ಕೊರೋನಾ ಬ್ಯಾಚ್ ಎಂದಿದ್ದವರಿಗೆ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಸಾತ್ವಿಕ್ ಉತ್ತರ!
ಎಸ್‌ಎಸ್‌ಎಲ್‌ಸಿಯಲ್ಲಿ 625 ಪೂರ್ಣಾಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದ ಸಾತ್ವಿಕ್ ಭಟ್, ಕೊರೋನಾ ಕಾರಣಕ್ಕೆ ಪೂರ್ಣಾಂಕ ನೀಡಿದ್ದಾರೆ ಎಂದು ಕೆಲವರು ಕೊಂಕು ನುಡಿದಿದ್ದರಂತೆ. ಆದರೆ ಅದನ್ನು ಸುಳ್ಳು ಮಾಡುವಂತೆ ತಂದೆ ತಾಯಿ ಹೇಳಿದ್ದರು.
ಉಡುಪಿ (ಏ.22): ಎಸ್‌ಎಸ್‌ಎಲ್‌ಸಿಯಲ್ಲಿ 625 ಪೂರ್ಣಾಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದ ಸಾತ್ವಿಕ್ ಭಟ್, ಕೊರೋನಾ ಕಾರಣಕ್ಕೆ ಪೂರ್ಣಾಂಕ ನೀಡಿದ್ದಾರೆ ಎಂದು ಕೆಲವರು ಕೊಂಕು ನುಡಿದಿದ್ದರಂತೆ. ಆದರೆ ಅದನ್ನು ಸುಳ್ಳು ಮಾಡುವಂತೆ ತಂದೆ ತಾಯಿ ಹೇಳಿದ್ದರು. ಅದರಂತೆ ರಾಜ್ಯಕ್ಕೆ 2ನೇ ಟಾಪರ್ ಆಗಿದ್ದೇನೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ. ಉಡುಪಿಯ ಕೊಡವೂರು ಗ್ರಾಮದ ನಿವಾಸಿ, ಇಲ್ಲಿನ ಎಂಜಿಎಂ ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ಸಾತ್ವಿಕ್ ಭಟ್ 595 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ಟಾಪರ್ ಆಗಿದ್ದಾರೆ.
ಅವರು ಗಣಿತ, ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರಗಳಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಭೌತಶಾಸ್ತ್ರದಲ್ಲಿ 99, ಇಂಗ್ಲಿಷ್ ಮತ್ತು ಹಿಂದಿಯಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. ತಂದೆ ಶಶಿಕುಮಾರ್, ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು. ತಾಯಿ ತ್ರಿವೇಣಿ ಅಂಚೆ ಇಲಾಖೆಯ ಉದ್ಯೋಗಿ, ಎಂಎಸ್ಸಿ ಮಾಡುತ್ತಿರುವ ಅಕ್ಕ ಶರಣ್ಯಾ ಅವರ ಪ್ರೋತ್ಸಾಹವೇ ತನ್ನ ಈ ಸಾಧನೆಗೆ ಕಾರಣ ಎನ್ನುತ್ತಾನೆ ಸಾತ್ವಿಕ್.
ನಿತ್ಯ 50 ಕಿ.ಮೀ. ಪ್ರಯಾಣಿಸಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ನಂ.2 ಸ್ಥಾನ ಪಡೆದ ಕೃಷಿ ಕಾರ್ಮಿಕನ ಪುತ್ರಿ!
ಕೊರೋನಾ ಕಾಲದ ಆನ್‌ಲೈನ್ ತರಗತಿಗಳು ಪಾಠಗಳನ್ನು ಸರಿಯಾಗಿ ಮನನ ಮಾಡಲಿಕ್ಕೆ ತನಗೆ ಸಾಕಷ್ಟುಸಮಯ ನೀಡಿತು. ಜೊತೆಗೆ ಕೋಚಿಂಗ್ ಹೋಗುತ್ತಿದ್ದೆ. ಮುಂದೆ ಕಂಪ್ಯೂಟರ್ ಎಂಜಿನಿಯರಿಂಗ್ ಮಾಡುವ ಆಸೆ ಇದೆ ಎಂದು ತಿಳಿಸಿದ್ದಾನೆ. ಪಾಠಗಳ ಜೊತೆಗೆ ಸಂಗೀತದಲ್ಲಿ ಅಭಿರುಚಿ ಇರುವ ಸಾತ್ವಿಕ್ ಈಗಾಗಲೇ ಜ್ಯೂನಿಯರ್ ಪರೀಕ್ಷೆ ಪಾಸಾಗಿದ್ದಾರೆ. ಯಕ್ಷಗಾನ ಕಲಿತಿದ್ದು ಅದರಲ್ಲಿಯೂ ಅಭಿರುಚಿ ಇದೆ ಎನ್ನುತ್ತಾರೆ.
ಕೋಚಿಂಗ್ ಇಲ್ಲದೇ ಟಾಪರ್ ಆದ ಜೆಸ್ವಿತಾ: ಗಣಿತ, ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಜೆಸ್ವಿತಾ ಡಯಾಸ್ ರಾಜ್ಯಕ್ಕೆ 2ನೇ ಟಾಪರ್ ಆಗಿದ್ದಾರೆ. ಆದರೆ ಆಕೆ ಈ ಸಾಧನೆಗಾಗಿ ಯಾವುದೇ ರೀತಿಯ ಕೋಚಿಂಗ್ ಅಥವಾ ಟ್ಯೂಷನ್‌ಗಳಿಗೆ ಹೋಗಿದ್ದಿಲ್ಲ! ಉಡುಪಿ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜೆಸ್ವಿತಾ, ಭೌತಶಾಸ್ತ್ರದಲ್ಲಿ 99 ಮತ್ತು ಇಂಗ್ಲಿಷ್‌ನಲ್ಲಿ 97 ಅಂಕಗಳನ್ನು ಪಡೆದು ಒಟ್ಟು 595 ಅಂಕಗಳನ್ನು ಗಳಿಸಿದ್ದಾಳೆ.
ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಬೆಣ್ಣೆಕುದ್ರುವಿನ ಜೆಸ್ವಿತಾ ಅವರ ತಂದೆ ಜೇಮ್ಸ್ ಡಯಾಸ್ ಕುಂಜಾಲು ವಿ.ಕೆ.ಆರ್. ಆಚಾರ್ಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ತಾಯಿ ಹೆಲೆನ್ ಶಾಲೆಟ್ ಬಿದ್ಕಲ್‌ಕಟ್ಟೆಕೆ.ಪಿ.ಎಸ್. ಹೈಸ್ಕೂಲಿನ ಆಂಗ್ಲ ಭಾಷಾ ಶಿಕ್ಷಕಿ. ಪರೀಕ್ಷೆಯ ನಂತರ ಸ್ವಯಂ ಮೌಲ್ಯಮಾಪನಮಾಡಿಕೊಂಡಿದ್ದ ಜೆಸ್ವಿತಾ 585 ಅಂಕಗಳನ್ನು ನಿರೀಕ್ಷಿಸಿದ್ದರು. ಆದರೆ ಅದಕ್ಕೂ 10 ಅಂಕ ಜಾಸ್ತಿ ಸಿಕ್ಕಿದೆ. ತುಂಬಾ ಖುಷಿ ಆಗಿದೆ ಎನ್ನುತ್ತಾರೆ.
ದೇವರು ಮೆಚ್ಚುವ ಹಾಗೆ ಸೋಮಣ್ಣ ಗೆಲುವಿಗೆ ಶ್ರಮಿಸುವೆ: ಬಿ.ವೈ.ವಿಜಯೇಂದ್ರ
ಗಣಿತ ವಿಷಯ ಇಷ್ಟ ಎನ್ನುವ ಜೆಸ್ವಿತಾ, ನನ್ನ ತಂದೆ ತಾಯಿ ಇಬ್ಬರೂ ಶಿಕ್ಷಕರಾದ್ದರಿಂದ ಹೇಗೆ ಓದಬೇಕು, ಹೇಗೆ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದ್ದರು. ಪ್ರತಿದಿನ ನಾನೇ ಸ್ವಯಂ ಅಧ್ಯಯನ ಮಾಡುತ್ತಿದ್ದೆ ಎನ್ನುತ್ತಾರೆ. ಸಿಇಟಿ ಬರೆಯುತ್ತಿದ್ದೇನೆ, ಎಂಜಿನಿಯರಿಂಗ್ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ. ಹಾಡುವುದು ಇಷ್ಟ, ಕವನ, ಲೇಖನ ಬರೆದಿದ್ದೇನೆ, ಗಣಿತ ಒಲಿಂಪಿಯಾಡ್, ಕ್ವಿಝ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದೇನೆ ಎಂದವರು ಹೇಳಿದ್ದಾರೆ.