ಪ್ರಸಾರ 
  • 33 ಲಕ್ಷದಲ್ಲಿ 1ರಿಂದ 5ನೇ ತರಗತಿಯ ಕಟ್ಟಡ, 16 ಲಕ್ಷದಲ್ಲಿ ಅಂಗನವಾಡಿ ಕಟ್ಟಡ
  • ವರದಿ ಪ್ರಸಾರ ಬಳಿಕ ಜಾಗ ಮುಂಜೂರಾಗಿ ಕಟ್ಟಡ ಕಾಮಗಾರಿಯೂ ಮುಕ್ತಾಯ 
After  Suvarna news big impact  Chikmagaluru  Balur horatti Government school Completion of new building works

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.27): ಆ ಮಕ್ಕಳು ತಾತ್ಕಲಿಕ ಶೆಡ್ ನಲ್ಲಿ ಪಾಠ ಕೇಳುತ್ತಿದ್ದರು,ಅದೇ ಶೆಡ್ ನಲ್ಲಿ ಅಂಗವಾಡಿ ಮಕ್ಕಳಿಗೆ ಆಶ್ರಯ,ಈ ಅವ್ಯವಸ್ಥೆಯ ಬಗ್ಗೆ ಅರಿವು ಇದ್ದರೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ..ಇದಕ್ಕೆ ಕಾರಣವಾಗಿದ್ದು 2019ರ ಮಹಾಮಳೆ. ಮಳೆಯಿಂದ ಶಾಲೆಯ ಕಟ್ಟಡ ಕೊಚ್ಚಿ ಹೋಗಿತ್ತು. ಇದರ ಪರಿಣಾಮ ಮಕ್ಕಳಿಗೆ ತಾತ್ಕಲಿಕ ಶೆಡ್ ಆಶ್ರಯವಾಗಿತ್ತು. ಈ ಬಗ್ಗೆ ಯಾವಾಗ ಬಿಗ್ ತ್ರಿ ವರದಿ ಪ್ರಸಾರ ಮಾಡಿತು. ಸರ್ಕಾರಿ ಭೂಮಿ ಮಂಜೂರಾಗಿ, ಕಟ್ಟಡ ಕಾಮಗಾರಿ ಮುಕ್ತಾಯವಾಗಿ ನೂತನ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳ್ತಾದ್ದಾರೆ. ಇದು ಬಿಗ್ ತ್ರಿ ಬುಲೆಟ್ ನ ತಾಕತ್ತು.

ಬಿಗ್ ತ್ರಿ ಬಳಿಕ ತಲೆಎತ್ತಿ ನಿಂತ ಶಾಲೆ: ಜನಪ್ರತಿನಿಧಿಗಳು, ಸರ್ಕಾರದ ನಿರ್ಲಕ್ಷ್ಯ ಮಲೆನಾಡಿನ ಜನರು ಇಡೀ ಶಾಪ ಹಾಕುತ್ತಿದ್ದರು, .2019ರಲ್ಲಿ ಸುರಿದ ಮಳೆ ಮಲೆನಾಡಿನ ಜನರ ಬದುಕೇ ತಲ್ಲಣಗೊಳಿಸಿತ್ತು. ಮಕ್ಕಳ ಉಜ್ವಲಭವಿಷ್ಯವನ್ನು ರೂಪಿಸುವ ಕಟ್ಟಡ ಮಳೆಯಿಂದ ನೆಲಸಮವಾಗಿ 9 ತಿಂಗಳು ಕಳೆದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದರು. ಇದರಿಂದ ತಾತ್ಕಲಿಕ  ಶೆಡ್ನಲ್ಲಿ  ಶಾಲೆಯನ್ನು ನಡೆಸುವ ದುಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊರಟ್ಟಿ ಗ್ರಾಮದಲ್ಲಿ ನಿರ್ಮಾಣವಾಗಿತ್ತು.

ಈ ಬಗ್ಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ ನ ಬಿಗ್ ತ್ರಿ ಯಲ್ಲಿ ಶಾಲೆಯ ದುಸ್ಥಿತಿ ಬಗ್ಗೆ ಸಮಗ್ರ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬೆನ್ನೆಲ್ಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸದಸನದಲ್ಲಿ ಧ್ವನಿ ಎತ್ತಿದ್ದರು. ಅಲ್ಲದೆ ಖುದ್ದು ಸ್ಥಳಕ್ಕೆ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರೀಶಿಲನೆ ನಡೆಸಿ ಅನುದಾನವನ್ನು ಕೂಡ ಬಿಡುಗಡೆ ಮಾಡಿದ್ದರು. ಅಲ್ಲದೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿದ್ದರು. ಇಂದು ಬಾಳೂರು ಹೊರಟ್ಟಿ ಯ ಶಾಲೆಯ ಕಟ್ಟಡ ತಲೆಎತ್ತಿ ನಿಂತಿದೆ.

After  Suvarna news big impact  Chikmagaluru  Balur horatti Government school Completion of new building works

ಬಿಗ್ ತ್ರಿಗೆ  ಗ್ರಾಮಸ್ಥರಿಂದ ಅಭಿನಂದನೆ: 2020ರ ಫೆಬ್ರವರಿಯಲ್ಲಿ ಈ ಶಾಲೆಯ ದುಸ್ಥಿತಿ ಬಗ್ಗೆ ವರದಿ ಪ್ರಸಾರವಾಯಿತು. ಪ್ರಸಾರವಾದ ತಕ್ಷಣ ಜಾಗ ಮಂಜೂರಾಗಿ ಕಟ್ಟಡದ ಕಾಮಗಾರಿಯೂ ಭರದಿಂದ ನಡೆಯಿತು. ಕೋವಿಡ್ ನ ಕಾರಣ ಕಾರ್ಮಿಕರ ಸಮಸ್ಯೆ ಎದುರಾದ್ರೂ ಕೆಲಸ ನಿಲ್ಲಿಸಿದೇ ತ್ವರಿತವಾಗಿ ಕಾಮಗಾರಿಯನ್ನು ಮುಕ್ತಾಯ ಮಾಡಲಾಯಿತು. 33ಲಕ್ಷದಲ್ಲಿ 1ರಿಂದ 5ನೇ ತರಗತಿಯ ಕಟ್ಟಡ, 16 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ.  ಕಳೆದ 4ವರ್ಷಗಳ ಹಿಂದೆ ಅತಿವೃಷ್ಟಿಯಿಂದಈ ಶಾಲೆಯ ಕಟ್ಟಡ ಮಣ್ಣುನಲ್ಲಿ ಮಣ್ಣಾಗಿತ್ತು. ಈ ಬಗ್ಗೆ ಬಿಗ್ ತ್ರಿಯಲ್ಲಿ ವರದಿ ಪ್ರಸಾರವಾದ ಬಳಿಕ ಸರ್ಕಾರಿ ಜಾಗ, ಅನುದಾನ ಬಿಡುಗೆಡೆಯಾಗಿ ಕಾಮಗಾರಿ ನಡೆದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ನ ಕಾರ್ಯಕ್ಕೆ ಗ್ರಾಮಸ್ಥರು, ಮಕ್ಕಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ನೂತನ ಶಾಲೆಗೆ ಹಸಿರು ತೋರಣ ಕಟ್ಟಿ ಸಂಭ್ರಮಿಸಿದ ಜನರು: ಬಿಗ್ ತ್ರಿ ವರದಿ ಪ್ರಸಾರವಾಗುತ್ತಿದೆ ಎನ್ನುವ ಸುದ್ದಿ ತಿಳದಿ ಗ್ರಾಮಸ್ಥರು ನೂತನ ಶಾಲೆಗೆ ಹಸಿರು ತೋರಣ ಕಟ್ಟಿ ಸಂಭ್ರಮಿಸಿದರು . ಅಲ್ಲದೆ ಶಾಲೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಬಿಗ್ ತ್ರಿ ವರದಿ ಪ್ರಸಾರವಾದ ಕಾರಣ ಜಾಗವನ್ನು ನೋಡಿ ಭವ್ಯವಾದ ಕಟ್ಟಡ ನಿರ್ಮಾಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿಗೆ ಅಭಿನಂದನೆಗಳನ್ನು ಹೇಳಿದರು. 

ಬಿಗ್ ತ್ರಿ ಪವರ್ : ಶಾಲಾ ಸಮಸ್ಯೆಗೆ ಮುಕ್ತಿ 
ಮಳೆಯಿಂದ ಶಾಲೆ ನೆಲಸಮ ಆದ ಸಮಯದಲ್ಲಿ ಜಿಲ್ಲಾಡಳಿತ , ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಈ ಶಾಲೆ ಸಾಕ್ಷಿ ಆಗಿತ್ತು. ಯಾವಾಗ ಬಿಗ್ ತ್ರಿ ವರದಿ ಪ್ರಸಾರ ಮಾಡಿತೋ ಅಧಿಕಾರಿಗಳು ಎಚ್ಚೇತುಗೊಂಡು ಕೆಲಸ ಆರಂಭಿಸಿದ್ರು. ಇದರ ಫಲ ಇಂದು ನೂತನ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಧ್ವನಿ ಇಲ್ಲದ ಜನರ ಧ್ವನಿಯಾಗಿ ಬಿಗ್ ತ್ರಿ ಹೇಗೆ ಕೆಲಸ ಮಾಡುತ್ತೆ ಎನ್ನುವುದುಕ್ಕೆ ಇದು ಒಂದು ತಾಜಾ ನಿದೇರ್ಶನವಾಗಿದೆ.

Latest Videos
Follow Us:
Download App:
  • android
  • ios