Asianet Suvarna News Asianet Suvarna News

ಸುಳ್ಯದಲ್ಲಿ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಪಾಸಾದ ತಾಯಿ ಮಗಳು!

ಸುಳ್ಯದ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ. ಸುಳ್ಯ ಜಯನಗರದ ರಮೇಶ್‌ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು.

Karnataka 2nd PUC Rsult 2023 Mother and daughter passed the PUC exam together in Sullia gvd
Author
First Published Apr 22, 2023, 11:49 AM IST

ಸುಳ್ಯ (ಏ.22): ಸುಳ್ಯದ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಫಲಿತಾಂಶಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಾಕ್ಷಿಯಾಗಿದೆ. ಸುಳ್ಯ ಜಯನಗರದ ರಮೇಶ್‌ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ. ಮಗಳು ತೃಷಾ ಸುಳ್ಯದ ಜೂನಿಯರ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. 

25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್‌ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್‌ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯ, ಮನೆಗೆಲಸದ ಬಿಡುವಿನ ವೇಳೆ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

ಕೊರೋನಾ ಬ್ಯಾಚ್‌ ಎಂದಿದ್ದವರಿಗೆ ರಾಜ್ಯಕ್ಕೆ 2ನೇ ರ್ಯಾಂಕ್‌ ಪಡೆದು ಸಾತ್ವಿಕ್ ಉತ್ತರ!

ಕೂಲಿ ಕಾರ್ಮಿಕ, ಬಡಗಿ ಮಕ್ಕಳು ಫಸ್ಟ್‌ಕ್ಲಾಸ್‌: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 33 ಮಂದಿ, ಕಲಾ ವಿಭಾಗದಲ್ಲಿ 9 ಮಂದಿ ಮತ್ತು ವಿಜ್ಞಾನ ವಿಭಾ ಗದಲ್ಲಿ 19 ಮಂದಿ ಉತ್ತೀರ್ಣರಾಗಿದ್ದು, ಇದೇ ಕಾಲೇಜಿನ ವಿದ್ಯಾರ್ಥಿನಿ ಚಾಂದನಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 562 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಮತ್ತಿಕಾಡು ಕೃಷ್ಣತೋಟದಲ್ಲಿ ಕೂಲಿ ಕಾರ್ಮಿಕರಾಗಿರುವ ಮೂಲತಃ ಚಾಮರಾಜನಗರ ನಿವಾಸಿಯಾದ ಮಹದೇವ ನಾಯಕ- ಮಹದೇವಮ್ಮ ದಂಪತಿ ಪುತ್ರಿಯಾಗಿದ್ದು, ಕುಟುಂಬದ ಬೆನ್ನಿಗಂಟಿದ ಬಡತನವನ್ನು ಲೆಕ್ಕಿಸದೆ ಚಾಂದನಿ ಅತ್ಯುನ್ನತ ಅಂಕ ಪಡೆದು ಪೋಷಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ನಿತ್ಯ 50 ಕಿ.ಮೀ. ಪ್ರಯಾಣಿಸಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ನಂ.2 ಸ್ಥಾನ ಪಡೆದ ಕೃಷಿ ಕಾರ್ಮಿಕನ ಪುತ್ರಿ!

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ತಂದೆ ಮಹದೇವ ನಾಯಕ್‌ ಪುತ್ರಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಓದಿನಲ್ಲಿ ಮುಂದಿರುವ ಮಗಳು ಚಾಂದನಿ ಉತ್ತ ಮ ಅಂಕ ಗಳಿಸಿರುವುದಕ್ಕೆ ಸಂತಸವಾಗುತ್ತಿದೆ ಎಂದರು. ಇನ್ನು, ಇದೇ ಕಾಲೇಜಿನ ಆರ್ಯ ಎಂಬ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 561ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಇವರು ನರೇಂದ್ರ ಮತ್ತು ಹರೀಣಾಕ್ಷಿ ದಂಪತಿ ಪುತ್ರಿಯಾಗಿದ್ದು, ಸೋಮವಾರಪೇಟೆ ನಿವಾಸಿಯಾಗಿರುವ ನರೇಂದ್ರ ಅವರು ಬಡಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಆರ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಸಿದ್ಧತೆಗಳನ್ನು ಮಾಡಿಕೊಂಡು ಐಎಎಸ್‌ ಅಧಿಕಾರಿಯಾ ಗಬೇಕೆಂಬ ಆಶಯ ವ್ಯಕ್ತಪಡಿಸಿದರು.

Follow Us:
Download App:
  • android
  • ios